ನಿಶಾ ಪಹುಜಾ ನಿರ್ದೇಶನದ ‘ಟು ಕಿಲ್ ಎ ಟೈಗರ್’ ಹಿಂದಿ ಸಾಕ್ಷ್ಯಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಲೈಂಗಿಕ ದೌರ್ಜನ್ಯಕ್ಕೀಡಾದ ತನ್ನ 13 ವರ್ಷದ ಮಗಳು ಕಿರಣ್‌ಳ ನ್ಯಾಯಕ್ಕಾಗಿ ಹೋರಾಡುವ ರೈತ ರಂಜಿತ್ ಕತೆಯಿದು. Notice Pictures ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ National Film Board of Canada ಸಹನಿರ್ಮಾಣವಿದೆ.

ದೆಹಲಿ ಮೂಲದ ನಿಶಾ ಪಹುಜಾ ಅವರ ‘ಟು ಕಿಲ್ ಎ ಟೈಗರ್’ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಆಸ್ಕರ್‌’ಗೆ ನಾಮನಿರ್ದೇಶನಗೊಂಡಿದೆ. ಲೈಂಗಿಕ ದೌರ್ಜನ್ಯಕ್ಕೀಡಾದ ತನ್ನ 13 ವರ್ಷದ ಮಗಳು ಕಿರಣ್‌ಳ ನ್ಯಾಯಕ್ಕಾಗಿ ಹೋರಾಡುವ ರೈತ ರಂಜಿತ್ ಕತೆಯಿದು. 2017ರ ಜಾರ್ಖಂಡ್‌ನ ಘಟನೆ. ಭಾರತೀಯ ಮೂಲದ ಕೆನಡಾ ನಿರ್ದೇಶಕಿ ಈ ಸಾಕ್ಷ್ಯ ಚಿತ್ರದ ಸೃಷ್ಠಿಕರ್ತರಾಗಿದ್ದು ಈ ಕುರಿತು ಅವರು ‘ನನಗೆ ಇದು ಅತೀ ಅಶ್ಚರ್ಯವನ್ನುಂಟು ಮಾಡಿದ್ದು, ನಂಬಲಾರದ ಸಂಗತಿಯಾಗಿದೆ. ಇದು ಭಾವನಾತ್ಮಕ ಸಂದರ್ಭವಾಗಿದೆ. ಈ ಚಿತ್ರದಿಂದ ಕೊಂಚವಾದರೂ ಜಗತ್ತು ಬದಲಾದರೆ ತಾವು ರಚಿಸಿರುವ ಸಾಕ್ಷ್ಯಚಿತ್ರಕ್ಕೆ ಒಂದು ಸಾರ್ಥಕತೆ ದೊರೆಯುತ್ತದೆ. ಭಾರತೀಯ ರೈತನೊಬ್ಬನು ಕ್ರೂರ ಲೈಂಗಿಕ ದೌರ್ಜನ್ಯದ ವಿರುದ್ಧ ತನ್ನ ಮಗಳಿಗಾಗಿ ಕಾನೂನು ಹೋರಾಟ ನಡೆಸುವ ಸೂಕ್ಷ್ಮತೆಗಳನ್ನು ಚಿತ್ರ ಒಳಗೊಂಡಿದೆ’ ಎಂದಿದ್ದಾರೆ.

ಪ್ರಪಂಚದಾದ್ಯಂತ ಅತ್ಯಾಚಾರ ಮತ್ತು ಇತರೆ ಲೈಂಗಿಕ ಹಿಂಸಾಚಾರದಿಂದ ಬದುಕುಳಿದವರಿಗೆ ಕಾನೂನು ವ್ಯವಸ್ಥೆಗಳನ್ನು ಬದಲಾಯಿಸಬೇಕು ಎಂಬುದು ಅವರ ಆಶಯ. ಭಾರತಕ್ಕೆ ಹೋಲಿಸಿದರೆ US ಮತ್ತು UKಗಳಲ್ಲಿ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆ ಕಡಿಮೆ ಇರುತ್ತದೆ. ‘ನ್ಯಾಯ ವ್ಯವಸ್ಥೆಯ ವಿಷಯದಲ್ಲಿ ಕಿರಣ್ ಮತ್ತು ಅವಳ ಕುಟುಂಬ ಎದುರಿಸಿದ ಸಮಸ್ಯೆಗಳು, ಸಂಭವಿಸಿದ ಅವಮಾನಗಳು, ಸಮಾಜದ ಆ ಕುಟುಂಬದ ಮೇಲಿಟ್ಟಿದ್ದ ದೃಷ್ಟಿಕೋನವನ್ನು ಹಾಗೂ ಪ್ರಪಂಚದಾದ್ಯಂತ ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರು ಅನುಭವಿಸಿದ ಅನೇಕ ಸವಾಲುಗಳನ್ನು ಈ ಸಾಕ್ಷ್ಯಚಿತ್ರ ಚಿತ್ರಿಸಿದೆ’ ಎಂದಿದ್ದಾರೆ ಪಹುಜಾ. ಅವರು ಈ ಹಿಂದೆ ಎಮ್ಮಿ ನಾಮನಿರ್ದೇಶಿತ ‘ದಿ ವರ್ಲ್ಡ್ ಬಿಫೋರ್ ಹರ್’, ‘ಬಾಲಿವುಡ್ ಬೌಂಡ್’ ಸಾಕ್ಷ್ಯಚಿತ್ರ ಮತ್ತು ಮೂರು ಭಾಗಗಳ ಸರಣಿ ‘ಡೈಮಂಡ್ ರೋಡ್’ ಸೇರಿದಂತೆ ಕೆಲವು ಚಲನಚಿತ್ರಗಳನ್ನು ರಚಿಸಿದ್ದಾರೆ. ‘ಟು ಕಿಲ್‌ ಎ ಟೈಗರ್‌’ ಸಾಕ್ಷ್ಯಚಿತ್ರವು ನ್ಯೂಯಾರ್ಕ್‌ನ ಫಿಲ್ಮ್ ಫೋರಮ್‌ನಲ್ಲಿ ಅಕ್ಟೋಬರ್ 2023ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಾಕ್ಷ್ಯಚಿತ್ರವನ್ನು Notice Pictures ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿದ್ದು, National Film Board of Canada ಸಹನಿರ್ಮಾಣ ಮಾಡಿದೆ. ಇದು 2022ರಲ್ಲಿ ಟೊರೊಂಟೊ ಮತ್ತು ಪಾಮ್‌ ಸ್ಟ್ರಿಂಗ್ಸ್‌ ಚಿತ್ರೋತ್ಸವಗಳಲ್ಲಿ ‘ಅತ್ಯುತ್ತಮ ಸಾಕ್ಷ್ಯಚಿತ್ರ’ಕ್ಕಾಗಿ ಪ್ರಶಸ್ತಿ ಪಡೆದಿದೆ.

LEAVE A REPLY

Connect with

Please enter your comment!
Please enter your name here