69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಘೋಷಣೆಯಾಗಿವೆ. ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಅತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಕುರಿತ ಸಾಕ್ಷ್ಯಚಿತ್ರ ಮತ್ತು ಹಿರಿಯ ಪತ್ರಕರ್ತ ಬಿ ಎನ್‌ ಸುಬ್ರಹ್ಮಣ್ಯ ಅವರಿಗೆ ಜ್ಯೂರಿ ಪ್ರಶಸ್ತಿಗಳು ಸಂದಿವೆ. ನಿರ್ದೇಶಕ ಜೇಕಬ್‌ ವರ್ಗೀಸ್‌ ‘ಆಯುಷ್ಮಾನ್‌’ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಅನ್ವೇಷಣಾ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ‘Rocketry’ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದರೆ ಅಲ್ಲು ಅರ್ಜುನ್‌ ಅತ್ಯುತ್ತಮ ನಟ (ಪುಷ್ಪ), ಅಲಿಯಾ ಭಟ್‌ ಮತ್ತು ಕೃತಿ ಸನೂನ್‌ (ಗಂಗೂಬಾಯಿ ಮತ್ತು ಮಿಮಿ) ಅತ್ಯುತ್ತಮ ನಟಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಮನ್ನಣೆ ಪಡೆದಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಕುರಿತ ಸಾಕ್ಷ್ಯಚಿತ್ರ ‘ಬಾಳೆ ಬಂಗಾರ’ ಮತ್ತು ಹಿರಿಯ ಪತ್ರಕರ್ತ ಬಿ ಎನ್‌ ಸುಬ್ರಹ್ಮಣ್ಯ ಅವರಿಗೆ ಜ್ಯೂರಿ ಪ್ರಶಸ್ತಿಗಳು ಘೋಷಣೆಯಾಗಿವೆ. ಅತ್ಯುತ್ತಮ ಅನ್ವೇಷಣಾ ಸಿನಿಮಾ (Best Exploration film) ವಿಭಾಗದಲ್ಲಿ ಜೇಕಬ್‌ ವರ್ಗಿಸ್‌ ನಿರ್ದೇಶನದ ‘ಆಯುಷ್ಮಾನ್‌’ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಈ ಸಾಕ್ಷ್ಯಚಿತ್ರ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರ್ಮಾಣವಾಗಿದೆ.

ಪ್ರಶಸ್ತಿ ಪಟ್ಟಿ

ಅತ್ಯುತ್ತಮ ಸಿನಿಮಾ : ರಾಕೆಟ್ರೀ
ಅತ್ಯುತ್ತಮ ನಿರ್ದೇಶಕ : ನಿಖಿಲ್‌ ಮಹಾಜನ್‌ (ಗೋಧಾವರಿ)
ಅತ್ಯುತ್ತಮ ಮನರಂಜನೆಯ ಸಿನಿಮಾ : RRR (ತೆಲುಗು)
ನರ್ಗಿಸ್‌ ದತ್‌ ಪ್ರಶಸ್ತಿ (National Integration) : ದಿ ಕಾಶ್ಮೀರ್‌ ಫೈಲ್ಸ್‌
ಅತ್ಯುತ್ತಮ ನಟ : ಅಲ್ಲು ಅರ್ಜುನ್‌
ಅತ್ಯುತ್ತಮ ನಟಿ : ಅಲಿಯಾ ಭಟ್‌ (ಗಂಗೂಬಾಯಿ) ಮತ್ತು ಕೃತಿ ಸನೂನ್‌ (ಮಿಮಿ)
ಅತ್ಯುತ್ತಮ ಪೋಷಕ ನಟ : ಪಂಕಜ್‌ ತ್ರಿಪಾಠಿ (ಮಿಮಿ)
ಅತ್ಯುತ್ತಮ ಪೋಷಕ ನಟಿ : ಪಲ್ಲವಿ ಜೋಷಿ (ದಿ ಕಾಶ್ಮೀರ್‌ ಫೈಲ್ಸ್‌)
ಅತ್ಯುತ್ತಮ ಬಾಲ ಕಲಾವಿದ : ಭವಿನ್‌ ರಾಬರಿ (ಚೆಲ್ಲೋ ಶೋ)
ಅತ್ಯುತ್ತಮ ಚಿತ್ರಕಥೆ (Original) : ಶಾಹಿ ಕಬೀರ್‌ (ನಾಯಟ್ಟು)
ಅತ್ಯುತ್ತಮ ಚಿತ್ರಕಥೆ (Adapted) : ಸಂಜಯ್‌ ಲೀಲಾ ಬನ್ಸಾಲಿ ಮತ್ತು ಉತ್ಕರ್ಷಿಣಿ ವಸಿಷ್ಠ (ಗಂಗೂಬಾಯಿ ಕಥೈವಾಡಿ)
ಅತ್ಯುತ್ತಮ ಸಂಭಾಷಣೆ : ಉತ್ಕರ್ಷಿಣಿ ವಸಿಷ್ಠ ಮತ್ತು ಪ್ರಕಾಶ್‌ ಕಪಾಡಿಯಾ (ಗಂಗೂಬಾಯಿ)
ಅತ್ಯುತ್ತಮ ಸಂಗೀತ ನಿರ್ದೇಶನ (Songs) : ದೇವಿಶ್ರೀ ಪ್ರಸಾದ್‌ (ಪುಷ್ಪ)
ಅತ್ಯುತ್ತಮ ಸಂಗೀತ ನಿರ್ದೇಶನ (Background Music) : ಎಂ ಎಂ ಕೀರವಾಣಿ (RRR)
ಅತ್ಯುತ್ತಮ ಗಾಯಕ : ಕಾಲಭೈರವ (RRR)
ಅತ್ಯುತ್ತಮ ಗಾಯಕಿ : ಶ್ರೇಯಾ ಘೋಷಾಲ್‌ (Iravin Nizhal)
ಅತ್ಯುತ್ತಮ ಗೀತರಚನೆಕಾರ : ಚಂದ್ರಬೋಸ್‌ (‘ಕೊಂಡಪೋಲಂ’ ಸಿನಿಮಾದ ‘ಧಂ ಧಂ ಧಂ’ ಗೀತೆ)
ಅತ್ಯುತ್ತಮ ಹಿಂದಿ ಸಿನಿಮಾ : ಸರ್ದಾರ್‌ ಉಧಾಮ್‌
ಅತ್ಯುತ್ತಮ ಕನ್ನಡ ಸಿನಿಮಾ : 777 ಚಾರ್ಲಿ
ಅತ್ಯುತ್ತಮ ಮಲಯಾಳಂ ಸಿನಿಮಾ : ಹೋಮ್‌
ಅತ್ಯುತ್ತಮ ಗುಜರಾತಿ ಸಿನಿಮಾ : ಚೆಲ್ಲೋ ಶೋ
ಅತ್ಯುತ್ತಮ ತಮಿಳು ಸಿನಿಮಾ : ಕಡೈಸಿ ವಿವಸಾಯಿ
ಅತ್ಯುತ್ತಮ ತೆಲುಗು ಸಿನಿಮಾ : ಉಪ್ಪೆನಾ
ಅತ್ಯುತ್ತಮ ಮೈಥಿಲಿ ಸಿನಿಮಾ : ಸಮಾನಾಂತರ್‌
ಅತ್ಯುತ್ತಮ ಮಿಶಿಂಗ್‌ ಸಿನಿಮಾ : ಬೂಂಬಾ ರೈಡ್‌
ಅತ್ಯುತ್ತಮ ಮರಾಠಿ ಸಿನಿಮಾ : ಏಕ್ಡ ಕಾಯ್‌ ಝಲಾ
ಅತ್ಯುತ್ತಮ ಬೆಂಗಾಲಿ ಸಿನಿಮಾ : ಕಲ್ಕೊಕ್ಹೋ
ಅತ್ಯುತ್ತಮ ಅಸ್ಸಾಮಿ ಸಿನಿಮಾ : ಅನೂರ್‌
ಅತ್ಯುತ್ತಮ Meitelilon ಸಿನಿಮಾ : Eikhoigi Yum
ಅತ್ಯುತ್ತಮ ಒಡಿಯಾ ಸಿನಿಮಾ : ಪ್ರತೀಕ್ಷ್ಯ
ಅತ್ಯುತ್ತಮ ಸಿನಿಮಾ (ಚೊಚ್ಚಲ ನಿರ್ದೇಶನ) : ವಿಷ್ಣು ಮೋಹನ್‌ (ಮೆಪ್ಪಡಿಯಾನ್‌)
ಅತ್ಯುತ್ತಮ ಸಿನಿಮಾ (ಸಾಮಾಜಿಕ ಸಮಸ್ಯೆ ಕುರಿತು) : ಅನುನಾದ್‌ (ದಿ ರೆಸೊನಾನ್ಸ್‌)
ಅತ್ಯುತ್ತಮ ಸಿನಿಮಾ (ಪರಿಸರ ಕಾಳಜಿ) : ಆವಸವ್ಯೂಹಂ
ಅತ್ಯುತ್ತಮ ಮಕ್ಕಳ ಸಿನಿಮಾ : ಗಾಂಧಿ & ಕೋ
ಅತ್ಯುತ್ತಮ ಆಡಿಯೋಗ್ರಫಿ (Location Sound Recordist) : ಅರುಣ್‌ ಅಶೋಕ್‌ & ಸೋನು ಕೆ ಪಿ (ಚವಿಟ್ಟು)
ಅತ್ಯುತ್ತಮ ಆಡಿಯೋಗ್ರಫಿ (Sound Designer) : ಅನೀಶ್‌ ಬಸು (ಝಿಲ್ಲಿ)
ಅತ್ಯುತ್ತಮ ಆಡಿಯೋಗ್ರಫಿ (Re-recordist of the final mixed track) : ಸಿನಾಯ್‌ ಜೋಸೆಫ್‌ (ಸರ್ದಾರ್‌ ಉಧಾಮ್‌)
ಅತ್ಯುತ್ತಮ ಕೊರಿಯೋಗ್ರಫಿ : ಪ್ರೇಮ್‌ ರಕ್ಷಿತ್‌ (RRR)
ಅತ್ಯುತ್ತಮ ಸಿನಿಮಾಟೋಗ್ರಫಿ : ಅವಿಕ್‌ ಮುಖ್ಯೋಪಾಧ್ಯಾಯ (ಸರ್ದಾರ್‌ ಉಧಾಮ್‌)
ಅತ್ಯುತ್ತಮ ವಸ್ತ್ರವಿನ್ಯಾಸ : ವೀರ ಕಾಪುರ್‌ ಈ (ಸರ್ದಾರ್‌ ಉಧಾಮ್‌)
ಅತ್ಯುತ್ತಮ ಸ್ಪೆಷಲ್‌ ಎಫೆಕ್ಟ್ಸ್‌ : ಶ್ರೀನಿವಾಸ್‌ ಮೋಹನ್‌ (RRR)
ಅತ್ಯುತ್ತಮ ಪ್ರೊಡಕ್ಷನ್‌ ಡಿಸೈನ್‌ : Dmitrii Malich ಮತ್ತು ಮಾನಸಿ ಧ್ರುವ ಮೆಹ್ತಾ (ಸರ್ದಾರ್‌ ಉಧಾಮ್‌)
ಅತ್ಯುತ್ತಮ ಸಂಕಲನ : ಸಂಜಯ್‌ ಲೀಲಾ ಬನ್ಸಾಲಿ (ಗಂಗೂಬಾಯಿ)
ಅತ್ಯುತ್ತಮ ಪ್ರಸಾದನ : ಪ್ರೀತಿಶೀಲ್‌ ಸಿಂಗ್‌ (ಗಂಗೂಬಾಯಿ)
ಅತ್ಯುತ್ತಮ ಸಾಹಸ ನಿರ್ದೇಶನ : ಕಿಂಗ್‌ ಸೋಲೊಮನ್‌ (RRR)
ವಿಶೇಷ ಜ್ಯೂರಿ ಪ್ರಶಸ್ತಿ : ಶೇರ್‌ಶಾಹ್‌, ವಿಷ್ಣುವರ್ಧನ್‌
Special Mention: ದಿವಂಗತ ಶ್ರೀ ನಲ್ಲಂದಿ (ಕಡೈಸಿ ವಿವಸಾಯಿ), ಅರಣ್ಯ ಗುಪ್ತಾ & ಬಿಸ್ವಾಸ್‌ (ಝಿಲ್ಲಿ), ಇಂದ್ರನ್ಸ್‌ (ಹೋಂ), ಜಹಾನರ ಬೇಗಂ (ಅನೂರ್‌)
ಅತ್ಯುತ್ತಮ Non-feature film: ಏಕ್‌ ಥಾ ಗಾವೋ
ಅತ್ಯುತ್ತಮ ನಿರ್ದೇಶನ (Non-feature film) : ಬಕೂಲ್‌ ಮಾಟಿಯಾನಿ (ಸ್ಮೈಲ್‌ ಪ್ಲೀಸ್‌)
ಅತ್ಯುತ್ತಮ ಚೊಚ್ಚಲ ನಿರ್ದೇಶನ (Non-feature film) | ಪಾಂಚಿಕಾ (ಅಂಕಿಲ್‌ ಕೊಠಾರಿ)
ಅತ್ಯುತ್ತಮ Anthropological Film : ಫೈರ್‌ ಆನ್‌ ಎಡ್ಜ್‌
ಅತ್ಯುತ್ತಮ ಬಯೋಗ್ರಾಫಿಕಲ್‌ ಸಿನಿಮಾ : ರುಕು ಮಾತಿರ್‌ ದುಕು ಮಝಿ, ಬಿಯಾಂಡ್‌ ಬ್ಲಾಸ್ಟ್‌
ಅತ್ಯುತ್ತಮ Arts films : ಟಿ ಎನ್‌ ಕೃಷ್ಣನ್‌ ಬೋ ಸ್ಟ್ರಿಂಗ್ಸ್‌ ಟು ಡಿವೈನ್‌
ಅತ್ಯುತ್ತಮ Science & Technology Films : ಎಥೋಸ್‌ ಆಫ್‌ ಡಾರ್ಕ್‌ನೆಸ್‌
ಅತ್ಯುತ್ತಮ ಪ್ರೊಮೋಷನಲ್‌ ಸಿನಿಮಾ : ಎಂಡೇಂಜರ್ಡ್‌ ಹೆರಿಟೇಜ್‌ ವರ್ಲೀ ಆರ್ಟ್‌
ಅತ್ಯುತ್ತಮ ಪರಿಸರ ಸಿನಿಮಾ (Non-feature film) : ಮುನ್ನಂ ವಲವು
ಅತ್ಯುತ್ತಮ ಸಿನಿಮಾ (ಸಾಮಾಜಿಕ ಸಮಸ್ಯೆ, Non-feature film) : ಮಿತು ದಿ, ಥ್ರೀ ಟೂ ಒನ್‌
ಅತ್ಯುತ್ತಮ Investigative film : ಲುಕಿಂಗ್‌ ಫಾರ್‌ ಚಲನ್‌
ಅತ್ಯುತ್ತಮ Exploration film : ಆಯುಷ್ಮಾನ್‌
ಅತ್ಯುತ್ತಮ Educational film : ಸಿರ್ಪಿಗಲಿನ್‌ ಸಿರ್ಪಂಗಳ್‌
ಅತ್ಯುತ್ತಮ ಕಿರು ಚಿತ್ರ (Fiction) : ದಾಲ್‌ ಭಾಟ್‌
ಅತ್ಯುತ್ತಮ ಅನಿಮೇಷನ್‌ ಸಿನಿಮಾ : ಕಂಡಿಟ್ಟುಂಡು
ಅತ್ಯುತ್ತಮ ಸಿನಿಮಾ (Family Values) : ಚಾಂದ್‌ ಸಾನ್ಸೆ
ಅತ್ಯುತ್ತಮ ಸಿನಿಮಾಟೋಗ್ರಫಿ (Non – Reature film) : ಬಿಟ್ಟು ರಾವತ್‌ (ಪಾತಾಳ್‌)
ಅತ್ಯುತ್ತಮ Audiography (Re-recordist of the final mixed track) (Non-feature film) : ಉನ್ನಿ ಕೃಷ್ಣನ್‌ (ಏಕ್‌ ಥಾ ಗಾವೋ)
ಅತ್ಯುತ್ತಮ Production Sound Recordist (Location/Sync Sound) (Non-feature film) : ಸುರುಚಿ ಶರ್ಮ (ಮೀನ್‌ ರಾಗ್‌)
ಅತ್ಯುತ್ತಮ ಸಂಕಲನ (Non-feature film) : ಅಭ್ರೋ ಬ್ಯಾನರ್ಜಿ (If Memory Serves Me Right)
ಅತ್ಯುತ್ತಮ ಸಂಗೀತ ನಿರ್ದೇಶನ (Non-feature film) : ಇಶಾನ್‌ ದಿವೇಚಾ (Succelent)
ಅತ್ಯುತ್ತಮ ವಾಯ್ಸ್‌ ಓವರ್‌ (Non-feature film) : ಕುಲಡ ಕುಮಾರ್‌ ಭಟ್ಟಾಚಾರ್‌ಜೀ (ಹಥಿಬೊಂಧು)
Special Mention (Non-feature film) : ಅನಿರುದ್ಧ ಜಟ್ಕರ್‌ (ಬಾಳೆ ಬಂಗಾರ), ಶ್ರೀಕಾಂತ್‌ ದೇವಾ (ಕರುವರೈ), ಶ್ವೇತಾ ಕುಮಾರ್‌ ದಾಸ್‌ (ದಿ ಹೀಲಿಂಗ್‌ ಟಚ್‌), ರಾಮ್‌ ಕಮಲ್‌ ಮುಖರ್ಜಿ (ಏಕ್‌ ದುವಾ)
ವಿಶೇಷ Jury Award (Non-feature film) : ಶೇಖರ್‌ ಬಾಪು ರಂಖಂಬೆ (ರೇಖಾ)
ಅತ್ಯುತ್ತಮ ಸಿನಿಮಾ ಪುಸ್ತಕ : Music by Laxmikant Pyarelal: The Incredibly Melodious Journey by Rajiv Vijayakar
ಅತ್ಯುತ್ತಮ ಸಿನಿಮಾ ವಿಮರ್ಶಕ : ಪುರುಷೋತ್ತಮ ಚಾರ್ಯುಲು
ಅತ್ಯುತ್ತಮ ಸಿನಿಮಾ ವಿಮರ್ಶಕ (Special Mention) : ಬಿ ಎನ್‌ ಸುಬ್ರಹ್ಮಣ್ಯ

Previous article20 ವರ್ಷಗಳ ನಂತರ ಮತ್ತೆ ಜೊತೆಯಾದ ಪ್ರೇಮ್‌ – ದರ್ಶನ್‌ | KVN ಪ್ರೊಡಕ್ಷನ್ಸ್‌ ಸಿನಿಮಾ
Next article‘ಮಾರಿ’ಯಾಗಿ ಕಾಡದ ಟೋಬಿ

LEAVE A REPLY

Connect with

Please enter your comment!
Please enter your name here