ಜಿತು ಮಾಧವನ್ ರಚಿಸಿ, ನಿರ್ದೇಶಿಸುತ್ತಿರುವ ‘ಆವೇಶಂ’ ಹಾರರ್ – ಕಾಮಿಡಿ ಮಲಯಾಳಂ ಸಿನಿಮಾದ ಫಸ್ಲುಕ್ ಬಿಡುಗಡೆಯಾಗಿದೆ. ಫಹಾದ್ ಫಾಸಿಲ್ ಹೀರೋ ಆಗಿ ನಟಿಸುತ್ತಿದ್ದು, ಈ ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.
‘ರೋಮಾಂಚಂ’ ಖ್ಯಾತಿಯ ಜಿತು ಮಾಧವನ್ ಬರೆದು ನಿರ್ದೇಶಿಸಿರುವ ಹಾರರ್ ಕಾಮಿಡಿ ‘ಆವೇಶಂ’ ಮಲಯಾಳಂ ಚಿತ್ರದಿಂದ ಫಹಾದ್ ಫಾಸಿಲ್ ಅವರ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ನಲ್ಲಿ ಫಹಾದ್ ಫಾಸಿಲ್ ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾಗಿರುವುದನ್ನು ಕಾಣಬಹುದು. ಗುಂಪಿನಲ್ಲಿ ಹಲವರು ಬಿಯರ್ ಬಾಟಲಿಗಳನ್ನು ಹಿಡಿದುಕೊಂಡಿರುವುದು ಸಹ ಚಿತ್ರದಲ್ಲಿ ಕಾಣಿಸುತ್ತದೆ. ಚಿತ್ರವನ್ನು Anwar Rasheed Entertainment ಮತ್ತು Fahadh Faasil and Friends Productions ಬ್ಯಾನರ್ ಅಡಿಯಲ್ಲಿ ನಜ್ರಿಯಾ ನಜಿಮ್ ಮತ್ತು ಅನ್ವರ್ ರಶೀದ್ ನಿರ್ಮಿಸುತ್ತಿದ್ದು, ಸುಶಿನ್ ಶ್ಯಾಮ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಲನಚಿತ್ರವು 2024ರ ಏಪ್ರಿಲ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ‘ಆವೇಶಂ’ ಸಿನಿಮಾದ ಜೊತೆಗೆ ಫಹಾದ್ ಫಾಸಿಲ್ ‘ಪುಷ್ಪ: ದಿ ರೂಲ್’ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಫಹಾದ್ ಅವರು ಎಸ್ಪಿ ಭನ್ವರ್ ಸಿಂಗ್ ಶೆಕಾವತ್ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಆಗಸ್ಟ್ 15, 2024ರಂದು ಬಿಡುಗಡೆಯಾಗಲಿದೆ.