ಅರುಣ್‌ ರಾಜ ಕಾಮರಾಜ್‌ ನಿರ್ದೇಶನದ ‘ಲೇಬಲ್‌’ ತಮಿಳು ಸರಣಿ ಟೀಸರ್‌ ಬಿಡುಗಡೆಯಾಗಿದೆ. ಜೈ ಮತ್ತು ತಾನ್ಯಾ ಹೋಪ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸರಣಿ Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

ಜೈ ಮತ್ತು ತಾನ್ಯಾ ಹೋಪ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಲೇಬಲ್‌’ ತಮಿಳು ಸರಣಿ ಟೀಸರ್‌ ಬಿಡುಗಡೆಯಾಗಿದೆ. ‘ಕನಾ’ ಮತ್ತು ‘ನೆಂಜುಕ್ಕು ನೀಡಿ’ನಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಅರುಣ್‌ ರಾಜ ಕಾಮರಾಜ್ ಅವರ ಚೊಚ್ಚಲ ಸರಣಿಯಿದು. ಟೀಸರ್‌ನಲ್ಲಿ ಭಾರತೀಯ ಸಂವಿಧಾನದ ಕಾನೂನಿಗೆ ಸಂಬಂಧಿಸಿದ ರೇಖಾಚಿತ್ರಗಳಿವೆ. ನಿರ್ಧಿಷ್ಟವಾಗಿ 20ನೇ ವಿಧಿಯ ಮೇಲೆ ಕೇಂದ್ರೀಕೃತವಾಗಿರುವ ಇದು ಆರೋಪಿಗಳಿಗೆ ರಕ್ಷಣೆ ನೀಡುತ್ತದೆ. ಕೆಲವು ದೃಶ್ಯಗಳಲ್ಲಿ ವ್ಯಕ್ತಿಯನ್ನು ಬಂಧಿಸಿರುವುದನ್ನು ತೋರಿಸಿದೆ. ಸರಣಿಯು ಒಬ್ಬ ಅಪರಾಧಿಯ ಗುರುತನ್ನು ಪತ್ತೆಹಚ್ಚುವಲ್ಲಿ ಕಾನೂನು ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ಹೇಳಲಿದೆ. ಇದು ಆಕ್ಷನ್ – ಡ್ರಾಮಾವಾಗಿದ್ದು, ನಾಯಕನು ತನ್ನ ಅಸ್ತಿತ್ವ ಮೂಡಿಸಲು, ತಾನು ಬಯಸಿದ ಗುರಿಯನ್ನು ಸಾಧಿಸಲು ಹೋರಾಡುವ ಹೋರಾಟದ ಸುತ್ತ ಸುತ್ತುತ್ತದೆ. ಮತ್ತು ಸಮಾಜವು ಅವನ ಮೇಲೆ ಹೇರಿದ ಕಾನೂನುಗಳನ್ನು ಹೇಗೆ ಜಯಿಸುತ್ತಾನೆ ಎಂಬ ಕಥೆಯನ್ನು ಒಳಗೊಂಡಿದೆ.

ಸರಣಿಯಲ್ಲಿ ಮಹೇಂದ್ರನ್, ಹರಿಶಂಕರ್ ನಾರಾಯಣನ್, ಚರಣ್ ರಾಜ್, ಶ್ರೀಮನ್, ಇಳವರಸು ಮತ್ತು ಸುರೇಶ್ ಚಕ್ರವರ್ತಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು Muthamizh Padaippagam Productions ಸಹಯೋಗದೊಂದಿಗೆ ARK Entertainment ನಿರ್ಮಿಸಿದೆ. ಸ್ಯಾಮ್ ಸಿಎಸ್ ಸಂಗೀತ ಸಂಯೋಜಿಸಿದ್ದು, ದಿನೇಶ್ ಕೃಷ್ಣನ್ ಛಾಯಾಗ್ರಹಣವಿದೆ. ಚಿತ್ರಕ್ಕೆ ರಾಜಾ ಅರುಮುಗಂ ಸಂಕಲನ, ವಿನೋತ್ ರಾಜ್‌ಕುಮಾರ್ ಕಲಾ ನಿರ್ದೇಶಕ ಮತ್ತು ಜಯಚಂದ್ರ ಹಶ್ಮಿ ಕಥೆ ಹೆಣೆದಿದ್ದಾರೆ. ನಿರ್ದೇಶಕ ಅರುಣ್‌ ರಾಜ ಕಾಮರಾಜ್ ಹಾಡುಗಳನ್ನು ಬರೆದಿದ್ದಾರೆ. ಸರಣಿಯು Hotstar ನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here