ನಟ ಸುದೀಪ್‌ ‘ಭುವನಂ ಗಗನಂ’ ಸಿನಿಮಾದ ಪ್ರೇಮಗೀತೆಯನ್ನು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಪ್ರಮೋದ್‌ ಮತ್ತು ರೆಚೆಲ್‌ ಅವರ ಮೇಲೆ ಈ ಸಾಂಗ್‌ ಪಿಕ್ಚರೈಸ್‌ ಆಗಿದೆ. ಅನಿರುದ್ಧ ಶಾಸ್ತ್ರಿ ರಚನೆಯ ಈ ಹಾಡಿಗೆ ಗುಮ್ಮಿನೇನಿ ವಿಜಯ್‌ ಸಂಗೀತವಿದ್ದು, ಅರ್ಮಾನ್‌ ಮಲಿಕ್‌ ಮತ್ತು ಐಶ್ವರ್ಯ ರಂಗರಾಜನ್‌ ಹಾಡಿದ್ದಾರೆ.

ಗಿರೀಶ್‌ ಮೂಲಿಮನಿ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ಭುವನಂ ಗಗನಂ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಇದು ಚಿತ್ರದ title track ಕೂಡ ಹೌದು. ನಟ ಸುದೀಪ್‌ ಅವರು ಚಿತ್ರದ ಈ ಪ್ರೇಮಗೀತೆಯನ್ನು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ಕಲಾವಿದರಾದ ಪ್ರಮೋದ್‌ ಮತ್ತು ರೆಚೆಲ್‌ ಅವರ ಮೇಲೆ ಈ ಸಾಂಗ್‌ ಪಿಕ್ಚರೈಸ್‌ ಆಗಿದೆ. ಅನಿರುದ್ಧ ಶಾಸ್ತ್ರಿ ರಚನೆಯ ಈ ಹಾಡಿಗೆ ಗುಮ್ಮಿನೇನಿ ವಿಜಯ್‌ ಸಂಗೀತವಿದ್ದು, ಅರ್ಮಾನ್‌ ಮಲಿಕ್‌ ಮತ್ತು ಐಶ್ವರ್ಯ ರಂಗರಾಜನ್‌ ಹಾಡಿದ್ದಾರೆ. ಪೃಥ್ವಿ ಅಂಬರ್‌ ಮತ್ತು ಅಶ್ವಥಿ ಈ ಸಿನಿಮಾದ ಇತರೆ ಪ್ರಮುಖ ಕಲಾವಿದರು. ಈ ಹಿಂದೆ ‘ರಾಜರು’ ಸಿನಿಮಾ ಮಾಡಿದ್ದ ಗಿರೀಶ್‌ ಮೂಲಿಮನಿ ಅವರಿಗಿದು ಎರಡನೇ ಸಿನಿಮಾ. ಎಸ್‌ವಿಸಿ ಫಿಲಂಸ್‌ ಬ್ಯಾನರ್‌ನಡಿ ಎಂ ಮುನೇಗೌಡ ಚಿತ್ರ ನಿರ್ಮಿಸುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಗಿರೀಶ್‌ ಮೂಲಿಮನಿ, ‘ಭುವನಂ ಗಗನಂ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ. ನಗರ, ಹಳ್ಳಿ ಎರಡು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕತೆ. ಪ್ರಮೋದ್‌ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸುತ್ತಿದ್ದಾರೆ. ಇದು ಕುಟುಂಬದ ಎಲ್ಲರೂ ಒಟ್ಟಿಗೆ ಕುಳಿತು ನೋಡುವಂಥ ಚಿತ್ರವಾಗಲಿದೆ’ ಎನ್ನುತ್ತಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ಸುನೀಲ್ ಕಶ್ಯಪ್ ಸಂಕಲನ ಚಿತ್ರಕ್ಕಿದೆ. ಇದೀಗ ಪ್ರಚಾರ ಕಾರ್ಯ ಆರಂಭಿಸಿರುವ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here