ಬಿಗ್‌ಬಾಸ್‌ನಿಂದ ನಿನ್ನೆ ಹೊರಬಿದ್ದ ಮತ್ತೊಬ್ಬರು ಸ್ಪರ್ಧಿ ಇಶಾನಿ. ಹೆಚ್ಚು ಸದ್ದು ಮಾಡದೆ ಮನೆಯೊಳಗಿದ್ದ ಅವರು ಎಲ್ಲರೊಂದಿಗೂ ಬೆರೆಯುತ್ತಿದ್ದರು. JioCinemaದೊಂದಿಗೆ ಅವರು ಬಿಗ್‌ಬಾಸ್‌ ಜರ್ನೀ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇಶಾನಿ ಅವರು ಬಿಗ್‌ಬಾಸ್‌ ಮನೆಯಿಂದ ಮೊನ್ನೆ ಶನಿವಾರ ಹೊರಬಿದ್ದಿದ್ದಾರೆ. ಅವರ ಬಿಗ್‌ಬಾಸ್ ಜರ್ನಿ ಹೇಗಿತ್ತು? ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು? ಶೋ ಬಗ್ಗೆ ಅವರು ಏನು ಹೇಳುತ್ತಾರೆ? JioCinemaಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

https://jiocinema.onelink.me/fRhd/p84393nd

ನಮಸ್ತೆ ನಾನು ಐಶಾನಿ. ನಾನು ಸಿಂಗರ್, ಸಾಂಗ್ ರೈಟರ್.
ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದೀನಿ. 99 ಪರ್ಸೆಂಟ್‌ ನನ್ನಂತೆ ನಾನು ಇರುತ್ತೇನೆ ಎನ್ನುವ ಕಾನ್ಫಿಡೆನ್ಸ್ ಇತ್ತು. ಉಳಿದ ಒಂದು ಪರ್ಸೆಂಟ್ ನನಗೆ ಆಗಲ್ಲ ಅನಿಸಿತ್ತು. ನನಗೆ ಹಟ ಜಾಸ್ತಿ ಇದೆ. ಗೇಮ್ ಆಡುವ ಅವಕಾಶ ಜಾಸ್ತಿ ಸಿಗಲಿಲ್ಲ. ಅದರಿಂದ ನನಗೆ ಬೇಜಾರಾಗಿತ್ತು. ನನ್ನನ್ನು ಯಾರೂ ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ಹಾಗಾಗಿ ನನ್ನ ಸ್ಟ್ರೆಂಥ್ ತೋರಿಸಲಾಗಲಿಲ್ಲ. ನಾನು ಸ್ವಲ್ಪ ಎಮೋಷನಲ್ ಆಗಿದೀನಿ. ಆದರೆ ಎಮೋಷನಲ್ ಆಗಿರುವುದು, ಅದು ವಲ್ನರಬಲ್ ಆಗಿದ್ರೆ ಅದು ವೀಕ್‌ನೆಸ್ ಅಲ್ವೇ ಅಲ್ಲ. ಅದು ಸ್ಟ್ರೆಂಥ್‌. ಆದರೆ ಅದನ್ನು ನೋಡಿ ಯಾವಾಗ್ಲೂ ನನ್ನ ನಾಮಿನೇಷನ್‌ನಲ್ಲಿ ಹಾಕ್ತಿದ್ರು. ಕಳಪೆಯಲ್ಲಿ ಹಾಕ್ತಿದ್ರು. ಇದನ್ನೇ ರೀಸನ್ ಕೊಡ್ತಿದ್ರು.

ನನ್ನ ಪ್ರಕಾರ ಅದು ಸರಿ ಎಂದು ನನಗೆ ಅನಿಸುವುದಿಲ್ಲ. ಮನೆಯೊಳಗೆ ಗುಂಪುಗಳಿದ್ದವು. ನಾನು ಬೇರೆ ಗುಂಪಿನಲ್ಲಿದ್ದರೆ ನನಗೆ ಇನ್ನೂ ಅವಕಾಶಗಳು ಸಿಗುತ್ತಿತ್ತು ಎಂದೂ ನನಗೆ ಅನಿಸುವುದಿಲ್ಲ. ವಿನಯ್‌ ಇರ್ಲಿ, ನಮ್ರತಾ, ಮೈಕಲ್, ಸ್ನೇಹಿತ್ ಎಲ್ಲರ ಜೊತೆ ನಾನು ಖುಷಿಯಾಗಿದ್ದೆ. ಅವರು ನನಗೆ ಯಾವಾಗಲೂ ಸಪೋರ್ಟ್‌ ಮಾಡಿದ್ದಾರೆ. ಅವರಿಂದ ನನಗೆ ಡಿಸ್ಟ್ರಾಕ್ಷನ್ ಆಗಿಲ್ಲ. ಆದರೆ ನನ್ನ ವೈಯಕ್ತಿಕ ಆಯ್ಕೆಗಳಿಂದ ನನಗೆ ತೊಂದರೆಯಾಗಿರುವುದು. ಅವರು ನನಗೆ ತುಂಬ ಒಳ್ಳೆಯ ಸ್ನೇಹಿತರು.

ಮತ್ತೆ ಬಿಗ್‌ಬಾಸ್‌ಗೆ ಹೋಗುವುದು ಸಾಧ್ಯವಾದರೆ ನಾನು ನನ್ನದೇ ಲೆಕ್ಕಾಚಾರ ಇಟ್ಟುಕೊಂಡು ಆಟ ಆಡುತ್ತಿದ್ದೆ. ಯಾರು ಫೇಕ್, ಯಾರು ರಿಯಲ್ ಎಂದು ವಿಶ್ಲೇಷಿಸಿ ಮುಂದಡಿ ಇಡುತ್ತಿದ್ದೆ. ಟಾಸ್ಕ್‌ ವಿಷಯಲ್ಲಿಯೂ ನಾನು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೆ. ಏನಾದರೂ ಇರಲಿ, ನಾನು ನನಗೋಸ್ಕರ ಆಡುತ್ತಿದ್ದೆ. ಇನ್ಯಾರಿಗೋಸ್ಕರನೋ ಅಲ್ಲ. ಟೀಮ್‌ನಲ್ಲಿ ಆಡಬೇಕು ಅಂದರೆ ನಾನು ನನಗೋಸ್ಕರ ಆಟ ಆಡ್ತಿದ್ದೆ. ಟೀಮ್ ಗೆಲ್ಲಬೇಕು ಅಂತಲೇ ಆಟ ಆಡ್ತಿದ್ದೆ, ಆದರೆ ನಾನು ಟೀಮ್ ಲೀಡರ್ ಆಗಬೇಕು ಎಂದು ಗಟ್ಟಿಯಾಗಿ ಹೇಳುತ್ತಿದ್ದೆ. ಎಂಪಥಿ ಮತ್ತು ಇಂಟಲಿಜೆನ್ಸ್‌ನಲ್ಲಿ ನನಗೆ ನಂಬಿಕೆ ಇದೆ. ಇವೆರಡನ್ನೂ ಉಪಯೋಗಿಸಿಕೊಳ್ಳಲು ಫೋಕಸ್ ಮಾಡುತ್ತಿದ್ದೆ.

ಮನೆಯೊಳಗೆ ವಿನಯ್‌, ನಮ್ರತಾ ಎಲ್ರೂ ಜೆನ್ಯೂನ್ ಆಗಿಯೇ ಇದ್ದರು. ನನ್ನ ಪ್ರಕಾರ ಮೈಕಲ್ ತುಂಬ ಜೆನ್ಯೂನ್ ಆಗಿದ್ದಾರೆ. ಹಾನೆಸ್ಟ್ ಆಗಿದ್ದರು. ಲಾಯಲ್ ಆಗಿದ್ದರು. ಅದು ಪ್ರಾರಂಭದಲ್ಲಿ ನನಗೆ ಕಾಣಿಸಲಿಲ್ಲ. ಕೊನೆಕೊನೆಗೆ ಕಾಣಿಸಿತು. ಈಗ ನಾನು ವಾಪಸ್ ಹೋಗಲು ಸಾಧ್ಯವಾದರೆ ಎಲ್ಲದಕ್ಕೂ ಮೈಕಲ್ ಸೈಡ್ ತಗೋತಿದ್ದೆ. ತುಕಾಲಿ ಅವರನ್ನು ನಾನು ಊಸರವಳ್ಳಿ ಎಂದು ಕರೆದಿದ್ದೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಅವರು ಒಂದ್ಸಲ ನನ್ನ ಜೊತೆ ಸರಿಯಾಗಿ ಮಾತಾಡ್ತಿದ್ರು. ಮತ್ತೊಮ್ಮೆ ಇನ್ನೊಂದು ಗ್ರೂಪಲ್ಲಿ ಹೋಗಿ ಇನ್ನೇನಾದ್ರೂ ಹೇಳ್ತಿದ್ರು. ಉದ್ದೇಶಪೂರ್ವಕವಾಗಿ ಡ್ರಾಮಾ ಕ್ರಿಯೇಟ್ ಮಾಡಿ ಕಾಣೆಯಾಗ್ತಿದ್ರು. ಹಾಗಾಗಿ ಅವರು ನನಗೆ ಒಂಚೂರು ಇಷ್ಟವಾಗಲಿಲ್ಲ.

ಎರಡನೇ ಫೇಕ್‌ ನೀತು. ಅವರಿಗೆ ಪರ್ಸನಾಲಿಟಿ ಇರಲೇ ಇಲ್ಲ. ನನ್ನ ಪ್ರಕಾರ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ. ಪ್ರತಾಪ್ ಇನೋಸೆಂಟ್ ಅಂದುಕೊಂಡಿದ್ದೆ. ಸ್ವಲ್ಪ ಮುಗ್ಧತೆ ಇದೆ ಅವರಲ್ಲಿ. ಆದರೆ ಅವರು ತುಂಬ ಬುದ್ಧಿವಂತರು. ಅಂದರೆ ಪಾಸಿಟೀವ್ ದೃಷ್ಟಿಯಿಂದಲೇ ಬುದ್ಧಿವಂತರು. ಗೇಮ್ ಹೇಗೆ ಆಡಬೇಕು ಎಂದು ಅವರಿಗೆ ಗೊತ್ತು. ಹಾಗಾಗಿ ಖಂಡಿತವಾಗಿ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ. ಬಿಗ್‌ಬಾಸ್ ಫಿನಾಲೆಯಲ್ಲಿ ಇರುವ ಐದು ಸ್ಫರ್ಧಿಗಳಲ್ಲಿ ನಾನೂ ಒಬ್ಬಳಾಗಬೇಕು ಎಂದು ನನಗೆ ಆಸೆ ಇತ್ತು. ಆದರೆ ಆಗಲಿಲ್ಲ. ನನ್ನ ಪ್ರಕಾರ ವಿನಯ್, ಮೈಕಲ್, ಸಂಗೀತಾ, ಕಾರ್ತೀಕ್ ಮತ್ತು ನಮ್ರತಾ ಇಷ್ಟು ಜನ ಕೊನೆಯಲ್ಲಿ ಉಳಿದುಕೊಳ್ಳುತ್ತಾರೆ. ಇವರಲ್ಲಿ ಮೈಕಲ್ ಗೆಲ್ಲಬೇಕು ಎಂಬುದು ನನ್ನ ಆಸೆ.

ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳು ತುಂಬ ಮಜವಾಗಿದ್ದವು. ಕಳೆದ ವಾರ ಲಗೋರಿ ಆಡಿದೆವು. ಅದು ತುಂಬ ಮಜವಾಗಿತ್ತು. ಯಾಕೆಂದರೆ ಫಸ್ಟ್ ಟೈಮ್ ನಾನು ಲಗೋರಿ ಆಡುತ್ತಿರುವುದು. ನನಗೆ ಲಗೋರಿ ಏನೆಂದೇ ಗೊತ್ತಿರಲಿಲ್ಲ. ಅದನ್ನು ಆಡಿ ಖುಷಿಯಾಯ್ತು. ಹಾಗೆಯೇ ಆನೆಗೆ ಬಾಲ ಬಿಡಿಸುವ ಟಾಸ್ಕ್ ಕೂಡ ಸಖತ್ ಎಂಜಾಯ್ ಮಾಡಿದೆ. ಆ ಥರ ಸಾಕಷ್ಟ ಟಾಸ್ಕ್ ಇದ್ದವು. ಕನ್ನಡ ಇನ್ನೂ ಕಲಿಯುತ್ತಿದ್ದೇನೆ. ಇನ್ನೂ ಚೆನ್ನಾಗಿ ಕಲಿಯಬೇಕು ಅಂತ ಆಸೆ ಇದೆ. ಇನ್ನಷ್ಟು ಸ್ಪಷ್ಟವಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ Rap ಸಾಂಗ್ ಬರೆಯಬೇಕು ಎಂಬ ಆಸೆ ಇದೆ. ಬಿಗ್‌ಬಾಸ್ ಮನೆಯೊಳಗೂ ಟ್ರೈ ಮಾಡುತ್ತಿದ್ದೆ. ಸ್ವಲ್ಪ ಟೈಮ್ ತಗೊಳ್ತು. ಸ್ನೇಹಿತರ ಹೆಲ್ಪ್ ತಗೊಳ್ತಿದ್ದೆ. ಅವರ ಜೊತೆ ಚರ್ಚಿಸುತ್ತಿದ್ದೆ. ಅದೆಲ್ಲ ಕಲಿಯುತ್ತಿದ್ದೆ. ಇನ್ನು ಮುಂದೆಯೂ ಕನ್ನಡದಲ್ಲಿ ಬರೆಯುವುದನ್ನು ಮುಂದುವರಿಸುತ್ತೇನೆ.

ಬಿಗ್‌ಬಾಸ್ ಮನೆ ನೆನಪಾದ್ರೆ ಅಳು ಬರತ್ತೆ. ಮನೆಯೊಳಗೆ ಕುಕ್ ಮಾಡುವುದು, ಬಾತ್ ರೂಮ್ ಕ್ಲೀನ್ ಮಾಡುವುದು, ಕಿಚನ್ ಕ್ಲೀನ್ ಮಾಡುವುದು, ನನ್ನ ಹಾಸಿಗೆ ನಾನೇ ನೋಡಿಕೊಳ್ಳಬೇಕು, ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಇದೆಲ್ಲದರ ಮಹತ್ವ ಬಿಗ್‌ಬಾಸ್ ಮನೆಯೊಳಗೆ ಬಂದ ಮೇಲೆ ಅರ್ಥವಾಯ್ತು. ಅಲ್ಲಿನ ನನ್ನ ಫ್ರೆಂಡ್ಸ್‌ ಎಲ್ರನ್ನೂ ನಾನು ತುಂಬ ಮಿಸ್ ಮಾಡ್ಕೋತೀನಿ. ನಗುವಿರಲಿ, ಅಳುವಿರಲಿ ಜೊತೆಗೇ ಇರ್ತಿದ್ವಿ. ಅದನ್ನು ಮಿಸ್ ಮಾಡ್ಕೋತೀನಿ. ಸಂಗೀತಾ ಬಂದು ಎಲ್ಲರನ್ನು ಹೆದರಿಸುತ್ತಿದ್ರು, ತಲೆದಿಂಬಿನಲ್ಲಿ ಹೊಡೆದಾಡಿಕೊಳ್ತಿದ್ವಿ. ಅವೆಲ್ಲಾನೂ ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್ ಶೋಗೆ ನಾನು ತುಂಬ ಕೃತಜ್ಞಳಾಗಿದೀನಿ. ನನಗೆ ಇನ್ನೊಮ್ಮೆ ಅವಕಾಶ ಸಿಕ್ರೆ ಬಂದೇ ಬರ್ತಿನಿ. ಬರುವ ಆಸೆಯೂ ಇದೆ.

LEAVE A REPLY

Connect with

Please enter your comment!
Please enter your name here