ಜಯಸೂರ್ಯ, ಅನುಷ್ಕಾ ಶೆಟ್ಟಿ ನಟನೆಯ ‘ಕಥನಾರ್‌ The Wild Sorcerer’ Part-1 ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರೋಜಿನ್‌ ಥಾಮಸ್‌ ನಿರ್ದೇಶನದ ಫ್ಯಾಂಟಸಿ – ಹಾರರ್‌ ಚಿತ್ರವಿದು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಹೋಮ್‌’ ಸಿನಿಮಾ ಮೂಲಕ ಗಮನ ಸೆಳೆದಿದ್ದ ರೋಜಿನ್ ಥಾಮಸ್ ನಿರ್ದೇಶನದ ‘ಕಥನಾರ್‌ The Wild Sorcerer’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಜಯಸೂರ್ಯ ನಟನೆಯ ಈ ಫ್ಯಾಂಟಸಿ – ಹಾರರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾದ ಕಥಾವಸ್ತುವು ಕೇರಳದ ಕಡಮತ್ತು ಕಥನಾರ್ ಎಂಬ ಪಾದ್ರಿಯ ಸುತ್ತ ಸುತ್ತುತ್ತದೆ. ಟೀಸರ್‌ನಲ್ಲಿ ಜಯಸೂರ್ಯ ಅವರನ್ನು ಗಾಢ ಕತ್ತಲೆ ಕೋಣೆಯಲ್ಲಿ ಚರ್ಚ್ ಅಧಿಕಾರಿಗಳಿಂದ ಬಂಧಿಯಾಗಿರುವ ಖೈದಿಯಂತೆ ತೋರಿಸಲಾಗಿದೆ. ಆ ಹಳ್ಳಿಯಲ್ಲಿ ಕಾರಣಾಂತರಗಳಿಂದ ಗ್ರಾಮಸ್ಥರು ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುತ್ತಾರೆ. ಕಥನಾರ್ (ಜಯಸೂರ್ಯ) ಪಾದ್ರಿ ಉಡುಪಿನೊಂದಿಗೆ ಚರ್ಚ್‌ ಎದುರು ಕಾಣಿಸಿಕೊಳ್ಳುವ ಮೂಲಕ ಟೀಸರ್ ಕೊನೆಗೊಳ್ಳುತ್ತದೆ.

ಈ ಪ್ಯಾನ್‌ ಇಂಡಿಯಾ ಚಿತ್ರವನ್ನು ವಿಶ್ವದಾದ್ಯಂತ 7 ಭಾಷೆಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಸಿನಿಮಾದ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಇದನ್ನು 40,000 ಚದರ ಅಡಿಗಳಷ್ಟು ವಿಸ್ತಾರವಾದ ಮಾಡ್ಯುಲರ್‌ ಮಹಡಿಯ ಮೇಲೆ ಚಿತ್ರೀಕರಿಸಲಾಗಿದೆ. ಮೊದಲು ವಿಜಯ್ ಬಾಬು ಅವರ Friday Films ಈ ಸಿನಿಮಾ ನಿರ್ಮಾಣವನ್ನು ಆರಂಭಿಸಿತ್ತು. ನಂತರ Sree Gokulam Movies ಚಲನಚಿತ್ರ ನಿರ್ಮಾಣ ಸಂಸ್ಥೆ ಈ ಜವಬ್ದಾರಿ ವಹಿಸಿಕೊಂಡಿತು. ‘ಕಾಯಂಕುಲಂ ಕೊಚ್ಚುನ್ನಿ’, ‘ಕೇರಳ ವರ್ಮಾ ಪಝಸ್ಸಿ ರಾಜಾ’, ಮತ್ತು ‘ಪಥೋನ್‌ ಪಥಂ ನೂಟ್ಟಂಡು’ ಮುಂತಾದ ಚಲನಚಿತ್ರಗಳು ಈ ಸಂಸ್ಥೆಯಡಿ ತಯಾರಾಗಿವೆ. ‘ಕಥನಾರ್‌’ ಮುಂದಿನ ವರ್ಷ ತೆರೆಕಾಣಲಿದೆ.

Previous article‘ದಂತಕಥೆ’ ಪೋಸ್ಟರ್‌ ಬಿಡುಗಡೆ | ರಘು ಮುಖರ್ಜಿ, ಕಿಶೋರ್‌ ನಟನೆಯ ಸಿನಿಮಾ
Next articleಈ ವಾರ (ಸೆಪ್ಟೆಂಬರ್‌ 1) ಬಿಡುಗಡೆ | ‘ಸಪ್ತ ಸಾಗರದಾಚೆ ಎಲ್ಲೋ’, ‘ಖುಷಿ’, ‘ಕಿಕ್‌’

LEAVE A REPLY

Connect with

Please enter your comment!
Please enter your name here