ಅರುಮುಗ ಕುಮಾರ್ ನಿರ್ದೇಶನದಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವ ‘VJS 51’ ತಮಿಳು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ಕನ್ನಟ ನಟಿ ರುಕ್ಮಿಣಿ ವಸಂತ್ ಕಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ವಿಜಯ್ ಸೇತುಪತಿ ಮತ್ತು ಕನ್ನಡತಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘VJS 51’ ತಮಿಳು ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. 2018ರ ಬ್ಲಾಕ್ ಕಾಮಿಡಿ ‘ಒರು ನಲ್ಲ ನಾಲ್ ಪಾತು ಸೋಲ್ರೆನ್’ ಸಿನಿಮಾದ ನಂತರ ವಿಜಯ್ ಸೇತುಪತಿ, ನಿರ್ದೇಶಕ ಅರುಮುಗ ಕುಮಾರ್ ಅವರೊಂದಿಗೆ ಇಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಮಲೇಷಿಯಾದ ಬಾಟು ಕೇವ್ಸ್ ಮುರುಗನ್ ದೇವಸ್ಥಾನದಲ್ಲಿ ನಡೆದ ಚಿತ್ರೀಕರಣದ ಕೊನೆಯ ದಿನದ ಫೋಟೋಗಳನ್ನು ನಿರ್ದೇಶಕರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ಕನ್ನಟ ನಟಿ ರುಕ್ಮಿಣಿ ವಸಂತ್ ಕಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ ಎಂದು ಪೋಸ್ಟ್ ಖಚಿತಪಡಿಸಿದೆ. ಯೋಗಿ ಬಾಬು, ಬಬ್ಲೂ ಪೃಥ್ವೀರಾಜ್, ರಾಜಕುಮಾರ್, ದಿವ್ಯಾ ಪಿಳ್ಳೈ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. 7Cs Entertaintment ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸುತ್ತಿದ್ದಾರೆ.
That’s a wrap on #VJS51 🎥✨
— Arumugakumar (@Aaru_Dir) November 30, 2023
An exhilarating Adventurous journey concluded at a breathtaking backdrop of Batu Caves Murugan Temple in Malaysia 🥳
Get ready for an action extravaganza✨
Title & First Look Soon
#VJS51
#MakkalSelvan @VijaySethuOffl @7CsPvtPte @Aaru_Dir… pic.twitter.com/fVDOOv64i1