ಅರ್ಜುನ್ ಕೃಷ್ಣ ನಿರ್ದೇಶನದ ‘DAD’ ಕನ್ನಡ ಚಿತ್ರದ ಟೀಸರ್ಗೆ ಬಾಲಿವುಡ್ ಚಿತ್ರನಿರ್ದೇಶಕ ಸುಭಾಷ್ ಘೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶಾಲ್ ರಾಘವ್, ನೃತ್ಯ ಬೋಪಣ್ಣ, ಮಾಹಿಕಾ ಮಹಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.
ವಿಶಾಲ್ ರಾಘವ್, ನೃತ್ಯ ಬೋಪಣ್ಣ ಮತ್ತು ಮಾಹಿಕಾ ಮಹಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘DAD’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬಾಲಿವುಡ್ನ ಹಿರಿಯ ಚಿತ್ರನಿರ್ದೇಶಕ ಸುಭಾಷ್ ಘಾಯ್ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಒಂದು ಥ್ರಿಲ್ಲರ್ ಕಥೆ ಇದೆ ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ರಾಜ್ಯ, ಭಾಷೆಯ ಗಡಿಯನ್ನೂ ಮೀರಿ ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ. ಹಿಂದಿಯ ‘ಖಳನಾಯಕ್’, ‘ತಾಲ್’, ‘ಸೌಧಾಗರ್’, ‘ಸ್ವದೇಶ್’ ಮಂತಾದ ಸಿನಿಮಾಗಳ ನಿರ್ದೇಶಕ ಸುಭಾಷ್ ಘಾಯ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದ ಫೋಸ್ಟರ್ ಹಂಚಿಕೊಂಡ ಸುಭಾಷ್ ಭಾಯ್ ‘ಶೀರ್ಘದಲ್ಲೇ ತೆರೆಗೆ ಬರಲಿರುವ ಅರ್ಜುನ್ ಕೃಷ್ಣ ಅವರ ‘ಡ್ಯಾಡ್ ಕನ್ನಡ ಚಲನಚಿತ್ರದಲ್ಲಿ Whistling Woods Music School ನ ಹಳೆಯ ವಿದ್ಯಾರ್ಥಿಯಾದ ಶಿವ ಹರಿ ವರ್ಮಾ ಅವರ ಅದ್ಭುತ ಹಿನ್ನೆಲೆ ಸಂಗೀತ ಸಂಯೋಜನೆಗಾಗಿ ಶ್ಲಾಘಿಸುತ್ತೇನೆ. ಅವರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. ನನ್ನ ಆಶೀರ್ವಾದ ಸದಾ ಅವರ ಮೇಲಿರುತ್ತದೆ’ ಎಂದು ಬರೆದಿದ್ದಾರೆ.
‘ದೇವರಾಜ್ ಅಲಿಯಾಸ್ ಡೇವಿಡ್’ ಎಂಬುದು ‘DAD’ ಶೀರ್ಷಿಕೆಯ ವಿಸ್ತೃತ ರೂಪ. ಸಿನಿಮಾದ ಕಥೆಗೆ ಈ ವಿಭಿನ್ನ ಶೀರ್ಷಿಕೆ ಸೂಕ್ತವಾಗಿ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಅರ್ಜುನ್ ಕೃಷ್ಣ. ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು ‘ಸಾಮಾನ್ಯವಾಗಿ ಎಲ್ಲರಿಗೂ ಎರಡು ಮುಖ ಇರುತ್ತದೆ. ಸಮಾಜದ ಎದುರು ಒಂದು ಮುಖ ಮಾತ್ರ ಕಾಣುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಆಗಾಗ ಕಷ್ಟಗಳು ಮುತ್ತಿಕೊಂಡರೆ, ದುಷ್ಟರು ಕಾಟ ನೀಡಿದರೆ, ನ್ಯಾಯ ಸಿಗದೇ ಇದ್ದಾಗ ಆತನ ಎರಡನೇ ಮುಖ ಅನಾವರಣಗೊಳ್ಳುತ್ತದೆ. ಇಂಥ ಒಂದು ಕಥೆಯನ್ನು ಸಿನಿಮಾ ಹೊಂದಿದೆ’ ಎಂದಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೇ ಹಂತದಲ್ಲಿವೆ. ಟೀಸರ್ ಅನ್ನು ರಾಧಿಕಾ ಯಶ್ ಪ್ರಸ್ತುತ ಪಡಿಸಿದ್ದಾರೆ.