ಲಿಜೋ ಜೋಸ್‌ ಪೆಲ್ಲಿಸ್ಸೆರಿ ನಿರ್ದೇಶನದ ‘ಮಲೈಕೋಟೈ ವಾಲಿಬನ್’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದು ಸ್ವಾತಂತ್ರ್ಯ ಪೂರ್ವದ ಕತೆ. ಚಿತ್ರದಲ್ಲಿ ಮೋಹನ್ ಲಾಲ್ ನುರಿತ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಸೋನಾಲಿ ಕುಲಕರ್ಣಿ, ಕಥಾ ನಂದಿ ಚಿತ್ರದ ಇಬ್ಬರು ನಾಯಕಿಯರು.

ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮಲೈಕೋಟೈ ವಾಲಿಬನ್’ ಮಲಯಾಳಂ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದಾರೆ. ‘ನೀವು ನೋಡಿದ್ದು ನಿಜ, ನೀವು ನೋಡದಿರುವುದು ಸುಳ್ಳು. ನೀವು ಇಲ್ಲಿಯವರೆಗೆ ನೋಡಿರುವುದು ಸುಳ್ಳು, ಮತ್ತು ಈಗ ನಾನು ನಿಮಗೆ ತೋರಿಸುತ್ತಿರುವುದು ಮಾತ್ರ ಸತ್ಯ’ ಎಂದು ಟೀಸರ್‌ನಲ್ಲಿ ಮೋಹನ್‌ಲಾಲ್ ಹೇಳುತ್ತಾರೆ. ಇದು ಸ್ವಾತಂತ್ರ್ಯ ಪೂರ್ವದ ಕತೆ. ಚಿತ್ರದಲ್ಲಿ ಮೋಹನ್ ಲಾಲ್ ನುರಿತ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ರಾಜಸ್ಥಾನ, ಚೆನ್ನೈ ಮತ್ತು ಪುದುಚೇರಿಗಳಲ್ಲಿ ಸುಮಾರು 130 ದಿನಗಳ ಕಾಲ ಚಿತ್ರೀಕರಿಸಲಾದ ಈ ಸಿನಿಮಾದಲ್ಲಿ ಮರಾಠಿ ನಟಿ ಸೋನಾಲಿ ಕುಲಕರ್ಣಿ, ಬಂಗಾಳಿ ನಟಿ ಕಥಾ ನಂದಿ (‘ತಲೈಕೂತಲ್‌’ ಸಿನಿಮಾ ಖ್ಯಾತಿಯ ನಟಿ) ಕನ್ನಡ ನಟ ಡ್ಯಾನಿಶ್‌ ಸೇಟ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

John ಮತ್ತು Mary Creative ಬ್ಯಾನರ್‌ ಅಡಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ಮಧು ನೀಲಕಂಠನ್ ಛಾಯಾಗ್ರಹಣ, ಪ್ರಶಾಂತ್ ಪಿಳ್ಳೈ ಸಂಗೀತ ಸಂಯೋಜನೆ, ದೀಪು ಜೋಸೆಫ್ ಸಂಕಲನವಿದೆ. ಜನವರಿ 25, 2024 ರಂದು ಮೂಲ ಮಲಯಾಳಂ ಸೇರಿದಂತೆ, ತೆಲುಗು, ತಮಿಳು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಮೋಹನ್ ಲಾಲ್ ಈ ಹಿಂದೆ ರಜನಿಕಾಂತ್ ಅವರ ‘ಜೈಲರ್’ ಮತ್ತು ಶೈಜಿ ಕೈಲಾಸ್ ಅವರ ‘ಅಲೋನ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಜೀತು ಜೋಸೆಫ್ ಅವರ ‘ನೇರು’, ‘ಲೂಸಿಫರ್’ ಚಿತ್ರದ ಸೀಕ್ವೆಲ್ ‘ಎಂಪುರಾನ್’, ವಿಷ್ಣು ಮಂಚು ಅವರ ‘ಕಣ್ಣಪ್ಪ’, ನಂದ ಕಿಶೋರ್ ನಿರ್ದೇಶನದ ‘ವೃಷಭ ರಾಮ್’, ‘ಬರೋಜ್’ ಸದ್ಯ ಚಿತ್ರೀಕರಣದಲ್ಲಿರುವ ಮೋಹನ್‌ ಲಾಲ್‌ರ ಇತರೆ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here