ಗೌತಮ್‌ ವಾಸುದೇವ್‌ ಮೆನನ್‌ ನಿರ್ದೇಶನದ ‘ಧ್ರುವ ನಚ್ಚತಿರಂ’ ಆಕ್ಷನ್‌ – ಥ್ರಿಲ್ಲರ್‌ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವಿಕ್ರಮ್‌ ಮತ್ತು ರಿತು ವರ್ಮಾ ಮುಖ್ಯಭೂಮಿಕೆಯ ಕಲಾವಿದರು. ಇದೇ ನವೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

ಚಿಯಾನ್ ವಿಕ್ರಮ್ ಮತ್ತು ರಿತು ವರ್ಮಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಧ್ರುವ ನಚ್ಚತಿರಂ’ (Dhruva Natchathiram) ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಗೌತಮ್ ವಸುದೇವ್‌ ಮೆನನ್ ನಿರ್ದೆಶಿಸಿದ್ದಾರೆ. 2011ರ ಮುಂಬೈ ಬಾಂಬ್ ಸ್ಫೋಟದ ನಂತರ ರಾಷ್ಟ್ರೀಯ ಭದ್ರತೆಗಾಗಿ ಸರ್ಕಾರವು ಸ್ಥಾಪಿಸಿದ ಗೂಢಚಾರ/ಸೈನಿಕರ ತಂಡದ ರಹಸ್ಯ ಕಾರ್ಯಾಚರಣೆಯೇ ಚಿತ್ರದ ಕಥಾವಸ್ತು. ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದಾಳಿಕೋರರ ಕ್ರಮವನ್ನು ತಡೆಗಟ್ಟುವ ಕಾರ್ಯವಿಧಾನಗಳನ್ನು ಟ್ರೇಲರ್‌ ತೋರಿಸಿದೆ. ದಾಳಿಕೋರರ ಯೋಜನೆಗಳನ್ನು ಕಂಡುಹಿಡಿಯಲು ತಂಡವನ್ನು ರಚಿಸುತ್ತಿರುವುದನ್ನು ಸಹ ಕಾಣಬಹುದು.

ನಿರ್ದಿಷ್ಟ ನಿಯಮಗಳನ್ನು ರೂಪಿಸಿರುವ ಗುಂಪಿನ ಮುಖ್ಯಸ್ಥನಾಗಿ ಧ್ರುವ (ವಿಕ್ರಮ್) ತಂಡವನ್ನು ಮುನ್ನಡೆಸುತ್ತಿರುತ್ತಾನೆ. ಆ ಸಂದರ್ಭದಲ್ಲಿ ಇವರ ತಂಡದ ಸ್ಥಾಪಕನನ್ನು ಎದುರಾಳಿ ಗುಂಪೊಂದು ಅಪಹರಿಸಿದಾಗ ಧ್ರುವ ಮತ್ತು ಉಳಿದ ಹತ್ತು ಸದಸ್ಯರು ತಮ್ಮ ಮಾರ್ಗದರ್ಶಕನನ್ನು ಉಳಿಸಲು ಮಾರಣಾಂತಿಕವಾಗಿ ಹೊಡೆದಾಡುತ್ತಾರೆ. ಟ್ರೇಲರ್‌ ಒಂದು ಸಣ್ಣ ಪ್ರೇಮಕಥೆಯನ್ನು ಕೂಡಾ ಒಳಗೊಂಡಿದೆ. ಚಿತ್ರವನ್ನು‌ Oruoorileoru Film House ಸಹಯೊಗದೊಂದಿಗೆ Ondraga Entertainment ಬ್ಯಾನರ್ ನಿರ್ಮಿಸಿದೆ. ಹ್ಯಾರಿಸ್‌ ಜೈರಾಜ್‌ ಸಂಗೀತ ಸಂಯೋಜನೆ, ಆಂತೋನಿ ಸಂಕಲನ ನಿರ್ವಹಿಸಿದ್ದಾರೆ. ರಾಧಾಕೃಷ್ಣನ್ ಪಾರ್ಥಿಬನ್, ರಾಧಿಕಾ ಶರತ್‌ಕುಮಾರ್, ಸಿಮ್ರನ್‌, ವಿನಾಯಕನ್, ದಿವ್ಯ ದರ್ಶಿನಿ, ಮುನ್ನಾ ಸೈಮನ್, ವಂಶಿ ಕೃಷ್ಣ, ಸಲೀಂ ಬೇಗ್, ಸತೀಶ್ ಕೃಷ್ಣನ್, ಮಾಯಾ ಎಸ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here