ತಬು ಮುಖ್ಯಪಾತ್ರದಲ್ಲಿ ನಟಿಸಿರುವ ‘ಖೂಫಿಯಾ’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವಿಶಾಲ್‌ ಭಾರದ್ವಾಜ್‌ ನಿರ್ದೇಶನದ ಸಿನಿಮಾ ಅಕ್ಟೋಬರ್ 5ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಖೂಫಿಯಾ’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಪತ್ತೇದಾರಿ ಚಿತ್ರದಲ್ಲಿ ತಬು, ವಾಮಿಕಾ ಗಬ್ಬಿ, ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಹನ್ ನರುಲಾ ಸಿನಿಮಾದ ಚಿತ್ರಕಥೆ ರಚಿಸಿದ್ದಾರೆ. ಟೀಸರ್‌ನಲ್ಲಿ ಕೃಷ್ಣ ಮೆಹ್ರಾ (ಟಬು) ಸಿಸಿಟಿವಿ ಪೂಟೇಜ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಆತಂಕದಿಂದ ಗಮನಿಸುತ್ತಿರುವುದನ್ನು ಕಾಣಬಹುದು. ಅದರಲ್ಲಿ ‘Top Secret Khufiya On October 5’ ಎಂದು ಪ್ರಿಂಟ್‌ ಆದ ಹಾಳೆಯೊಂದು ಹೊರಬರುತ್ತದೆ.

‘ಟಬು ಜೊತೆ ಕೆಲಸ ಮಾಡಲು ನಾನು ಸಂತೋಷಪಡುತ್ತೇನೆ. ಖೂಫಿಯಾ ಚಿತ್ರವು ನನಗೆ ನಿಜವಾಗಿಯೂ ವಿಶೇಷವಾದ ಯೋಜನೆಯಾಗಿದೆ. ಸಸ್ಪೆನ್ಸ್‌ ಸ್ಲೋ ಬರ್ನಿಂಗ್ ಥ್ರಿಲ್ಲರ್ ಜಾನರ್‌ ಚಿತ್ರವಿದು. ಚಿತ್ರಕ್ಕಾಗಿ ಇಡೀ ತಂಡವು ತುಂಬಾ ಶ್ರಮಿಸಿದೆ ಮತ್ತು Netflixನೊಂದಿಗೆ ಚಿತ್ರವನ್ನು ಜಾಗತಿಕವಾಗಿ ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ ನಿರ್ದೇಶಕ ವಿಶಾಲ್‌ ಭಾರದ್ವಾಜ್‌. ಚಿತ್ರವು ಅಮರ್‌ ಭೂಷಣ್‌ ಅವರ ‘Escape to Nowhere’ ಪುಸ್ತಕವನ್ನು ಆಧರಿಸಿದೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಜ್ಮೆರಿ ಹಕ್ ಬಧೊನ್, ಅಲೆಕ್ಸ್ ನೆಲ್, ಫರ್ಹಾದ್ ಅಹ್ಮದ್ ದೆಹ್ಲ್ವಿ ನಟಿಸಿದ್ದಾರೆ. ಎ ಶ್ರೀಕರ್ ಪ್ರಸಾದ್ ಸಂಕಲನ, ವಿಶಾಲ್ ಭಾರದ್ವಾಜ್ ಸಂಗೀತ ಚಿತ್ರಕ್ಕಿದೆ. ಸಿನಿಮಾ ಅಕ್ಟೋಬರ್ 5ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here