The Academy of Motion Picture Arts and Science’ ಸಂಸ್ಥೆಯು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್ಗಳನ್ನು ಸಂಗ್ರಹಿಸಿ, ಲೈಬ್ರರಿಯಲ್ಲಿ ಇಡುತ್ತದೆ. ಅಂಥ ಚಿತ್ರಗಳ ಸಾಲಿಗೆ ‘ದಿ ವ್ಯಾಕ್ಸಿನ್ ವಾರ್’ ಕೂಡ ಸೇರಿರುವುದು ವಿಶೇಷ. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಆಸ್ಕರ್ ಕಡೆಯಿಂದ ವಿಶೇಷ ಮನ್ನಣೆ ಸಿಕ್ಕಿದೆ. The Academy of Motion Picture Arts and Science’ ಸಂಸ್ಥೆಯು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್ಗಳನ್ನು ಸಂಗ್ರಹಿಸಿ, ಲೈಬ್ರರಿಯಲ್ಲಿ ಇಡುತ್ತದೆ. ಅಂಥ ಚಿತ್ರಗಳ ಸಾಲಿಗೆ ‘ದಿ ವ್ಯಾಕ್ಸಿನ್ ವಾರ್’ ಕೂಡ ಸೇರಿರುವುದು ವಿಶೇಷ. ಈ ಸುದ್ದಿಯನ್ನು ಹಂಚಿಕೊಂಡು ನಿರ್ದೇಶಕರು ಸಂಭ್ರಮಿಸಿದ್ದಾರೆ. ಈ ವಿಷಯವನ್ನು ತಮ್ಮ X (Twitter)ನಲ್ಲಿ ಹಂಚಿಕೊಂಡಿರುವ ನಿರ್ದೇಶಕರು. ‘ದಿ ವ್ಯಾಕ್ಸಿನ್ ವಾರ್’ A True Storyಯ ಸ್ಕ್ರಿಪ್ಟ್ ಅನ್ನು Oscarsನ ಲೈಬ್ರರಿಯಿಂದ ‘ಅಕಾಡೆಮಿ ಸಂಗ್ರಹ’ಗಳಿಗೆ ಆಹ್ವಾನಿಸಿ ಸ್ವೀಕರಿಸಲಾಗಿದೆ. ಇದಕ್ಕಾಗಿ ನಾನು ಹೆಮ್ಮೆಪಡುತ್ತೇನೆ. ನೂರಾರು ವರ್ಷಗಳ ಕಾಲ ಹೆಚ್ಚು ಹೆಚ್ಚು ಜನರು ಈ ಸಾಧಕರ ಕತೆಯನ್ನುಓದುತ್ತಾರೆ ಎಂಬುದು ನನಗೆ ಸಂತಸ ತಂದಿದೆʼ ಎಂದು ಬರೆದುಕೊಂಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಳಿಕ ದೇಶಾದ್ಯಂತ ವಿವೇಕ್ ಅಗ್ನಿಹೋತ್ರಿ ಅವರು ಜನಪ್ರಿಯತೆ ಪಡೆದರು. ಆ ಸಿನಿಮಾದ ದೊಡ್ಡ ಗೆಲುವಿನ ಬಳಿಕ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೈಗೆತ್ತಿಕೊಂಡಿದ್ದರಿಂದ ಭಾರಿ ನಿರೀಕ್ಷೆ ಸೃಷ್ಟಿ ಆಗಿತ್ತು. 2022ರಲ್ಲಿ ಬಿಡುಗಡೆಯಾಗಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ 252 ಕೋಟಿ ರೂಪಾಯಿ ಗಳಿಸಿತು. 2023ರಲ್ಲಿ ತೆರೆಕಂಡ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ 5.50 ಕೋಟಿ ರೂಪಾಯಿ ಗಳಿಸಿದೆ. ಸೆಪ್ಟೆಂಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
https://x.com/vivekagnihotri/status/1712310102328532993?s=20