ದೀಪಕ್‌ ಅರಸ್‌ ನಿರ್ದೇಶನದ ‘ಶುಗರ್‌ ಫ್ಯಾಕ್ಟರಿ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಡಾರ್ಲಿಂಗ್‌ ಕೃಷ್ಣ, ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ, ರಂಗಾಯಣ ರಘು ಚಿತ್ರದ ಪ್ರಮುಖ ಪಾತ್ರಧಾರಿಗಳು. ಇದೇ ನವೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನಟರಾದ ಪ್ರೇಮ್ ಮತ್ತು ನಿಖಿಲ್ ಕುಮಾರಸ್ವಾಮಿ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ನಿರ್ದೇಶಕ ದೀಪಕ್‌ ಅರಸ್‌ ಮಾತನಾಡಿ, ‘ಶುಗರ್ ಫ್ಯಾಕ್ಟರಿ ಎಂದರೆ ಒಂದು ಪಬ್‌ನ ಹೆಸರು. ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ. ಹಾಗಾಗಿ ನಮ್ಮ ಚಿತ್ರಕ್ಕೆ ಶುಗರ್ ಫ್ಯಾಕ್ಟರಿ ಎಂದು ಹೆಸರಿಟ್ಟಿದ್ದೇವೆ‌. ಹಾಗಂತ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಅಷ್ಟೇ ಇಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ ಕೂಡ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಈಗಿನ ಯುವ ಪೀಳಿಗೆಗೆ ಸಿನಿಮಾ ಕನೆಕ್ಟ್‌ ಆಗುತ್ತೆ’ ಎನ್ನುತ್ತಾರೆ.

ಡಾರ್ಲಿಂಗ್‌ ಕೃಷ್ಣ ಈ ಸಿನಿಮಾದ ಹೀರೋ. ‘ಲವ್ ಮಾಕ್ಟೇಲ್’ ಚಿತ್ರದ ನಂತರ ಅವರು ಕೇಳಿದ್ದ ಕತೆಯಂತೆ ಇದು. ಪ್ರಸ್ತುತ ಜನರೇಷನ್‌ ಇಷ್ಟಪಡುವ ಕತೆಯಿದು ಎನ್ನುತ್ತಾರವರು. ಆಧುನಿಕ ದಿನಗಳ ಸಂಬಂಧಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿಹಾಸ್ಯದಲ್ಲಿ ಹೇಳುವ ಪ್ರಯತ್ನ ನಡೆದಿದೆ ಎನ್ನುವ ಸೂಚನೆ ಚಿತ್ರದ ಟ್ರೇಲರ್‌ನಲ್ಲಿ ಸಿಗುತ್ತದೆ. ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ, ರಂಗಾಯಣ ರಘು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Balamani Productions ಬ್ಯಾನರ್‌ ಅಡಿಯಲ್ಲಿ ಆರ್‌ ಗಿರೀಶ್‌ ಸಿನಿಮಾ ನಿರ್ಮಿಸಿದ್ದಾರೆ. ಇದೇ ನವೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here