ಮಹೇಶ ಸಿ ಅಮ್ಮಳ್ಳಿದೊಡ್ಡಿ ನಿರ್ದೇಶನದ ‘ಲವ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಭಿನ್ನ ಧರ್ಮೀಯರ ಮಧ್ಯೆಯ ಪ್ರೀತಿ, ಅದರಿಂದ ಆಗುವ ಸಂಘರ್ಷಗಳು ಟ್ರೈಲರ್‌ನಲ್ಲಿ ಕಾಣಿಸುತ್ತವೆ. ಪ್ರಜಯ್‌ ಜಯರಾಮ್‌ ಮತ್ತು ವೃಷ ಪಾಟೀಲ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಮಹೇಶ ಸಿ ಅಮ್ಮಳ್ಳಿದೊಡ್ಡಿ ನಿರ್ದೇಶನದ ‘ಲವ್‌’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರೇಮ ಕಥಾಹಂದರದ ಚಿತ್ರದಲ್ಲಿ ಪ್ರಜಯ್ ಜಯರಾಮ್ ನಾಯಕನಾಗಿ ಹಾಗೂ ವೃಷ ಪಾಟೀಲ ನಾಯಕಿಯಾಗಿ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ‘ಹೊಸಬರಿಗೆ ಮಾಸ್ ಸಿನಿಮಾ ವರ್ಕ್ ಆಗುವುದಿಲ್ಲ ಎಂಬ ಕಾರಣ ಲವ್ ಜಾನರ್ ಮಾಡಿದ್ದೇನೆ. ಸಿನಿಮಾ ಈಗಾಗಲೇ ಸೆನ್ಸಾರ್ ಪಾಸಾಗಿದೆ. ನೈಜ ಘಟನೆಯಿಂದ ಪ್ರೇರೇಪಿತನಾಗಿ ಸಿನಿಮಾ ಮಾಡಿದ್ದೇನೆ. ಜನವರಿಗೆ ಶೂಟಿಂಗ್ ಶುರು ಮಾಡಿ ಮಾರ್ಚ್‌ಗೆ ಪೂರ್ಣಗೊಳಿಸಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು. ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ನಡುವೆ ಪ್ರೀತಿಗೆ ಮನೆಯವರು, ಇಡೀ ಸಮಾಜದವರು ಎದುರು ನಿಂತಾಗ ಏನಾಗುತ್ತದೆ ಎನ್ನುವ ಸನ್ನಿವೇಶಗಳು ಟ್ರೈಲರ್‌ನಲ್ಲಿವೆ.

ನೈಜ ಘಟನೆ ಪ್ರೇರಿತ ‘ಲವ್’ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ‘ಪೊಗರು’ ಸಿನಿಮಾ ನಿರ್ಮಿಸಿದ್ದ ಬಿ ಕೆ ಗಂಗಾಧರ್ ರಾಜ್ಯಾದ್ಯಂತ ಚಿತ್ರ ವಿತರಣೆ ಮಾಡಲಿದ್ದಾರೆ. ಚಿತ್ರದಲ್ಲಿ ‘ಕಾಂತಾರ’ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Shree KalaBhairaveshwara Movie Makers ಬ್ಯಾನರ್ ನಡಿ ದಿವಾಕರ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನೆಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಚಿತ್ರಕ್ಕಿದೆ. ಅಕ್ಟೋಬರ್‌ 6ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here