ಪೂರಿ ಜಗನ್ನಾಥ್‌ ನಿರ್ದೇಶನದ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರಾಮ್‌ ಪೋತಿನೇನಿ ಮತ್ತು ಕಾವ್ಯಾ ಥಾಪರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಬಾಲಿವುಡ್‌ ನಟ ಸಂಜಯ್‌ ದತ್‌ ಖಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಮ್‌ ಪೋತಿನೇನಿ ಮತ್ತು ಕಾವ್ಯಾ ಥಾಪರ್‌ ನಟನೆಯ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಪೂರಿ ಜಗನ್ನಾಥ್‌ ನಿರ್ದೇಶನದ ಚಿತ್ರದ ಖಳಪಾತ್ರದಲ್ಲಿ ಸಂಜಯ್‌ ದತ್‌ ನಟಿಸಿದ್ದಾರೆ. ಹೀರೋ ರಾಮ್‌ ಜನ್ಮದಿನಕ್ಕೆ ಆಕ್ಷನ್‌ – ಪ್ಯಾಕ್ಡ್‌ ಟೀಸರ್‌ ಬಿಡುಗಡೆಯಾಗಿದೆ. ರಾಮ್‌ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. 1.26 ಸೆಕೆಂಡ್‌ನ ಟೀಸರ್‌ನಲ್ಲಿ ರಾಮ್ ಪೋತಿನೇನಿ ಹಾಗೂ ಸಂಜು ಬಾಬು ಜುಗಲ್‌ಬಂದಿ ಸಿನಿಪ್ರಿಯರಿಗೆ ಇಷ್ಟವಾಗಿದೆ. ‘ಡಬಲ್ ಇಸ್ಮಾರ್ಟ್’ ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿಬರುತ್ತಿದೆ. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಪುರಿ ಕನೆಕ್ಟ್ ಬ್ಯಾನರ್ ಅಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ.

LEAVE A REPLY

Connect with

Please enter your comment!
Please enter your name here