ಅಶೋಕ್‌ ಕಡಬ ನಿರ್ದೇಶನದ ‘ಸತ್ಯಂ’ ಸಿನಿಮಾಗೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್‌ ಸಿಕ್ಕಿದೆ. ತುಳುನಾಡಿನ ದೈವಾರಾಧನೆಯ ಪ್ರಸ್ತಾಪವಿರುವ ಥ್ರಿಲ್ಲರ್‌ ಚಿತ್ರವಿದು. ಸಂತೋಷ್‌ ಬಾಲರಾಜ್‌ ಮತ್ತು ರಂಜನಿ ರಾಘವನ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

‘ಇದು ಮಾಸ್ ಚಿತ್ರವಾದರೂ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ಎಳೆ ಚಿತ್ರದಲ್ಲಿದೆ. ಕಾಂತಾರ ಚಿತ್ರಕ್ಕೂ ಮುನ್ನವೇ ಮಾಡಿದ್ದ ಕತೆಯಿದು’ ಎನ್ನುತ್ತಾರೆ ‘ಸತ್ಯಂ’ ಚಿತ್ರದ ನಿರ್ದೇಶಕ ಅಶೋಕ್‌ ಕಡಬ. ಈ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ನೀಡಿದೆ. ‘ಕೆಂಪ’, ‘ಗಣಪ’ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಚಿತ್ರದಲ್ಲಿ ‘ಕನ್ನಡತಿ’ ಸೀರಿಯಲ್‌ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ‘ಸೆನ್ಸಾರ್‌ ಅಧಿಕಾರಿಗಳು ಚಿತ್ರದ ಕಾನ್ಸೆಪ್ಟ್‌ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ cuts, mute ಇಲ್ಲದೆ ಈ ಚಿತ್ರ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ’ ಎಂದಿದ್ದಾರೆ ನಿರ್ದೇಶಕರು.

ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ ಕೆ ಚಿತ್ರ ನಿರ್ಮಿಸಿದ್ದಾರೆ. ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂಥ ಕಥೆ ಚಿತ್ರಕ್ಕಿದೆ ಎನ್ನುತ್ತಾರೆ ನಿರ್ಮಾಪಕರು. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರೆ, ಸಿನೆಟೆಕ್ ಸೂರಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ತೆಲುಗು ನಟ ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ ಎನ್ ಲಕ್ಷ್ಮಿದೇವಿ, ಶೃಂಗೇರಿ ರಾಮಣ್ಣ, ತನುಶ್ರೀ, ಎಂ ಎಸ್ ಉಮೇಶ್, ಮೀನಾಕ್ಷಿ ಮುಂತಾದವರ ತಾರಾಗಣ ಚಿತ್ರಕ್ಕಿದೆ. ಐಪಿಎಲ್ ನಂತರ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here