ಕನ್ನಡ ಸ್ಕೂಲ್‌ ಟೆಕ್ಸ್ಟ್‌ವೊಂದರಲ್ಲಿ ಮಲಯಾಳಂ ಚಿತ್ರದಲ್ಲಿ ಪೋಸ್ಟ್‌ಮ್ಯಾನ್‌ ಪಾತ್ರ ಮಾಡಿದ್ದ ನಟ ಕುಂಚಾಕೊ ಬೋಬನ್‌ ಚಿತ್ರ ಪ್ರಕಟವಾಗಿದೆ. ಈ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ನಟ, “ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆಯುವಲ್ಲಿ ಯಶಸ್ವಿಯಾದೆ” ಎಂದು ತಮಾಷೆ ಮಾಡಿದ್ದಾರೆ.

ಕುಂಚಾಕೊ ಬೋಬನ್‌ ನಟನೆಯ ‘ಒರಿಡಥೋರು ಪೋಸ್ಟ್‌ಮ್ಯಾನ್‌’ ಮಲಯಾಳಂ ಸಿನಿಮಾ 2010ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ನಟ ಕುಂಚಾಕೊ ಅವರು ಗ್ರಾಮೀಣ ಭಾಗದ ಪೋಸ್ಟ್‌ಮ್ಯಾನ್‌ ಪಾತ್ರ ನಿರ್ವಹಿಸಿದ್ದರು. ಅವರ ಪಾತ್ರದ ಫೋಟೊ ಈಗ ಕನ್ನಡ ಟೆಕ್ಸ್ಟ್‌ವೊಂದರಲ್ಲಿ ಬಳಕೆಯಾಗಿದೆ. ‘ಅಂಚೆ ಪೇದೆ’ಯನ್ನು ಪರಿಚಯಿಸುತ್ತಾ ‘ಪೋಸ್ಯ್‌ಮ್ಯಾನ್‌ ಕುಂಚಾಕೊ’ ಫೋಟೊವನ್ನು ಛಾಪಿಸಿದ್ದಾರೆ. ಬಹುಶಃ ಗೂಗಲ್‌ನಲ್ಲಿ ಹುಡುಕಿದ್ದಾಗ ಈ ಫೋಟೊ ಸಿಕ್ಕಿರಬಹುದು. ನಟ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇದನ್ನು ಶೇರ್‌ ಮಾಡಿ, “ಹತ್ತಾರು ವರ್ಷಗಳ ಕಾಲ ಪತ್ರಗಳನ್ನು ವಿತರಿಸಿದ ಪೋಸ್ಟ್‌ಮ್ಯಾನ್‌ ಪ್ರಾರ್ಥನೆ ಫಲಿಸಿದೆ. ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆಯುವಲ್ಲಿ ಅವನು ಯಶಸ್ವಿಯಾಗಿದ್ದಾನೆ” ಎಂದು ತಮಾಷೆಯ ಕಾಮೆಂಟ್‌ ಹಾಕಿದ್ದಾರೆ. ಅವರ ಈ ಪೋಸ್ಟ್‌ಗೆ ಪ್ರತಿಯಾಗಿ ಹಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಕುಂಚಾಕೊ ಪ್ರಸ್ತುತ ‘ರೆಂಡಗಂ’ ತಮಿಳು – ಮಲಯಾಳಂ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ‘ಪಕುಲಮ್‌ ಪಾಥಿರಾವಣ್‌’, ‘ಅರಿಯಿಪ್ಪು’ ಚಿತ್ರೀಕರಣದಲ್ಲಿರುವ ಅವರ ಮತ್ತೆರೆಡು ಮಲಯಾಳಂ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here