ಮಾರಿ ಸೆಲ್ವರಾಜ್‌ ನಿರ್ದೇಶನದ ‘ಮಾಮಣ್ಣನ್‌’ ಸಿನಿಮಾದ ಟ್ರೈಲರ್‌ ನಾಳೆ (ಜೂನ್‌ 16) ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಎ ಆರ್‌ ರೆಹಮಾನ್‌ ಈ ಸುದ್ದಿಯನ್ನು ಟ್ವೀಟ್‌ ಮಾಡಿದ್ದಾರೆ. ಸುದ್ದಿಯೊಂದಿಗೆ ಚಿತ್ರದ ಆಕರ್ಷಕ ನೂತನ ಪೋಸ್ಟರ್‌ ಕೂಡ ಇದೆ.

ಕಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ‘ಮಾಮಣ್ಣನ್‌’. ನಿರ್ದೇಶಕ ಮಾರಿ ಸೆಲ್ವರಾಜ್‌ ಮತ್ತು ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಎ ಆರ್‌ ರೆಹಮಾನ್‌ ಎನ್ನುವ ಕಾರಣಕ್ಕೆ ಸಿನಿಮಾ ನಿರೀಕ್ಷೆ ಮೂಡಿಸಿದೆ. ಕಮೆಡಿಯನ್‌ ವಡಿವೇಲು ಇಲ್ಲಿ ಗಂಭೀರ ಪಾತ್ರದಲ್ಲಿ ನಟಿಸಿರುವುದು ಪ್ರಮುಖವಾದ ಅಂಶ. ರೆಹಮಾನ್‌ ಇಂದು ಟ್ರೈಲರ್‌ ರಿಲೀಸ್‌ ದಿನಾಂಕ ಘೋಷಿಸಿ ಟ್ವೀಟ್‌ ಮಾಡಿದ್ದಾರೆ. ನಾಳೆ (ಜೂನ್‌ 16) ಟ್ರೈಲರ್‌ ಬಿಡುಗಡೆಯಾಗಲಿದೆ. ನೂತನ ಪೋಸ್ಟರ್‌ನಲ್ಲಿ ಹೀರೋ ಉದಯನಿಧಿ ಸ್ಟಾಲಿನ್‌, ನಾಯಿಗಳ ಗುಂಪಿನೊಂದಿಗೆ ಓಡುವ ಚಿತ್ರವಿದೆ. ಹಿನ್ನೆಲೆಯಲ್ಲಿ ವಡಿವೇಲು ಪಾತ್ರದ ಚಿತ್ರ. ನಿರ್ದೇಶಕ ಮಾರಿ ಸೆಲ್ವರಾಜ್‌ ತಮ್ಮ ಹಿಂದಿನ ಸಿನಿಮಾ ‘ಪೆರಿಯೇರಂ ಪೆರುಮಾಳ್‌’ನಲ್ಲಿಯೂ ನಾಯಿಯನ್ನು ಉಪಮೆಯಾಗಿ ಬಳಕೆ ಮಾಡಿದ್ದರು.

ಹಾಸ್ಯ ನಟನಾಗಿ ಜನಪ್ರಿಯತೆ ಗಳಿಸಿರುವ ವಡಿವೇಲು ಅವರು ಮೊದಲ ಬಾರಿಗೆ ಇಲ್ಲಿ ಕಾಮಿಡಿಗೆ ಸಂಪೂರ್ಣ ಹೊರತಾದ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕಮಲ ಹಾಸನ್‌ರ ‘ದೇವರಮಗನ್‌’ ಸಿನಿಮಾದ ಎಸಾಕಿ ಪಾತ್ರದಿಂದ ಪ್ರೇರೇಪಿತರಾಗಿ ಈ ಪಾತ್ರ ಸೃಷ್ಟಿ ಮಾಡಿರುವುದಾಗಿ ಹೇಳುತ್ತಾರೆ ನಿರ್ದೇಶಕ ಮಾರಿ ಸೆಲ್ವರಾಜ್‌. ಚಿತ್ರದ ಇತರೆ ಎರಡು ಪ್ರಮುಖ ಪಾತ್ರಗಳಲ್ಲಿ ಕೀರ್ತಿ ಸುರೇಶ್‌ ಮತ್ತು ಫಹಾದ್‌ ಫಾಸಿಲ್‌ ಇದ್ದಾರೆ. ಈ ನಾಲ್ಕು ಪಾತ್ರಗಳ ಸುತ್ತ ಕತೆ ನಡೆಯುತ್ತದೆ. ಚಿತ್ರದಲ್ಲಿ ಫಹಾದ್‌ ಅವರು ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿರಬಹುದು ಎನ್ನುವುದು ಊಹೆ. ಚಿತ್ರದ ರಿಲೀಸ್‌ ದಿನಾಂಕವಿನ್ನೂ ಘೋಷಣೆಯಾಗಿಲ್ಲ.

Previous article‘ಡೇರ್‌ ಡೆವಿಲ್‌ ಮುಸ್ತಾಫಾ’ಗೆ ತೆರಿಗೆ ವಿನಾಯ್ತಿ | ಟ್ವೀಟ್‌ ಮಾಡಿದ ಮುಖ್ಯಮಂತ್ರಿ
Next articleಬಾಲಿವುಡ್‌ ಹಿರಿಯ ಗಾಯಕಿ, ಸಂಗೀತ ಸಂಯೋಜಕಿ ಶಾರದಾ ನಿಧನ

LEAVE A REPLY

Connect with

Please enter your comment!
Please enter your name here