ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. ‘Do u love me?’… ‘ಹು’ ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ. ಪಂಚಾಯಿತಿ ನೀಲನ್‌ಗೆ ಒಂದು ತೀರ್ಪು ಕೊಡುತ್ತದೆ. ಆಮೇಲೇನು ಮಾಡುತ್ತಾನೆ ಅವನು? ಇದು ಸಿನಿಮಾದ ಕ್ಲೈಮ್ಯಾಕ್ಸ್. ಸಂತೋಷ್ ಶಿವನ್ ನಿರ್ದೇಶನದ ‘Before The Rains’ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.
‘Do u love me?’ ಅವಳು ಕೇಳಿದಾಗ ಅವನು ‘Yes’ ಅಂತ ಒಂದು ಶಬ್ದ ಆಡಿಬಿಟ್ಟಿದ್ದರೆ ಆಗುತ್ತಿತ್ತೇನೋ. ಇಂಗ್ಲೆಂಡು ನಾಲಗೆ ‘No’ ಅಂದ್ಬಿಡ್ತು. ಇದು ಭಾರತದ ಭಾವುಕ ಹೆಣ್ಣು. ಪ್ರೀತಿಗೆ ಜೀವ ಕೊಡೋದು ಅನ್ನೋದು ಮಾತಿನಲ್ಲಲ್ಲ, ಕೃತಿಯಲ್ಲೂ. ಛೇ, ಪ್ರೇಮಕ್ಕಾಗಿ ಸಾಯುವುದು ಮೂರ್ಖತನ ಅನಿಸಿದರೂ, ಪ್ರೀತಿ ಎಂಬುದು ಜೀವನ್ಮರಣದ ಪ್ರಶ್ನೆಯಾಗಿಸಿದಳು. ಅವಳು ಸಜಾನಿ. ಕಾಡುಹೂವಿನ ಪರಿಮಳದಂಥ ಹೆಣ್ಣು. ಅವನು ಹೆನ್ರಿ. ಬ್ರಿಟಿಷ್ ಭಾರತದ ಕೆಂಪು ಅಧಿಕಾರಿ. ಇಬ್ಬರೂ ವಿವಾಹಿತರು. ಆದರೆ ಭಾರತದಲ್ಲಿ ಕೆಲಸ ಮಾಡ್ತಿರೋ ಹೆನ್ರಿಯ ಮನೆ ಕೆಲಸಕ್ಕೆ ಬರೋ ಸಹಾನಿಯ ಜೊತೆ ಅವನ ಪ್ರೇಮ. ಇವರು ಜೊತೆಗಿರಲಿ ಅಂತ ಅನಿಸುವಂಥ ಆರ್ದ್ರ ಪ್ರೇಮ. ಆದರೆ ಸ್ವಾತಂತ್ರಪೂರ್ವ ಭಾರತದ ಆ ಸಂದರ್ಭ ಅವರಿಬ್ಬರನ್ನೂ ಬೇರೆಯಾಗಿಸುತ್ತದೆ.
ಸಹಾನಿಯ ಬಲಿಷ್ಟ ಗಂಡನಿಗೆ ಅನುಮಾನ ಬಂದಿದೆ ಮತ್ತು ಅದೇ ಸಮಯಕ್ಕೆ ಹೆನ್ರಿಯ ಸಂಸಾರವೂ ಭಾರತಕ್ಕೆ ಬಂದಿದೆ. ಹೆನ್ರಿಯ ಮಗನಿಗೆ ಸಹಾನಿಯ ಪಾಯಸದ ಸಿಹಿ ಇಷ್ಟ. ಆದರೆ ಹೆನ್ರಿಗೆ ಇದು ಕಹಿಸಮಯ. ಇಲ್ಲೊಬ್ಬ ಮುಖ್ಯಪಾತ್ರಧಾರಿ ಇದ್ದಾನೆ. ಟಿಕೆ ನೀಲನ್. ಸಹಾನಿಯ ಬಾಲ್ಯದ ಗೆಳೆಯ. ಹೆನ್ರಿಯ ಡ್ರೈವರ್ ಮ್ಯಾನೇಜರ್ ಎಲ್ಲವೂ. ದೇಶವೆಲ್ಲ ಸ್ವಾತಂತ್ರ್ಯದ ಹೋರಾಟದಲ್ಲಿದ್ದರೆ ಟಿಕೆಗೆ ಬ್ರಿಟಿಷರ ಅಭಿವೃದ್ಧಿಯ ಕೆಲಸಗಳ ಕಡೆ ಒಲವು. ಎಲ್ಲವೂ ಹೇಗೋ ನಡೆಯುತ್ತಿತ್ತು. ಆದರೆ ಒಂದು ದಿನ ಸಹಾನಿ ಗಂಡನಿಂದ ಚಚ್ಚಿಸಿಕೊಂಡವಳು ಮನೆಬಿಟ್ಟು ಬಂದಿದ್ದಾಳೆ. ಇನ್ನು ಇಲ್ಲೇ ಇರ್ತೀನಿ ಅಂತಾಳೆ. ಹೆನ್ರಿಯ ಹೆಂಡತಿ ಪಾಪ ಒಳ್ಳೆಯವಳು. ಜೊತೆಗೆ ಮಗ. ಹೆನ್ರಿ ರಸ್ತೆ ಕಾಮಗಾರಿಗೆ ಬ್ಯಾಂಕಿನಿಂದ ಸಾಲ ಪಡೆದಿದ್ದಾನೆ ಬೇರೆ. ಈಗ ಅವನಿಗೆ ಅವಳಿಂದಾಗಿ ಸಂಕಷ್ಟಕ್ಕೆ ಸಿಲುವುದು ಬೇಕಾಗಿಲ್ಲ. ಪ್ರೇಮವನ್ನು ಆ ಸಮಯದಲ್ಲಿ ಪೋಷಿಸಲಾರ ಅವನು. ಅವಳಿಗೆ ಮತ್ತೆ ವಾಪಸು ಹೋಗಲಾಗದ ಜೀವನ್ಮರಣದ ಸ್ಥಿತಿ. ಹೇಗೋ ಕಳಿಸುತ್ತಾನೆ. ಟಿಕೆಯ ಜೊತೆ.
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. ‘Do u love me?’… ‘ಹು’ ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ. ಊರವರ ಪಾಲಿನ ಅನುಮಾನ. ಸಂಸ್ಕಾರವಂತ ತಂದೆತಾಯಿಗಳ ಮರ್ಯಾದೆ. ಒಡೆಯನ ಕಡೆಗಿನ ನಿಯತ್ತು. ಪಂಚಾಯಿತಿ ನೀಲನ್‌ಗೆ ಒಂದು ತೀರ್ಪು ಕೊಡುತ್ತದೆ. ಆಮೇಲೇನು ಮಾಡುತ್ತಾನೆ ಅವನು? ಇದು ಸಿನಿಮಾದ ಕ್ಲೈಮ್ಯಾಕ್ಸ್. ರಾಹುಲ್ ಬೋಸ್, ನಂದಿತಾ ದಾಸ್, ಲಿನುಸ್ ರೋಚೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ‘Before The Rains’- ಸಂತೋಷ್ ಶಿವನ್ 2007ರಲ್ಲಿ ನಿರ್ದೇಶಿಸಿದ ಸಿನಿಮಾ. ಬ್ರಿಟಿಷ್ ಭಾರತದ ಪೂರ್ವದ ಕತೆ. ದಾಖಲಾಗದ ಒಂದು ಪ್ರೇಮಕತೆ! ಇಂತಹ ಕತೆಗಳು ಎಷ್ಟೋ ನಡೆದಿರಲಿಕ್ಕೂ ಸಾಕು. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ಸಿನಿಮಾ.