ರಂಜಿತ್ ಶಂಕರ್ ನಿರ್ದೇಶನದ ‘ಜೈ ಗಣೇಶ್’ ಮಲಯಾಳಂ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಉನ್ನಿ ಮುಕುಂದನ್ ಮತ್ತು ಮಹಿಮಾ ನಂಬಿಯಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. 2024ರ ಬೇಸಿಗೆಗೆ ಚಿತ್ರ ಬಿಡುಗಡೆಯಾಗಲಿದೆ.
ಉನ್ನಿ ಮುಕುಂದನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಜೈ ಗಣೇಶ್’ ಮಲಯಾಳಂ ಚಿತ್ರದ ಫಸ್ಟ್‌ಲುಕ್ ಫೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಂಜಿತ್ ಶಂಕರ್ ನಿರ್ದೇಶಿಸುತ್ತಾರೆ. ‘RDX’ ಸಿನಿಮಾ ಖ್ಯಾತಿಯ ಮಹಿಮಾ ನಂಬಿಯಾರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಫೋಸ್ಟರ್‌ನಲ್ಲಿ ಉನ್ನಿ ಮುಕುಂದನ್ ವೀಲ್ ಚೇರಿನ ಮೇಲೆ ಕುಳಿತುಕೊಂಡು ಮೇಲೇಳಲು ಪ್ರಯತ್ನಿಸುತ್ತಿವಂತೆ ಕಾಣುತ್ತದೆ. ಈ ಚಿತ್ರದಲ್ಲಿ ಮುಕುಂದನ್ ಪಾತ್ರವು ಅವರು ಹಿಂದೆಂದೂ ನಿರ್ವಹಿಸಿರದ ಸವಾಲಿನ ಪಾತ್ರಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ. ಚಲನಚಿತ್ರವು ವಾಸ್ತವ ಮತ್ತು ಕಲ್ಪನೆಯ ಸುತ್ತ ಸುತ್ತುವ ಸೂಪರ್ ಹೀರೋ ಒಬ್ಬರ ಕಥಾಹಂದರ.
Drive. Thrive. Survive.
— Unni Mukundan (@Iamunnimukundan) November 16, 2023
Presenting the first look of #JaiGanesh!
In theatres, Summer 2024! pic.twitter.com/gw5f9hn19n
ಚಿತ್ರದ ಫೋಸ್ಟರ್ ಅನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿರುವ ಉನ್ನಿ ಮುಕುಂದನ್, ‘Drive. Thrive. Survive. ಸಿನಿಮಾದ ಮೊದಲ ಲುಕ್ ಫೋಸ್ಟರ್ ಪ್ರಸ್ತುತಪಡಿಸುತ್ತಿದ್ದೇವೆ. 2024ರ ಬೇಸಿಗೆಗೆ ಚಿತ್ರ ಬಿಡುಗಡೆಯಾಗಲಿದೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ನಟಿ ಜೊಮೊಲ್ ಅವರು 6 ವರ್ಷಗಳ ನಂತರ ಈ ಚಿತ್ರದ ಮೂಲಕ ನಟನೆಗೆ ಮರಳುತ್ತಿದ್ದಾರೆ. ಚಿತ್ರದಲ್ಲಿ ಅವರು ಕ್ರಿಮಿನಲ್ ಲಾಯರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿನಿಮಾಗೆ ಚಂದ್ರು ಸೆಲ್ವರಾಜ್ ಛಾಯಾಗ್ರಹಣ, ಶಂಕರ್ ಶರ್ಮಾ ಸಂಗೀತ ಸಂಯೋಜನೆ ಮತ್ತು ಸಂಗೀತ್ ಪ್ರತಾಪ್ ಸಂಕಲನವಿದೆ.