ಸ್ಯಾಂಡಲ್‌ವುಡ್‌ ತಾರಾದಂಪತಿ ಯಶ್‌ ಮತ್ತು ರಾಧಿಕಾ ಪಂಡಿತ್‌ ಪುತ್ರ ಯಥರ್ವ್‌ಗೆ ಈಗ ನಾಲ್ಕು ತುಂಬಿದೆ. ಖಾಸಗಿ ಹೋಟೆಲೊಂದರಲ್ಲಿ ನಡೆದ ಮಗನ ಹುಟ್ಟುಹಬ್ಬ ಆಚರಣೆಯ ವೀಡಿಯೋವನ್ನು ನಟಿ ರಾಧಿಕಾ ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘KGF’ ನಂತರ PAN ಇಂಡಿಯಾ ಹೀರೋ ಆಗಿರುವ ಯಶ್‌ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆಯಿದೆ. ಅವರ 19ನೇ ಸಿನಿಮಾದ ಘೋಷಣೆಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಬಹುಭಾಷೆಗಳಲ್ಲಿ ಬರಲಿರುವ ‘ರಾಮಾಯಣ’ ಪೌರಾಣಿಕ ಚಿತ್ರದಲ್ಲಿ ಅವರು ರಾವಣನಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯಿನ್ನೂ ಅಧಿಕೃತವಾಗುತ್ತಿಲ್ಲ. ಯಶ್‌ ಮಾತ್ರ ಯಾವುದೇ ರೀತಿಯ ಸುಳಿವು ಬಿಟ್ಟುಕೊಡುತ್ತಿಲ್ಲ. ತಮ್ಮ ಪಾಡಿಗೆ ತಾವು ತಾರಾಪತ್ನಿ ರಾಧಿಕಾ ಮತ್ತು ಇಬ್ಬರು ಮಕ್ಕಳೊಂದಿಗೆ ಆಗಾಗ ಮೀಡಿಯಾಗಳ ಮುಂದೆ ಕಾಣಿಸಿಕೊಳ್ಳುತ್ತಾರೆ. ಮೊನ್ನೆ ರಾತ್ರಿ ಯಶ್‌ – ರಾಧಿಕಾ ಪುತ್ರ ಯಥರ್ವ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಣೆ ನಡೆದಿದೆ. ಖಾಸಗಿ ಹೋಟೆಲೊಂದರಲ್ಲಿ ನಡೆದ ಸಮಾರಂಭದಲ್ಲಿ ಯಶ್‌ – ರಾಧಿಕಾ ದಂಪತಿ ಆಪ್ತರ ಸಮ್ಮುಖದಲ್ಲಿ ಪುತ್ರನ ಬರ್ತ್‌ಡೇ ಆಚರಿಸಿದ್ದಾರೆ. ಸಮಾರಂಭದಲ್ಲಿ ತಾರಾ ದಂಪತಿ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ್‌ ಹಾಗೂ ಇತರೆ ಮಕ್ಕಳೊಂದಿಗೆ ಡ್ಯಾನ್ಸ್‌ ಮಾಡಿದ್ದಾರೆ. ರಾಧಿಕಾ ತಮ್ಮ Instagram ಖಾತೆಯಲ್ಲಿ ಬರ್ತ್‌ಡೇ ಸಂಭ್ರಮದ ವೀಡಿಯೋ ಹಂಚಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here