ಲೈಕಾ ಪ್ರೊಡಕ್ಷನ್ ಸಂಸ್ಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಸೂಟು-ಬೂಟು ತೊಟ್ಟ ರಜನೀಕಾಂತ್‌ ಮತ್ತು ಅಮಿತಾಭ್‌ ಬಚ್ಚನ್‌ ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ತೊಟ್ಟು ಸಖತ್‌ ಸ್ಟೈಲಿಶ್‌ ಆಗಿ ಪೋಸ್‌ ಕೊಟ್ಟಿದ್ದಾರೆ.

ಭಾರತೀಯ ಸಿನಿಮಾ ರಂಗದ ದಿಗ್ಗಜರೆಂದೇ ಕರೆಸಿಕೊಂಡಿರುವ ರಜನೀಕಾಂತ್ ಹಾಗೂ ಅಮಿತಾಭ್ ಬಚ್ಚನ್ ತೆರೆ ಹಂಚಿಕೊಳ್ಳುತ್ತಿರುವ ವಿಷಯ ಗೊತ್ತೇ ಇದೆ. ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ‘ವೆಟ್ಟೈಯಾನ್’ ಸಿನಿಮಾದಲ್ಲಿ ಈ ಸ್ಟಾರ್‌ ಜೋಡಿ ಮೋಡಿ ಮಾಡಲಿದೆ. 33 ವರ್ಷಗಳ ಬಳಿಕ ಬಿಗ್‌ ಬಿ ಹಾಗೂ ತಲೈವಾ ಬೆಳ್ಳಿತೆರೆ ಮೇಲೆ ಮತ್ತೆ ಒಟ್ಟಿಗೆ ಅಬ್ಬರಿಸಲಿದ್ದಾರೆ. ನಟ ಸೂರ್ಯ ಅಭಿನಯದ ‘ಜೈ ಭೀಮ್’ ಸಿನಿಮಾ ಖ್ಯಾತಿಯ ನಿರ್ದೇಶಕ ಟಿ ಎಸ್ ಜ್ಞಾನವೇಲ್ ‘ವೆಟ್ಟೈಯಾನ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಈ ಸಿನಿಮಾ ಬಗ್ಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಬೆಟ್ಟದಷ್ಟಿದೆ.

ಸಿನಿಮಾದ ಚಿತ್ರೀಕರಣ ಈಗಾಗಲೇ ಕೊನೆಯ ಹಂತ ತಲುಪಿದ್ದು, ಸದ್ಯ ಮುಂಬೈನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಸಿನಿಮಾ ಕುರಿತಾದ ಅಪ್ಡೇಟ್‌ಗಳ ಆಗಾಗ ಕೊಡುವ ಲೈಕಾ ಪ್ರೊಡಕ್ಷನ್ ಸಂಸ್ಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ರಜನೀಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ಇರುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸೂಟು-ಬೂಟು ತೊಟ್ಟ ಹಿರಿಯ ಸ್ಟಾರ್‌ ನಟರು ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ತೊಟ್ಟು ಸಖತ್‌ ಸ್ಟೈಲಿಶ್‌ ಆಗಿ ಪೋಸ್‌ ಕೊಟ್ಟಿದ್ದಾರೆ.

ರಜಿನೀಕಾಂತ್‌ ಅಭಿನಯದ 170ನೇ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿ ಎಂ ಸುಂದರ್, ರೋಹಿಣಿ ಸೇರಿದಂತೆ ಇತರ ನಟ-ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈ, ಚೆನ್ನೈ, ತಿರುವನಂತಪುರಂ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ಮಾಡಲಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಕೆಲವೇ ದಿನಗಳ ಹಿಂದೆ ಚಿತ್ರತಂಡ ತಿಳಿಸಿತ್ತು. ಆದರೆ, ರಿಲೀಸ್‌ ದಿನಾಂಕ ಮಾತ್ರ ಇನ್ನೂ ರಿವೀಲ್‌ ಆಗಿಲ್ಲ. ‘ವೆಟ್ಟೈಯಾನ್’ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದರೆ, ಎಸ್ ಆರ್ ಕಥಿರ್ ಅವರ ಛಾಯಾಗ್ರಹಣವಿದೆ.

LEAVE A REPLY

Connect with

Please enter your comment!
Please enter your name here