ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಸಾವಿನ ರಹಸ್ಯದ ಹಿನ್ನೆಲೆಯಲ್ಲಿ ಕತೆ ಹೆಣೆದಿರುವ ‘ಸ್ಪೈ’ ತೆಲುಗು ಆಕ್ಷನ್‌ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಗ್ಯಾರಿ ಬಿ ಹೆಚ್‌ ನಿರ್ದೇಶನದ ಚಿತ್ರದಲ್ಲಿ ನಿಖಿಲ್‌ ಸಿದ್ದಾರ್ಥ್‌ ಮತ್ತು ಐಶ್ವರ್ಯಾ ಮೆನನ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಗ್ಯಾರಿ ಬಿ ಹೆಚ್‌ ನಿರ್ದೇಶನದ ‘ಸ್ಪೈ’ ತೆಲುಗು ಆಕ್ಷನ್‌ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಪ್ರೊಮೋಷನ್ ನಿರತ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಚಿತ್ರದ ಹೀರೋ ನಿಖಿಲ್‌ ಸಿದ್ದಾರ್ಥ್‌ ಅವರಿಗೆ ಇದು ಮೊದಲ PAN ಇಂಡಿಯಾ ಪ್ರಾಜೆಕ್ಟ್‌. ‘ದಾಸವಾಳ’, ‘ನಮೋ ಭೂತಾತ್ಮ’ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಐಶ್ವರ್ಯ ಮೆನನ್‌ ಚಿತ್ರದ ಹಿರೋಯಿನ್‌. ನಟ ನಿಖಿಲ್‌ ಸಿದ್ದಾರ್ಥ್‌, ‘ಈ ಹಿಂದಿನ ನನ್ನ ಕಾರ್ತಿಕೇಯ ಸಿನಿಮಾಗೆ ಕರ್ನಾಟದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಕನ್ನಡ ಪ್ರೆಕ್ಷಕರಿಗೆ ನನ್ನ ಧನ್ಯವಾದ. ಅದೇ ರೀತಿ ಸ್ಪೈ ಚಿತ್ರಕ್ಕೂ ಬೆಂಬಲ ಇರಲಿ. ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಸಿನಿಮಾ ಮಾಡಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಸಾವಿನ ಬಗ್ಗೆ ಈ ಚಿತ್ರದ ಮೂಲಕ ಒಂದು ಕ್ಲ್ಯಾರಿಟಿ ಸಿಗಲಿದೆ’ ಎನ್ನುತ್ತಾರೆ.

ನಟಿ ಐಶ್ವರ್ಯ ಮೆನನ್ ಚಿತ್ರದಲ್ಲಿ RAW ಏಜೆಂಟ್‌ ‘ವೈಷ್ಣವಿ’ ಪಾತ್ರದಲ್ಲಿ ನಟಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಚಿತ್ರವನ್ನು ಗ್ಯಾರಿ ಬಿ ಹೆಚ್‌ ನಿರ್ದೇಶಿಸಿದ್ದಾರೆ. ಕೆ ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ನಿರ್ಮಾಣದ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸನ್ಯಾ ಠಾಕೂರ್‌ ಇದ್ದಾರೆ. ‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಭಾಟಿ ಅವರಿಗೆ ವಿಶೇಷ ಪಾತ್ರವಿದೆ. ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಚಿತ್ರದ ಇತರೆ ಕಲಾವಿದರು. ಜೂನ್‌ 29ರಂದು ಸಿನಿಮಾ ತೆರೆಕಾಣಲಿದೆ.

Previous articleಮೂಲಕತೆಯ ಪರಿಣಾಮಕಾರಿ ವಿಸ್ತರಣೆ | Primeನಲ್ಲಿದೆ ‘ಡೇರ್‌ ಡೆವಿಲ್‌ ಮುಸ್ತಾಫಾ’
Next articleಕನ್ನಡ ಚಿತ್ರರಂಗದ ಹಿರಿಯ ಚಿತ್ರಸಾಹಿತಿ, ನಿರ್ದೇಶಕ ಸಿ ವಿ ಶಿವಶಂಕರ್‌ ಇನ್ನಿಲ್ಲ

LEAVE A REPLY

Connect with

Please enter your comment!
Please enter your name here