ಮಿಲಿಂದ್‌ ರಾವು ನಿರ್ದೇಶನದ ‘ದಿ ವಿಲೇಜ್‌’ ತಮಿಳು ಸರಣಿ ಟ್ರೇಲರ್‌ ಬಿಡುಗಡೆಯಾಗಿದೆ. ಅಶ್ವಿನ್ ಶ್ರೀವತ್ಸಂಗಂ, ವಿವೇಕ್ ರಂಗಾಚಾರಿ ಮತ್ತು ಶಮಿಕ್ ದಾಸ್‌ಗುಪ್ತಾ ಅವರ ಅದೇ ಹೆಸರಿನ ಗ್ರಾಫಿಕ್ – ಹಾರರ್ ಕಾದಂಬರಿಯಿಂದ ಪ್ರೇರಿತವಾಗಿರುವ ಸರಣಿಯಿದು. ನವೆಂಬರ್ 24ರಿಂದ Prime Videoದಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಆರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ದಿ ವಿಲೇಜ್‌’ ತಮಿಳು ಹಾರರ್‌ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಸರಣಿಯನ್ನು ಮಿಲಿಂದ್ ರಾವು ನಿರ್ದೇಶಿಸಿದ್ದು, ಧೀರಜ್ ವೈದಿ ಮತ್ತು ದೀಪ್ತಿ ಗೋವಿಂದರಾಜನ್ ಕಥೆ ಬರೆದು ರಚಿಸಿದ್ದಾರೆ. ಆರ್ಯ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಸಂತೋಷದ ಜೀವನ ಸಾಗಿಸುತ್ತಿರುತ್ತಾನೆ. ತನ್ನ ಮಗಳು ರೋಡ್‌ ಟ್ರಿಪ್‌ ಹೋಗಲು ಬಯಸುತ್ತಾಳೆ. ಮಗಳನ್ನು ಖುಷಿಪಡಿಸಲು ಆರ್ಯ ದಟ್ಟ ಅರಣ್ಯದ ಮಧ್ಯೆ ಲಾಂಗ್‌ ಡ್ರೈವ್‌ ಹೊರಡುತ್ತಾನೆ. ಹಳ್ಳಿಯೊಂದರಲ್ಲಿ ಕಾರು ಕೆಟ್ಟು ಹೋಗಿ ಸಮಸ್ಯೆಗಳ ಸುಳಿಗೆ ಸಿಲುಕುತ್ತಾನೆ. ಕ್ರೂರ ಮತ್ತು ವಿಚಿತ್ರ ಜೀವಿಗಳಿಂದ ಆತ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಎಂಬುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಅಶ್ವಿನ್ ಶ್ರೀವತ್ಸಂಗಂ, ವಿವೇಕ್ ರಂಗಾಚಾರಿ ಮತ್ತು ಶಮಿಕ್ ದಾಸ್‌ಗುಪ್ತಾ ಅವರ ಅದೇ ಹೆಸರಿನ ಗ್ರಾಫಿಕ್ – ಹಾರರ್ ಕಾದಂಬರಿಯಿಂದ ಪ್ರೇರಿತವಾಗಿರುವ ಸರಣಿಯಿದು. ದಿವ್ಯಾ ಪಿಳ್ಳೈ, ಆಜಿಯಾ, ಆಡುಕಲಂ ನರೇನ್, ಜಾರ್ಜ್ ಮಾಯನ್, ಪಿಎನ್ ಸನ್ನಿ, ಮುತ್ತುಕುಮಾರ್ ಕೆ, ಕಲೈರಾಣಿ ಎಸ್‌ಎಸ್, ಜಾನ್ ಕೊಕ್ಕೆನ್, ಪೂಜಾ, ವಿ ಜಯಪ್ರಕಾಶ್, ಅರ್ಜುನ್ ಚಿದಂಬರಂ, ಮತ್ತು ತಲೈವಾಸಲ್ ವಿಜಯ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Studio Shakthi production ಬ್ಯಾನರ್‌ ಅಡಿಯಲ್ಲಿ ಬಿ ಎಸ್ ರಾಧಾಕೃಷ್ಣನ್ ಸರಣಿ ನಿರ್ಮಿಸಿದ್ದಾರೆ. ನವೆಂಬರ್ 24ರಿಂದ Prime Videoದಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ. ಮೂಲ ತಮಿಳು ಸೇರಿದಂತೆ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here