ನಿನ್ನೆ ನಡೆದ ಅಪಘಾತದಲ್ಲಿ ಮಡಿದ ಜನರಲ್‌ ಬಿಪಿನ್‌ ರಾವತ್‌ ಮತ್ತು ಇತರೆ ಹನ್ನೆರೆಡು ಮಂದಿಯ ದುರಂತ ಅಂತ್ಯಕ್ಕೆ ಬಾಲಿವುಡ್‌ನ ಹಲವರು ಸಂತಾಪ ಸೂಚಿಸಿದ್ದಾರೆ. ಸಲ್ಮಾನ್‌ ಖಾನ್‌, ಅನುಪಮ್‌ ಖೇರ್‌, ಅಜಯ್‌ ದೇವಗನ್‌, ಮೋಹನ್‌ ಲಾಲ್‌, ಮಮ್ಮೂಟಿ, ಕರಣ್‌ ಜೋಹರ್‌ ಇತರರು ಟ್ವೀಟ್‌ಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ತಮಿಳುನಾಡು ಕೂನೂರಿನ ಬಳಿ ನಿನ್ನೆ ಹೆಲಿಕಾಪ್ಟರ್‌ ದುರಂತದಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌ ಸೇರಿದಂತೆ ಹದಿಮೂರು ಮಂದಿ ಅಗಲಿದ್ದಾರೆ. ಈ ಘಟನೆ ದೇಶದ ಜನತೆಯನ್ನು ದಿಗ್ರಮೆಗೆ ದೂಡಿದೆ. ಭಾರತೀಯ ಸಿನಿಮಾರಂಗದ ಪ್ರಮುಖರನೇಕರು ಘಟನೆಗೆ ಶಾಕ್‌ ವ್ಯಕ್ತಪಡಿಸಿದ್ದು, ಅಗಲಿದವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಸೇಜ್‌ಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಿರಿಯ ನಟ ಅನುಪಮ್‌ ಖೇರ್‌ ಅವರು ಬಿಪಿನ್‌ ರಾವತ್‌ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು ಜನರಲ್‌ ಅವರ ಸೇವೆಯನ್ನು ಸ್ಮರಿಸಿದ್ದಾರೆ. ನಟ ಮೋಹನ್‌ಲಾಲ್‌, “ಭಾರತ ದೇಶ ಧೈರ್ಯಶಾಲಿ ವ್ಯಕ್ತಿತ್ವದೊಂದರನ್ನು ಕಳೆದುಕೊಂಡಿದೆ. ದುರಂತದಲ್ಲಿ ಮಡಿದ ಕುಟುಂಬಗಳಿಗೆ ದುಃಖವನ್ನು ನಿಭಾಯಿಸುವ ಶಕ್ತಿ ಬರಲಿ” ಎಂದಿದ್ದಾರೆ. “ಇದು ಅತ್ಯಂತ ದುಃಖದ ಸಂಗತಿ. ಸೇನೆಯಲ್ಲಿ ನಿಸ್ವಾರ್ಥದಿಂದ ದುಡಿಯುವ ವೀರ ಯೋಧರ ಈ ದುರ್ಘಟನೆ ದಿಗ್ರಮೆ ಮೂಡಿಸಿದೆ” ಎಂದು ಬಾಲಿವುಡ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗಗಳ ಪ್ರಮುಖ ತಾರೆಯರು ಸಂತಾಪ ಸೂಚಿಸಿದ್ದಾರೆ. ಸ್ಯಾಂಡಲ್‌ವುಡ್‌ ನಟ ಜಗ್ಗೇಶ್‌ ಅವರು ಜನರಲ್‌ ಬಿಪಿನ್‌ ಅವರ ಫೋಟೊ ಹಾಕಿ, “ಯಾವ ಘಳಿಗೆ ನಮ್ಮ ಅಂತ್ಯ ದೇವರು ಇಟ್ಟ ಗುಟ್ಟು! ಬರುವ ಮೊದಲು ಅಪರಿಚಿತ ಹೋದಮೇಲೆ ಆಗಬೇಕು ಪರಿಚಿತ! ಹುಟ್ಟು ಗುಟ್ಟು!ನಂತರ ಬೆಳವಣಿಗೆಯಲ್ಲಿ ಆ ಗುಟ್ಟು ರಟ್ಟು ನೀ ಯಾರು ಎಂದು!ಕೊನೆಗೆ ಆ ಗುಟ್ಟು ರಟ್ಟು ಮುಚ್ಚಿಟ್ಟು ಹೋಗುವುದು! ಅಲ್ಲಿಗೆ ಮೂರು ದಿನ ಮನುಜನ ಬದುಕು! ನಿಮ್ಮ ದೇಶಸೇವೆಯ ಹೆಜ್ಜೆಗುರುತು ಮಾಸದು ಭಾರತ ಮಣ್ಣಲ್ಲಿ..ಓಂ ಶಾಂತಿ”ಎಂದು ಟ್ವೀಟ್‌ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here