ಬಾಲಿವುಡ್‌ ಸ್ಟಾರ್‌ ಹೀರೋ ಸಲ್ಮಾನ್‌ ಖಾನ್‌ Bigg Boss OTT ಸೀಸನ್‌ 3 ನಿರೂಪಣೆಯಿಂದ ಹೊರಗುಳಿದಿದ್ದರು. ಇದು ಅವರ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಇದೀಗ Bigg Boss ಹಿಂದಿ 18ನೇ ಸೀಸನ್‌ ನಿರೂಪಕನಾಗಿ ಅವರು ಮರಳಿದ್ದಾರೆ. Bigg Boss ಫಾಲೋ ಮಾಡುವವರು ಮತ್ತು ಸಲ್ಲೂ ಅಭಿಮಾನಿಗಳು ‘Real Bigg Boss is back’ ಎನ್ನುವ ಕಾಮೆಂಟ್‌ಗಳನ್ನು ಹಾಕಿ ಖುಷಿ ಪಟ್ಟಿದ್ದಾರೆ.

Bigg Boss ಹಿಂದಿ ಶೋ 18ನೇ ಸೀಸನ್‌ ನಿರೂಪಕನಾಗಿ ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಮರಳಿದ್ದಾರೆ. ಶೋ ನಿರ್ಮಾಪಕರು ಒಂದು ಟೀಸರ್‌ನೊಂದಿಗೆ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಸಲ್ಲೂ Bigg Boss OTT ಸೀಸನ್‌ 3 ನಿರೂಪಣೆಯಿಂದ ಹೊರಗುಳಿದಿದ್ದರು. ಇದು ಅವರ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಇದೀಗ Bigg Boss ಹಿಂದಿ 18ನೇ ಸೀಸನ್‌ ನಿರೂಪಕನಾಗಿ ಅವರು ಮರಳಿರುವುದು Bigg Boss ಫಾಲೋ ಮಾಡುವವರು ಮತ್ತು ಸಲ್ಲೂ ಅಭಿಮಾನಿಗಳಿಗೆ ಖುಷಿ ತಂದಿದೆ. ಶೋ ನಿರ್ಮಾಪಕರು ಟೀಸರ್‌ನೊಂದಿಗೆ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಕ್ಯಾಪ್ಶನ್‌ನಲ್ಲಿ ಸಲ್ಮಾನ್‌ ಹೆಸರು ಹಾಕಲಾಗಿದ್ದು, ಸಲ್ಲೂ Instagram ಹ್ಯಾಂಡಲ್‌ಗೆ ಟೀಸರ್‌ ಅನ್ನು ಟ್ಯಾಗ್‌ ಮಾಡಲಾಗಿದೆ.

ಟೀಸರ್‌ನಲ್ಲಿ ಗ್ರಾಫಿಕ್‌ನಲ್ಲಿ ವಿನ್ಯಾಸಗೊಳಿಸಿರುವ ತಿರುಗುವ ಗಡಿಯಾರ, Bigg Boss ಐಕಾನಿಕ್‌ ಕಣ್ಗಳಿವೆ. ಹಿನ್ನೆಲೆಯಲ್ಲಿ ‘Bigg Boss dekhenge gharwalo ka future, ab hoga time ka tandav’ ಎನ್ನುವ ವಾಯ್ಸ್‌ ಓವರ್‌ ಕೇಳಿಸುತ್ತದೆ. Bigg Boss ಫಾಲೋ ಮಾಡುವವರು ಮತ್ತು ಸಲ್ಲೂ ಅಭಿಮಾನಿಗಳು ‘Real Bigg Boss is back’, ‘OMG! I am so excited’, ‘Wow, wow, cannot wait for tandav’, ‘Finally Salman Khan is coming’, ‘Finally Salman sir is back’ ಎನ್ನುವ ಹಲವು ಬಗೆಯ ಕಾಮೆಂಟ್‌ಗಳನ್ನು ಹಾಕಿ ಖುಷಿ ಪಟ್ಟಿದ್ದಾರೆ.

LEAVE A REPLY

Connect with

Please enter your comment!
Please enter your name here