ಐದು ಪ್ರಶ್ನೆ

ಮಯೂರಿ, ನಟಿ

ಪ್ರಸ್ತುತ ಬದುಕು ಹೇಗೆ ಸಾಗಿದೆ?

ಈಗ ನನ್ನ ಮಗನೇ (ಆರವ್‌) ನನ್ನ ಪ್ರಪಂಚ. ಅವನಿಗೀಗ ಆರು ತಿಂಗಳು ತುಂಬಿ ಏಳರಲ್ಲಿ ನಡೆಯುತ್ತಿದೆ. ಅವನ ಆಟ, ನಗು, ತುಂಟುತನ ನೋಡುತ್ತಾ ಕಾಲ ಹೋದದ್ದೇ ತಿಳಿಯುತ್ತಿಲ್ಲ.

ಮತ್ತೆ ಶೂಟಿಂಗ್ ಯಾವಾಗ ಶುರುಮಾಡಲಿದ್ದೀರಿ?

ಹಾಗೆ ನೋಡಿದರೆ ನಾನು ಹೆಚ್ಚು ಬ್ರೇಕ್ ತೆಗೆದುಕೊಂಡಂತೆಯೇ ಅನಿಸಿಲ್ಲ. ಐದು ತಿಂಗಳ ಪ್ರೆಗ್ನೆಂಟ್ ಇದ್ದಾಗ ‘ಪೊಗರು’ ಚಿತ್ರದಲ್ಲಿ ನಟಿಸಿದ್ದೆ. ತೀರಾ ಇತ್ತೀಚೆಗೆ ದಸರಾ ಕಾರ್ಯಕ್ರಮದ ನಿಮಿತ್ತ ಆಯೋಜನೆಗೊಂಡ ಟೀವಿ ಶೋಗೆ ಹೋಗಿಬಂದೆ. ಇನ್ನೇನು ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಕ್ಯಾಮೆರಾ ಎದುರು ನಿಲ್ಲಲಿದ್ದೇನೆ.

ಇತ್ತೀಚೆಗೆ ಯಾವ ಸಿನಿಮಾ ನೋಡಿದ್ರಿ?

ಮಗನ ಕಾರಣದಿಂದಾಗಿ ಯಾವ ಸಿನಿಮಾವನ್ನೂ ಕುಳಿತು ಒಮ್ಮೆಗೇ ಸಂಪೂರ್ಣವಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಚೂರು, ಚೂರು ನೋಡುತ್ತಾ ಮಗನನ್ನು ನಿಭಾಯಿಸುವುದೇ ಆಗಿದೆ.

ಬಿಡುಗಡೆಗೆ ಸಿದ್ಧವಿರುವ ನಿಮ್ಮ ಸಿನಿಮಾಗಳು?

‘ವ್ಹೀಲ್ ಚೇರ್ ರೋಮಿಯೋ’ ಮತ್ತು ‘ಆದ್ಯಂತ’ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಎರಡೂ ಚಿತ್ರಗಳ ಪಾತ್ರಗಳು ವೈಯಕ್ತಿಕವಾಗಿ ನನಗೆ ತುಂಬಾ ಖುಷಿ ಕೊಟ್ಟಿವೆ.

ನಿಮ್ಮ ‘ವ್ಹೀಲ್ ಚೇರ್ ರೋಮಿಯೋ’ ಬಗ್ಗೆ ಗಾಂಧಿನಗರದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ…

ಹೌದು, ಈ ಚಿತ್ರದ ಪಾತ್ರ ನನಗೂ ಕೂಡ ಸವಾಲಿನದ್ದಾಗಿತ್ತು. ಈ ಸಬ್ಜೆಕ್ಟ್‌ ಕೇಳಿದಾಗ ಹಲವು ಬಾರಿ ಮೀಟಿಂಗ್‌ ನಡೆದಿತ್ತು. ತುಂಬಾ ಸೆನ್ಸಿಟೀವ್ ಸಬ್ಜೆಕ್ಟ್‌. ರೆಡ್‌ಲೈಟ್‌ ನಡೆಯೋ ಕತೆ. ನನಗೆ ಕುರುಡಿ ಪಾತ್ರ. ಚಿತ್ರದ ಬಗ್ಗೆ ಹೆಚ್ಚು ರಿವೀಲ್ ಮಾಡೋಕೆ ಆಗೋಲ್ಲ. ಟ್ರೈಲರ್‌, ಹಾಡಿಗೆ ತುಂಬಾ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ.

LEAVE A REPLY

Connect with

Please enter your comment!
Please enter your name here