ರೋಹಿತ್‌ ಶೆಟ್ಟಿ ನಿರ್ದೇಶನದಲ್ಲಿ ‘Singham Again’ ಹಿಂದಿ ಸಿನಿಮಾ ಸೆಪ್ಟೆಂಬರ್‌ನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅಜಯ್‌ ದೇವಗನ್‌ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ. ಯುವನಟ ಟೈಗರ್‌ ಶ್ರಾಫ್‌ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ರೋಹಿತ್‌ ಶೆಟ್ಟಿ ನಿರ್ದೇಶನದ ಸೂಪರ್‌ಹಿಟ್‌ ಸಿನಿಮಾ ‘ಸಿಂಗಂ’ ಸೀಕ್ವೆಲ್‌ ‘ಸಿಂಗಂ ಎಗೇನ್‌’ ಸೆಪ್ಟೆಂಬರ್‌ನಲ್ಲಿ ಸೆಟ್ಟೇರಲಿದೆ. ಅಜಯ್‌ ದೇವಗನ್‌ ‘ಭಾಜಿರಾವ್‌ ಸಿಂಗಂ’ ಪಾತ್ರಕ್ಕೆ ಮರಳುತ್ತಿದ್ದು, ಅವರ ಸಹೋದರಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ‘ಚೆನ್ನೈ ಎಕ್ಸ್‌ಪ್ರೆಸ್’, ‘ಸೂರ್ಯವಂಶಿ’, ‘ಗೋಲ್‌ಮಾಲ್ 3’ ಸೇರಿದಂತೆ ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ರೋಹಿತ್ ಶೆಟ್ಟಿ ಅವರ ‘ಸಿಂಗಂ’ ಸೀಕ್ವೆಲ್‌ ಬಗ್ಗೆ ಕಳೆದ ವರ್ಷವೇ ಮಾತನಾಡಿದ್ದರು. ಚಿತ್ರದಲ್ಲಿ ದೀಪಿಕಾ ಪಡುಕೋಣೆ ‘ಲೇಡಿ ಸಿಂಗಂ’ ಪಾತ್ರ ನಿರ್ವಹಿಸುವ ಕುರಿತು ಸುಳಿವು ನೀಡಿದ್ದರು. ಅದರಂತೆ ಈಗ ಮಾಹಿತಿ ಅಧಿಕೃತವಾಗಿದೆ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ಪೂರ್ಣ ಪ್ರಮಾಣದ ಪಾತ್ರ ನಿರ್ವಹಿಸಲಿದ್ದು, 35ರಿಂದ 40 ದಿನಗಲ ಕಾಲ ಚಿತ್ರೀಕರನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿನಿಮಾದಲ್ಲಿ ಟೈಗರ್‌ ಶ್ರಾಫ್‌ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ವಿಶೇಷ. ಚಿತ್ರವು ಇದೇ ಸೆಪ್ಟೆಂಬರ್‌ನಲ್ಲಿ ಸೆಟ್ಟೇರಿ ಮುಂದಿನ ವರ್ಷ ಆಗಸ್ಟ್‌ನಲ್ಲಿ ತೆರೆಕಾಣಲಿದೆ. ದೀಪಿಕಾ ಪಡುಕೋಣೆ ಪ್ರಸ್ತುತ ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಅವರೊಂದಿಗೆ ‘ಫೈಟರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಲನಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದಾರೆ. ಇದರ ಜೊತೆಗೆ ನಾಗ್ ಅಶ್ವಿನ್ ಅವರ ‘ಕಲ್ಕಿ 2898 AD’
ಚಿತ್ರದ ಭಾಗವಾಗಿದ್ದಾರೆ ದೀಪಿಕಾ. ಈ ಸಿನಿಮಾವು ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪಶುಪತಿ ಮತ್ತು ದಿಶಾ ಪಟಾನಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಈ ಎರಡೂ ಚಿತ್ರಗಳು 2024ರ ಆರಂಭದಲ್ಲಿ ತೆರೆಕಾಣಲಿವೆ.

Previous articleOTTಗೆ ಬಂದ ‘ಆದಿಪುರುಷ್‌’ | ಓಂ ರಾವುತ್‌ ನಿರ್ದೇಶನದ ಪ್ರಭಾಸ್‌ ಸಿನಿಮಾ
Next articleAmazon Primeನಲ್ಲಿ Rapper AP ಧಿಲ್ಲೋನ್‌ ಸಾಕ್ಷ್ಯಚಿತ್ರ | ಜೇಯ್‌ ಅಹಮದ್‌ ನಿರ್ದೇಶನ

LEAVE A REPLY

Connect with

Please enter your comment!
Please enter your name here