ವಿಮಲ್‌ ಕೃಷ್ಣ ನಿರ್ದೇಶನದ ‘DJ Tillu’ ತೆಲುಗು ಸಿನಿಮಾ ಫೆಬ್ರವರಿ 12ರಂದು ಥಿಯೇಟರ್‌ಗೆ ಬಂದಿತ್ತು. ಪ್ರೇಕ್ಷಕರಿಗೆ ಇಷ್ಟವಾದ ಸಿದ್ದು ಜೊನ್ನಲಗಡ್ಡ ಮತ್ತು ನೇಹಾ ಶೆಟ್ಟಿ ನಟನೆಯ ಈ ರೊಮ್ಯಾಂಟಿಕ್‌ ಕ್ರೈಂ ಕಾಮಿಡಿ ಸದ್ಯದಲ್ಲೇ ‘aha’ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ.

ಓಟಿಟಿ ರಿಲೀಸ್‌ಗೆ ಸಂಬಂಧಿಸಿದಂತೆ ‘DJ Tillu’ ತೆಲುಗು ಸಿನಿಮಾ ತಂಡ ಸುದ್ದಿ ಮಾಡಿದೆ. ವಿಮಲ್‌ ಕೃಷ್ಣ ನಿರ್ದೇಶನದಲ್ಲಿ ಸಿದ್ದು ಜೊನ್ನಲಗಡ್ಡ ಮತ್ತು ನೇಹಾ ಶೆಟ್ಟಿ ನಟಿಸಿರುವ ಸಿನಿಮಾ ಫೆಬ್ರವರಿ 12ರಂದು ಥಿಯೇಟರ್‌ನಲ್ಲಿ ತೆರೆಕಂಡಿತ್ತು. ನ್ಯೂ ಏಜ್‌ ಕಂಟೆಂಟ್‌ನ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯ್ತು. ವಿಮರ್ಶಕರೂ ಈ ರೊಮ್ಯಾಂಟಿಕ್‌ ಕ್ರೈಂ ಕಾಮಿಡಿ ಚಿತ್ರವನ್ನು ಮೆಚ್ಚಿ ತಲೆದೂಗಿದ್ದರು. ಥಿಯೇಟ್ರಿಕಲ್‌ ಸಕ್ಸಸ್‌ನ ನಂತರ ಇದೀದ ಅವರು ಓಟಿಟಿ ಮೂಲಕ ಇನ್ನೂ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ತಲುಪುವ ಯೋಜನೆ ಹಾಕಿಕೊಂಡಿದ್ದಾರೆ. ಮೂಲಗಳ ಪ್ರಕಾರ ‘aha’ ತೆಲುಗು ಓಟಿಟಿಯಲ್ಲಿ ಮಾರ್ಚ್‌ 10ರಿಂದ ಸಿನಿಮಾ ಸ್ಟ್ರೀಮ್‌ ಆಗಲಿದೆ. ಆದರೆ ಚಿತ್ರತಂಡ ಅಧಿಕೃತಿ ಸ್ಟ್ರೀಮಿಂಗ್‌ ದಿನಾಂಕವನ್ನು ಘೋಷಿಸಿಲ್ಲ. ಎಂಟು ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 28 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎನ್ನಲಾಗಿದೆ.

Previous articleಸಿನಿಮಾ ಬದುಕಿಗೆ 12 ವರ್ಷ; ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟಿ ಸಮಂತಾ
Next articleಶಕ್ತಿ, ಸಂಪತ್ತಿ, ಸದ್ಬುದ್ಧಿ… ಏ ತೀನೋ ಹೀ ಔರತ್‌ ಹೇ…

LEAVE A REPLY

Connect with

Please enter your comment!
Please enter your name here