ಮಾಚಂದ್ರು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸುತ್ತಿರುವ ‘ಭಗವತಿ’ ಸಿನಿಮಾ ಸೆಟ್ಟೇರಿದೆ. ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವಂಥ ಸಾಹಸಮಯ ಕಾಥಾಹಂದರ ಚಿತ್ರದಲ್ಲಿದೆ.
ಈ ಹಿಂದೆ ಬಂಗಾರಿ, ಶಿವನಪಾದ, ಬೆಟ್ಟದ ದಾರಿ, ನಡಗಲ್ಲು ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಹೊಸ ಸಿನಿಮಾ ಆರಂಭಿಸಿದ್ದರೆ. ಅವರು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸುತ್ತಿರುವ ‘ಭಗವತಿ’ ಸಿನಿಮಾ ಸೆಟ್ಟೇರಿದೆ. ‘ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಾರೆ. ಇದೊಂದು ಮಕ್ಕಳ ಸಾಹಸಮಯ ಕಥಾಹಂದರ. ಇಂದಿನ ಜನರೇಷನ್ ಮಕ್ಕಳಿಗೆ ಈ ಕತೆ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಸಾಹಸದ ಜೊತೆ ಭಾವನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಕ್ಕಳಷ್ಟೇ ಅಲ್ಲದೆ ದೊಡ್ಡವರೂ ನೋಡಬೇಕಾದ ಚಿತ್ರವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಮಾಚಂದ್ರು.
ವಿದ್ಯಾಧರೆ ಸಿನಿಮಾಸ್ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಎರಡು ಹಾಡುಗಳು ಇರಲಿವೆ. ರಾಜೇಶ್ ಗೌಡ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಆಗಸ್ಟ್ 5ರಿಂದ ಬೆಂಗಳೂರು, ಕನಕಪುರ, ಮಡಿಕೇರಿಯ ಸುತ್ತಮುತ್ತ ‘ಭಗವತಿ’ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ದೀಪಕ್ ಪಿ ಕೆ, ಅದ್ವೈತ್ ಪ್ರೇರಣ್, ಅದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ ಡಿ ಹೇರಂಭ, ಭಾನು, ಮೋಹನ್ ಕುಮಾರ್ ಡಿ ಕೆ, ಸತೀಶ್, ಶರತ್, ಹರ್ಷ ಮುಂತಾದವರು ಅಭಿನಯಿಸುತ್ತಿದ್ದಾರೆ. ಇತರೆ ಕಾಲವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.