ಜಿತು ಮಾಧವನ್‌ ನಿರ್ದೇಶನದ ‘ಆವೇಶಂ’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಫಹಾದ್‌ ಫಾಸಿಲ್‌ ನಟನೆಯ ಸಿನಿಮಾ ಇದೇ ವರ್ಷ ಏಪ್ರಿಲ್‌ 11ರಂದು ಥಿಯೇಟರ್‌ಗೆ ಬರುತ್ತಿದೆ.

ಫಹಾದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿರುವ ‘ಆವೇಶಂ’ ಮಲಯಾಳಂ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಹಾಸ್ಯ ಚಲನಚಿತ್ರವನ್ನು ‘ರೋಮಾಂಚಂ’ ಖ್ಯಾತಿಯ ಜಿತು ಮಾಧವನ್ ಬರೆದು ನಿರ್ದೇಶಿಸಿದ್ದಾರೆ. ಫಹಾದ್‌ ಚಿತ್ರದಲ್ಲಿ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ ಕಾರ್ನೀವಲ್ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಇದರ ನಡುವೆ ಜನರ ಗುಂಪಿನ ಹಿಂಭಾಗದಲ್ಲಿ ಫಹಾದ್ ಕಟೌಟ್‌ಗಳನ್ನು ಕಾಣಬಹುದು. ‘ರಂಗಾ (ಫಹದ್) ಇಷ್ಟು ದೊಡ್ಡ ಡಾನ್ ಆದದ್ದು ಹೇಗೆ?’ ಎಂದು ಅಂಬಾನ್‌ನನ್ನು (ಸಜಿನ್ ಗೋಪು) ಅವನ ಸ್ನೇಹಿತನೊಬ್ಬನು ಕೇಳುತ್ತಾನೆ. ಅಂಬಾನ್ ‘ಇದು ರಂಗನ ರಕ್ತದ ಇತಿಹಾಸದ ಕಥೆ. ರಂಗ ತನ್ನ ಶಾಲಾ ದಿನಗಳಲ್ಲಿ ತನ್ನ ಸಂಬಂಧಿಕರ ಜ್ಯೂಸ್ ಅಂಗಡಿಯೊಂದರಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡಲು ಪ್ರಾರಂಭಿಸಿದನು. ಒಂದು ದಿನ ಕೆಲವು ಗೂಂಡಾಗಳು ಗಲಾಟೆ ಮಾಡಲು ಅಲ್ಲಿಗೆ ಬಂದರು. ಅವರ ಬಳಿ ಹೆಚ್ಚು ಆಯುಧಗಳಿದ್ದವು. ಇದನ್ನು ನೋಡಿದ ರಂಗ ಅವನೊಂದಿಗೆ ಜಗಳ ಮಾಡಲು ಬಂದವನ ಮೇಲೆ ಹಾರಿ, ಆ ಗುಂಡಾಗಳ ನಾಯಕನನ್ನು ತಲುಪುವವರೆಗೆ ಒಬ್ಬರಿಂದ ಒಬ್ಬರಿಗೆ ಜಿಗಿದು, ಅವನನ್ನು ಇರಿದು ಕೊಚ್ಚಿ-ಕೊಚ್ಚಿ ಕೊಂದನು’ ಎಂದು ವಿವರಿಸುತ್ತಾನೆ.

‘ರಂಗಣ್ಣ ದೊಡ್ಡ ರೌಡಿ. ಅಡ್ಡಾಗೆ ಎಂಟ್ರಿ ಕೊಟ್ರೆ ಸಾಕು ಲಾಂಗ್‌ ಎತ್ತಿದ್‌ ತಕ್ಷಣ ಕತ್ತನ್ನ ಕಚಾಕ್‌ ಅಂತಾ ಕತ್ತರಿಸ್ತಾನೆ’ ಎಂಬ ವಾಯ್ಸ್‌ ಓವರ್ ಕೇಳಿಸುತ್ತದೆ. ಈ ಚಿತ್ರವನ್ನು Anwar Rasheed Entertainment ಮತ್ತು Fahadh Faasil and Friends Productions ಬ್ಯಾನರ್‌ ಅಡಿಯಲ್ಲಿ ನಜ್ರಿಯಾ ನಜಿಮ್ ಮತ್ತು ಅನ್ವರ್ ರಶೀದ್ ನಿರ್ಮಿಸಿದ್ದು, ಸುಶಿನ್ ಶ್ಯಾಮ್ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರವು ಏಪ್ರಿಲ್‌ 11 ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here