ಬಾಲಿವುಡ್‌ ನಟಿ ನುಸ್ರತ್‌ ಬರುಚಾ ಅವರು Haifa International Film Festivalನ 39ನೇ ಸಿನಿಮೋತ್ಸವದಲ್ಲಿ ಭಾಗವಹಿಸಲು ಇಸ್ರೇಲ್​​ಗೆ ತೆರಳಿದ್ದರು. ಈ ವೇಳೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ನಡುವಿನ ಮನಸ್ತಾಪ ಬಿಗಡಾಯಿಸಿ ಯುದ್ಧ ಶುರುವಾಯ್ತು. ಇಸ್ರೇಲ್‌ನಲ್ಲಿನ ಭಾರತ ರಾಯಭಾರ ಕಚೇರಿಯು ನಟಿಯನ್ನು ಸುರಕ್ಷಿತವಾಗಿ ಮುಂಬೈಗೆ ಕಳುಹಿಸಿದೆ.

ಇಸ್ರೇಲ್‌ನಲ್ಲಿ ಸಿಲುಕಿದ್ದ ಬಾಲಿವುಡ್‌ ನಟಿ ನುಸ್ರತ್‌ ಬರುಚಾ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಹಮಾಸ್‌ ಉಗ್ರರ ದಾಳಿಯಿಂದ ಇಸ್ರೇಲ್ ತತ್ತರಿಸಿದ್ದು, ಅಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ನಟಿ ನುಸ್ರತ್‌ ಬರುಚಾ Haifa International Film Festivalನ 39ನೇ ಸಿನಿಮೋತ್ಸವದಲ್ಲಿ ಭಾಗವಹಿಸಲು ಇಸ್ರೇಲ್​​ಗೆ ಹೋಗಿದ್ದರು. ಈ ಮಧ್ಯೆ ಧಾಳಿ ಸಂಭವಿಸಿದೆ. ಇಸ್ರೇಲ್‌ನಲ್ಲಿ ಪರಿಸ್ಥಿತಿ ತೀವ್ರರೂಪ ಪಡೆದಿದೆ. ದಾಳಿ ವೇಳೆ ನುಸ್ರತ್‌ ಅವರಿಗೆ ದೂರವಾಣಿ ಸಂಪರ್ಕ ಕಡಿತಗೊಂಡಿತ್ತು. ತಮ್ಮ ಜೀವ ಉಳಿಸಿಕೊಳ್ಳಲು ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಅಡಗಿ ಕೂತಿದ್ದರು. ಕೆಲ ಗಂಟೆಗಳ ಬಳಿಕ ಸಂಪರ್ಕಕ್ಕೆ ಸಿಕ್ಕ ಅವರನ್ನು ತಕ್ಷಣ ಇಸ್ರೇಲ್‌ನಲ್ಲಿನ ಭಾರತ ರಾಯಭಾರ ಕಚೇರಿಯು ಸಂಪರ್ಕಿಸಿ ಸುರಕ್ಷಿತವಾಗಿ ಮುಂಬೈಗೆ ಕಳುಹಿಸಿದೆ.

ನುಸ್ರತ್‌ ಅವರು ಪ್ರಣಯ್ ಮೆಶ್ರಾಮ್ ನಿರ್ದೇಶನದ ಥ್ರಿಲ್ಲರ್ ಡ್ರಾಮಾ ‘ಅಕೆಲ್ಲಿ’ಯಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದರು. ‘ಛೋರಿ 2’ ಹಾರರ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ವರ್ಷಗಳಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್‌ ನಡುವೆ ನಡೆಯುತ್ತಿದ್ದ ಜಗಳ ಈಗ ಯುದ್ದವಾಗಿ ಮಾರ್ಪಾಡಾಗಿದ್ದು, ಶನಿವಾರ (ಅ.7) ಬೆಳಗ್ಗೆ ಇಸ್ರೇಲ್‌ ಮೇಲೆ ಹಮಾಸ್‌ ದೇಶವು ರಾಕೆಟ್‌ಗಳ ಸುರಿಮಳೆ ಸುರಿಸಿ ಅಲ್ಲಿನ ಹಲವರನ್ನು ಅಪಹರಿಸಿದೆ. ಇದಕ್ಕೆ ತಿರುಗೇಟು ನೀಡಿದ ಇಸ್ರೇಲ್‌ ಸೈನ್ಯ ಪ್ರತಿದಾಳಿ ನಡೆಸಿತು. ಭಾನುವಾರವೂ ಆ ದಾಳಿ ತೀವ್ರಗೊಂಡಿತ್ತು. ಇಸ್ರೇಲ್‌ ಸೈನಿಕರನ್ನು ಹಮಾನ್‌ ಉಗ್ರರು ಮನಬಂದಂತೆ ಹತ್ಯೆಮಾಡಿ ಅವರ ಶವಗಳನ್ನು ಎಳೆದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

LEAVE A REPLY

Connect with

Please enter your comment!
Please enter your name here