‘ಪುಷ್ಪ’ ಭಾಗ ಒಂದರಲ್ಲಿ ಶ್ರೀವಲ್ಲಿಯಾಗಿ ಮಿಂಚಿದ್ದ ರಶ್ಮಿಕಾ ಅವರ ಲುಕ್ ಈಗ ಸಂಪೂರ್ಣ ಬದಲಾಗಿದೆ. ‘ಪುಷ್ಪ 2’ ಚಿತ್ರ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಉಡುಗೊರೆಯಾಗಿ ಕೊಟ್ಟಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 28ನೇ ವಸಂತಕ್ಕೆ ಕಾಲಿಟ್ಟಿರುವ ನಟಿ, ಬರ್ತ್ ಡೇ ಆಚರಿಸಿಕೊಳ್ಳಲು ಅಬುಧಾಬಿಗೆ ತೆರಳಿದ್ದಾರೆ. ನಟಿಯ ಹುಟ್ಟುಹಬ್ಬದ ಪ್ರಯುಕ್ತ ‘ಪುಷ್ಪ 2’ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ರಿಲೀಸ್ ಆಗಿರುವ ಈ ಪೋಸ್ಟರ್ ರಶ್ಮಿಕಾ ಪಾತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ರಶ್ಮಿಕಾ ಹುಟ್ಟುಹಬ್ಬದ ಉಡುಗೊರೆಯಾಗಿ ಬಿಡುಗಡೆ ಮಾಡಲಾಗಿರುವ ಪೋಸ್ಟರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರಲ್ಲಿ ರಶ್ಮಿಕಾ ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟು, ಮೈತುಂಬಾ ಚಿನ್ನದ ಆಭರಣಗಳನ್ನ ಧರಿಸಿಕೊಂಡು, ತೀಷ್ಣ ನೋಟದ ಲುಕ್ ಸಖತ್ ರಗಡ್ ಆಗಿದೆ. ಪುಷ್ಪ ಭಾಗ ಒಂದರಲ್ಲಿ ರಶ್ಮಿಕಾ ಬಡ ಕುಟುಂಬದ ಹೆಣ್ಣು ಮಗಳು ಶ್ರೀವಲ್ಲಿಯಾಗಿ ಕಾಣಿಸಿಕೊಂಡಿದ್ದರು. ಆದರೆ ‘ಪುಷ್ಪ 2’ ಚಿತ್ರದಲ್ಲಿ ಶ್ರೀವಲ್ಲಿ ಅವತಾರ ಸಂಪೂರ್ಣವಾಗಿ ಬದಲಾಗಿದೆ. ‘ಪುಷ್ಪ 2’ ಚಿತ್ರದ ಟೀಸರ್ ಏಪ್ರಿಲ್ 8ಕ್ಕೆ ಬಿಡುಗಡೆಯಾಗಲಿದೆ. ಇನ್ನು ಏಪ್ರಿಲ್ 8ಕ್ಕೆ ಅಲ್ಲು ಅರ್ಜುನ್ ಹುಟ್ಟುಹಬ್ಬವಿದ್ದು ಅದನ್ನು ‘ಪುಷ್ಪ 2’ ಮಾಸ್ ಜಾತ್ರೆ ಎಂದು ಆಚರಿಸಲಾಗುತ್ತಿದೆ.
ರಶ್ಮಿಕಾ ಸದ್ಯ ಬಾಲಿವುಡ್ನಲ್ಲಿ ವಿಕ್ಕಿ ಕೌಶಲ್ ಜತೆ ‘ಛಾವಾ’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಇದರ ಜೊತೆಗೆ ಪ್ಯಾನ್ ಇಂಡಿಯಾ ಚಿತ್ರಗಳಾದ ‘ಪುಷ್ಪ 2’, ‘ಕುಬೇರ’ ಚಿತ್ರಗಳು ಈ ವರ್ಷ ತೆರೆ ಕಾಣಲಿವೆ. ತೆಲುಗಿನ ಮಹಿಳಾ ಪ್ರಧಾನ ಸಿನಿಮಾ ‘ರೇನ್ಬೋ’ ಹಾಗೂ ‘ದ ಗರ್ಲ್ಫ್ರೆಂಡ್’ ಇನ್ನು ಚಿತ್ರೀಕರಣದ ಹಂತದಲ್ಲಿವೆ.