ಮನೋಜ್‌ ಕುಮಾರ್‌ ನಟನೆಯ ‘ಧರಣಿ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ‘ಕೋಳಿ ಪಂದ್ಯದ ಸುತ್ತ ಬೆಸೆದುಕೊಂಡಿರುವ ಈ ಚಿತ್ರದಲ್ಲಿ ಈವರೆಗೆ ಎಲ್ಲೂ ಅನಾವರಣಗೊಳ್ಳದ ಸಾಮಾಜಿಕ ವ್ಯವಸ್ಥೆ, ಸಮುದಾಯದ ಸಮಸ್ಯೆಗಳು ದೃಶ್ಯ ರೂಪದಲ್ಲಿ ತೆರೆದುಕೊಳ್ಳಲಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಧೀರ್‌ ಶಾನುಭೋಗ್‌.

ಸುಧೀರ್‌ ಶಾನುಭೋಗ್‌ ನಿರ್ದೇಶಿಸುತ್ತಿರುವ ‘ಧರಣಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಅಪ್ಪಟ ದೇಸೀ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ಕೋಳಿ ಪಂದ್ಯ ಸೇರಿದಂತೆ ಅನೇಕ ಹೊಸ ವಿಚಾರಗಳು ಸೇರಿಕೊಂಡಿವೆ. ಈ ಹಿಂದೆ ‘ಟಕ್ಕರ್‌’ ಸಿನಿಮಾದಲ್ಲಿ ನಟಿಸಿದ್ದ ಮನೋಜ್‌ ಕುಮಾರ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಶಿವಮೊಗ್ಗ ಜೈಲು, ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಚನ್ನಪಟ್ಟಣ ಸೇರಿದಂತೆ ಅನೇಕ ಜಾಗಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇತ್ತೀಚೆಗೆ ಶಿವಮೊಗ್ಗ ಜೈಲಿನಲ್ಲಿ ಬಾರೀ ಹೊಡೆದಾಟದ ದೃಶ್ಯಗಳ ಚಿತ್ರೀಕರಣ ನೆರವೇರಿದೆ. ಮುನ್ನೂರಕ್ಕೂ ಅಧಿಕ ಜ್ಯೂನಿಯರ್‌ ಕಲಾವಿದರು, ಹತ್ತಾರು ಫೈಟರ್‌ಗಳು, ನಾಯಕ, ನಾಯಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದ ದೃಶ್ಯಗಳು ಸೆರೆಯಾಗಿದೆ. ಸಾಹಸ ದೃಶ್ಯಗಳ ಜೊತೆಗೆ ಒಂದು ಹಾಡನ್ನು ಕೂಡಾ ಇಲ್ಲಿ ಚಿತ್ರೀಕರಿಸಲಾಗಿದೆ.

ಸದ್ಯ ‘ಧರಣಿ’ ಚಿತ್ರತಂಡ ಚನ್ನಪಟ್ಟಣದಲ್ಲಿ ಬೀಡುಬಿಟ್ಟಿದ್ದು, ರಾಘು ಮೈಸೂರು ನಿರ್ಮಿಸಿರುವ ವಿಶೇಷ ಸೆಟ್‌ ಮತ್ತು ಹಳ್ಳಿಯ ವಾತಾವರಣದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಾಗುತ್ತಿದೆ. ‘ಕೋಳಿ ಪಂದ್ಯದ ಸುತ್ತ ಬೆಸೆದುಕೊಂಡಿರುವ ಈ ಚಿತ್ರದಲ್ಲಿ ಈವರೆಗೆ ಎಲ್ಲೂ ಅನಾವರಣಗೊಳ್ಳದ ಸಾಮಾಜಿಕ ವ್ಯವಸ್ಥೆ, ಸಮುದಾಯದ ಸಮಸ್ಯೆಗಳು ದೃಶ್ಯ ರೂಪದಲ್ಲಿ ತೆರೆದುಕೊಳ್ಳಲಿದೆ’ ಎನ್ನುವುದು ನಿರ್ದೇಶಕ ಸುಧೀರ್‌ ಶಾನುಭೋಗ್‌ ಅವರ ವಿವರಣೆ. A Cube Films ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಸಂಗೀತ ಸಂಯೋಜನೆ, ಅರುಣ್‌ ಸುರೇಶ್‌ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸಂಪತ್‌ ಮೈತ್ರೇಯ, ‘ಫ್ರೆಂಚ್‌ ಬಿರಿಯಾನಿ’ ಮಹಂತೇಶ್‌, ಸತ್ಯರಾಜ್‌ ಮೊದಲಾದವರು ಅಭಿನಯಿಸಿದ್ದಾರೆ. ಮನೋಜ್‌ ಅವರಿಗೆ ಜೋಡಿಯಾಗಿ ರವೀಕ್ಷಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here