‘ದಹಾದ್‌’ ಸರಣಿಯಲ್ಲಿನ ನಟನೆಗಾಗಿ ವಿಜಯ್‌ ವರ್ಮ ‘ಅತ್ಯುತ್ತಮ ನಟ’ ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್‌ ಪಡೆದಿದ್ದಾರೆ. ರಾಜಶ್ರೀ ದೇಶಪಾಂಡೆ ಅವರಿಗೆ ‘ಅತ್ಯುತ್ತಮ ನಟಿ’ ಮತ್ತು ಶ್ರೇಷ್ಠ ಛಾಯಾಗ್ರಹಣಕ್ಕಾಗಿ ಪ್ರತೀಕ್‌ ಶಾ ಕೂಡ ಗೌರವಕ್ಕೆ ಪಾತ್ರರಾಗಿದ್ದಾರೆ.

ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್-2023ರಲ್ಲಿ ‘ಟ್ರಯಲ್ ಬೈ ಫೈಯರ್’ ಹಿಂದಿ ಸರಣಿಗಾಗಿ ರಾಜಶ್ರೀ ದೇಶಪಾಂಡೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ವಿಜಯ್ ವರ್ಮಾ ಅವರು Prime Videoದ ‘ದಹಾದ್‌’ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. Prime Videoದ ‘ಜುಬಿಲಿ’ ಸರಣಿಯ ಛಾಯಾಗ್ರಹಣಕ್ಕೆ ಪ್ರತೀಕ್ ಶಾ ‘ಅತ್ಯುತ್ತಮ ಛಾಯಾಗ್ರಹಕ’ ಪ್ರಶಸ್ತಿ ಪಡೆದಿದ್ದಾರೆ. Netflixನ ‘ಟ್ರಯಲ್‌ ಬೈ ಫಯರ್‌’ ಸರಣಿಯಲ್ಲಿ ರಾಜಶ್ರೀ ದೇಶಪಾಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸರಣಿಯಲ್ಲಿ ಭಾವನಾತ್ಮಕ ಮತ್ತು ಸತ್ಯಾಸತ್ಯತೆಯಿಂದ ಕೂಡಿದ್ದ ಪಾತ್ರ ನಿರ್ವಹಿಸಿದ ರಾಜಶ್ರೀ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ಕುರಿತು ಮಾತನಾಡಿರುವ ರಾಜಶ್ರೀ, ‘ಈ ಪ್ರಶಸ್ತಿಯು ಕೇವಲ ವೈಯಕ್ತಿಕ ವಿಜಯವಲ್ಲ, ಸರಣಿಯು ಸಾಮೂಹಿಕ ಪ್ರಯತ್ನ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಇದರ ಕಥೆ ಹೇಳುವ ಶಕ್ತಿ ಮತ್ತು ಭಾವನೆಗಳ ಭಾಷೆಗೆ ಸಿಕ್ಕ ಮನ್ನಣೆ ಎನ್ನಬಹುದು. ಇದಕ್ಕೆಲ್ಲ ತಂಡದ ಸದಸ್ಯರ ಪರಿಶ್ರಮ ಮತ್ತು ಸಮರ್ಪಣೆಯೇ ಕಾರಣ’ ಎಂದಿದ್ದಾರೆ. ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಪ್ರಶಸ್ತಿಗಳನ್ನು ಸಿಂಗಾಪುರದ ಉತ್ಸವದ ಭಾಗವಾಗಿ ಪ್ರತಿ ವರ್ಷ ಡಿಸೆಂಬರ್‌ನಲ್ಲಿ
ನೀಡಲಾಗುತ್ತದೆ. ಪ್ರಶಸ್ತಿಯನ್ನು ಏಷ್ಯಾ-ಪೆಸಿಫಿಕ್ ಪ್ರದೇಶದ 16 ರಾಷ್ಟ್ರಗಳಾದ್ಯಂತ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿನ ಶ್ರೇಷ್ಠ ಕಲಾವಿದರನ್ನು ಗುರುತಿಸಿ ನೀಡಲಾಗುತ್ತದೆ.

LEAVE A REPLY

Connect with

Please enter your comment!
Please enter your name here