ನಾನಿ ಅಭಿನಯದ ‘ಶ್ಯಾಮ್ ಸಿಂಗಾ ರಾಯ್‌’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಾಯಿ ಪಲ್ಲವಿ ಚಿತ್ರದ ನಾಯಕಿ. ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಈ ಸಿನಿಮಾದ ಕನ್ನಡ ಅವತರಣಿಕೆಯ ಟೀಸರ್ ಟ್ವೀಟ್ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

ನಾನಿ ಅಭಿನಯದ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಶ್ಯಾಮ್ ಸಿಂಗಾ ರಾಯ್‌’ ಟೀಸರ್ ಬಿಡುಗಡೆಯಾಗಿದೆ. ನಟರಾದ ರಕ್ಷಿತ್ ಶೆಟ್ಟಿ, ಶಿವಕಾರ್ತಿಕೇಯನ್‌, ನಝ್ರಿಯಾ ನಜೀಮ್‌ ಕ್ರಮವಾಗಿ ಈ ಚಿತ್ರದ ಕನ್ನಡ, ತಮಿಳು ಮತ್ತು ಮಲಯಾಳಂ ಅವತರಣಿಕೆಗಳ ಟೀಸರ್‌ಗಳನ್ನು ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ. “ಟೀಸರ್‌ನ ವಿಶ್ಯುಯಲ್ಸ್‌ಗಳು ಆಕರ್ಷಕವಾಗಿವೆ. ನಟ ನಾನಿ ಪ್ರತೀ ಫ್ರೇಮ್‌ಗಳಲ್ಲಿ ಮಿಂಚಿದ್ದಾರೆ. ಚಿತ್ರತಂಡದ ಎಲ್ಲರಿಗೂ ಅಭಿನಂದನೆಗಳು” ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ನಾನಿ ಎರಡು ಟೈಮ್‌ಲೈನ್‌ನ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಇಂದಿನ ದಿನಮಾನಗಳ ಪಾತ್ರವಾದರೆ ಮತ್ತೊಂದು ಕೊಲ್ಕೊತ್ತಾ ಮೂಲದ ಜನ್ಮಾಂತರದ ಪಾತ್ರ. ಈ ಎರಡೂ ಪಾತ್ರಗಳನ್ನು ಸಿನಿಮಾದಲ್ಲಿ ಹೇಗೆ ಬೆಸೆದಿದ್ದಾರೆ ಎಂದು ನೋಡಬೇಕಿದೆ.

ಈ ಸಿನಿಮಾದ ಬಹುಪಾಲು ಚಿತ್ರೀಕರಣ ಕೊಲ್ಕೊತ್ತಾದಲ್ಲಿ ನಡೆದಿದೆ. ಸಾಯಿ ಪಲ್ಲವಿ, ಕೃತಿ ಶೆಟ್ಟಿ ಮತ್ತು ಮಡೋನ್ನಾ ಸೆಬಾಸ್ಟಿಯನ್‌ ಚಿತ್ರದ ಮೂವರು ನಾಯಕಿಯರು. ‘ದಿ ರೈಸ್ ಆಫ್‌ ಶ್ಯಾಮ್‌’ ಮೊದಲ ಲಿರಿಕಲ್ ವೀಡಿಯೋ ನವೆಂಬರ್‌ 6ನೇ ತಾರೀಖಿನಂದು ಬಿಡುಗಡೆಯಾಗಿತ್ತು. ವೆಂಕಟ್ ಬೊಯನಪಳ್ಳಿ ನಿರ್ಮಾಣದ ಚಿತ್ರವನ್ನು ರಾಹುಲ್‌ ಸಾಂಕೃತ್ಯನ್ ನಿರ್ದೇಶಿಸುತ್ತಿದ್ದಾರೆ. ಮೂಲ ತೆಲುಗು ಮತ್ತು ತಮಿಳು, ಕನ್ನಡ, ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳಲ್ಲಿ ಡಿಸೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ. ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜನೆ, ಸಾನು ಜಾನ್‌ ವರ್ಗೀಸ್ ಛಾಯಾಗ್ರಹಣ ಚಿತ್ರಕ್ಕಿದೆ.

Previous articleವಿಶಿಷ್ಟ ಅನುಭವ ಕಟ್ಟಿಕೊಡುವ ಕ್ರೈಂ – ಡ್ರಾಮಾ; ಇದು ಅಂತಾರಾಷ್ಟ್ರೀಯ ಗುಣಮಟ್ಟದ ಕನ್ನಡ ಸಿನಿಮಾ
Next articleಟೀಸರ್ | ನಟೋರಿಯಸ್ ಕಿಲ್ಲರ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್: ಡಿಸೆಂಬರ್ 3ರಿಂದ ZEE5 ನಲ್ಲಿ ‘ಬಾಬ್ ಬಿಸ್ವಾಸ್’

LEAVE A REPLY

Connect with

Please enter your comment!
Please enter your name here