‘ಮಾಧ್ಯಮ ಅನೇಕ’ ಮೀಡಿಯಾ ಹೌಸ್‌ ರೂಪಿಸಿರುವ ‘Vote ನಮ್ಮ Power’ Rap songಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಮತದಾನ ಜಾಗೃತಿ ವೀಡಿಯೋ. ಇಂಥದ್ದೊಂದು ಸಂದೇಶ ದಾಟಿಸಲು Rap ಜಾನರ್‌ ಆಯ್ಕೆ ಮಾಡಿಕೊಂಡದ್ದೇಕೆ? ನಿನ್ನೆಯ ಕಾರ್ಯಕ್ರಮದಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆಯ ಡಾ ನಮನ ಅವರು ನೀಡಿದ ವಿವರಣೆ ಇಲ್ಲಿದೆ.

ಇದೀಗ ಬಿಡುಗಡೆಯಾಗಿರುವ ‘Vote ನಮ್ಮ Power’ ಮತದಾನ ಜಾಗೃತಿ Rap ವೀಡಿಯೋ ಸಾಂಗ್‌. ಅನು ಮೋತಿ ಅವರ ರಚನೆಯ ಹಾಡಿಗೆ ಕಾರ್ತೀಕ್‌ ಶರ್ಮಾ ಸಂಗೀತ ಸಂಯೋಜನೆಯಿದೆ. ನಟ ರಾಕೇಶ್‌ ಅಡಿಗ ಮತ್ತು ಐಶ್ವರ್ಯ ರಂಗರಾಜನ್‌ ಹಾಡಿಗೆ ದನಿಯಾಗಿದ್ದಾರೆ. ಅನನ್ಯ ಅಮರ್‌ ನೃತ್ಯ ಸಂಯೋಜನೆಯಲ್ಲಿ ತೇಜಸ್ವಿನಿ ಶರ್ಮ, smile guru ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌ ಮತ್ತು ಅನನ್ಯ ಅಮರ್‌ songಗೆ ಹೆಜ್ಜೆ ಹಾಕಿದ್ದಾರೆ. ಇಂಥದ್ದೊಂದು ಸದಾಶಯದ ಹಾಡು ರೂಪಿಸುವಾಗ Rap ಜಾನರ್‌ ಆಯ್ಕೆ ಮಾಡಿಕೊಂಡದ್ದೇಕೆ? ‘Vote ನಮ್ಮ Power’ ಪ್ರಾಜೆಕ್ಟ್‌ನ ಕ್ರಿಯೇಟಿವ್‌ ಹೆಡ್‌ ಅರವಿಂದ ಮೋತಿ ಅವರಿಗೆ ಈ ಆಲೋಚನೆ ಬಂದದ್ದು ಹೇಗೆ? ನಿನ್ನೆಯ ಕಾರ್ಯಕ್ರಮದಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆಯ ಡಾ ನಮನ ಅವರು ಈ ಬಗ್ಗೆ ವಿವರಣೆ ನೀಡಿದ್ದು ಹೀಗೆ…

‘ಚುನಾವಣೆ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮ ಅನೇಕ ಸಂಸ್ಥೆಯ ಸಂಸ್ಥಾಪಕರಾದ ಅರವಿಂದ್‌ ಮೋತಿ ಹಾಗೂ ಅನು ಮೋತಿ ಅವರು ಆಯ್ಕೆ ಮಾಡಿಕೊಂಡ ವಿಧಾನ Rap Song. ಮಾತುಗಳಿಂದ ತಲುಪಿಸಲಾಗದ ವಿಷಯವನ್ನು ಸಂಗೀತದ ಮೂಲಕ ಪರಿಣಾಮಕಾರಿಯಾಗಿ ದೊಡ್ಡ ಮಟ್ಟದಲ್ಲಿ ಎಂಥಾ ಸೂಕ್ಷ್ಮ ವಿಚಾರವನ್ನಾದರೂ ತಲುಪಿಸಬಹುದು. ಈ ಕಾರಣದಿಂದಲೇ ಮಾಧ್ಯಮ ಅನೇಕ ಸಂಸ್ಥೆ ‘vote ನಮ್ಮ power’ ಹಾಡನ್ನು ಪ್ರಸ್ತುತಪಡಿಸುತ್ತಿದೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ನಾವು ನೋಡಬಹುದಾದ ಅಂಶಗಳು ಅಂದರೆ ನ್ಯಾಯ, ಸಮಾನತೆ ಹಾಗೂ ಭ್ರಾತೃತ್ವ. ಪ್ರಜಾಪ್ರಭುತ್ವ ವ್ಯಸ್ಥೆಯ ಮೂಲ ಆಧಾರವಾದ ಚಿಂತನೆ ಮೂಲಕ Rap Song ಆರಂಭವಾಗುತ್ತದೆ. ಮತದಾನ ಅನ್ನೋದು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಹಾಗೂ ಶಕ್ತಿ. ಈ ಹಕ್ಕು ಚಲಾಯಿಸಲು ಯಾವುದೇ ಭೇದಭಾವ ಇಲ್ಲ. ಮತ ಚಲಾಯಿಸುವ ವಿಷಯದಲ್ಲಿ ಎಲ್ಲರೂ ಸಮಾನರೆ. ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇರುವುದು ಒಂದೇ ದಾರಿ. ಅದುವೇ ಮತದಾನ. ಹೀಗಾಗಿ ಎಲ್ಲರೂ ಮುಂದೆ ಬಂದು ಚುನಾವಣೆ ದಿನ ಮತಚಲಾಯಿಸಿ ಅಂತ ಕರೆ ಕೊಡುತ್ತಿದೆ ನಮ್ಮ Rap Song.

ಮತದಾನದ ಬಗ್ಗೆ ಜಾಗೃತಿ ಮೂಡಿಸಲು Rap Song ಅನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೂ ಇದೆ. ಸಂವಿಧಾನವೇ ಹೇಳುವಂತೆ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರವಿದೆ. Rap Song ಅಂದರೆ ಫ್ರೀಡಂ ಆಫ್‌ ಎಕ್ಸ್‌ಪ್ರೆಷನ್‌. ಅಂದರೆ ಇದು ಹೆಚ್ಚು ಹೆಚ್ಚು ಜನರನ್ನು ತುಂಬಾ ಸುಲಭವಾಗಿ ತಲುಪುವ ಮಾರ್ಗ. Rap Song ಆಯ್ಕೆಗೆ ಇರುವ ಮತ್ತೊಂದು ಕಾರಣ ಅಂದರೆ, ಯುವಕರನ್ನು ಹೆಚ್ಚು ಹೆಚ್ಚು ತಲುಪುವ ಉದ್ದೇಶ. ಕಾರಣ ಭಾರತವನ್ನು ಯುವ ದೇಶ ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಶೇ50ಕ್ಕಿಂತ ಹೆಚ್ಚು 25 ವರ್ಷದೊಳಿಗನವರು ಹಾಗೂ ಶೇ65ಕ್ಕಿಂತ ಹೆಚ್ಚು 35 ವರ್ಷದೊಳಗಿನ ಯುವಜನತೆ ಇದ್ದಾರೆ. ಹೀಗಾಗಿ ಭಾರತದ ಭವಿಷ್ಯದ ಆಯ್ಕೆಯಲ್ಲಿ ಯುವಜನತೆ ಮತಗಳು ಮಹತ್ವದ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ Rap ಜಾನರ್‌ ನಮ್ಮ ಆಯ್ಕೆಯಾಯ್ತು’

LEAVE A REPLY

Connect with

Please enter your comment!
Please enter your name here