ರಿಷಭ್‌ ಶೆಟ್ಟಿ ಅವರು ‘ಕಾಂತಾರಾ ಚಾಪ್ಟರ್‌ 1’ ಸಿನಿಮಾದ ಕೆಲಸಗಳಲ್ಲಿ ವ್ಯಸ್ತವಾಗಿದ್ದಾರೆ. ಸ್ಕ್ರಿಪ್ಟ್‌, ಪಾತ್ರಗಳ ಆಯ್ಕೆ ಲೋಕೇಶನ್‌ ಅಂತ ತುಂಬಾನೇ ಬ್ಯುಸಿ ಇದ್ದಾರೆ. ಇದರ ನಡುವೆ ರಿಷಭ್‌ ಶೆಟ್ಟಿ ಈಗ ಮಲಯಾಳಂ ನಟ ಮೋಹನ್‌ ಲಾಲ್‌ ಅವರನ್ನ ಭೇಟಿ ಮಾಡಿದ್ದಾರೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ.

ರಿಷಭ್‌ ಶೆಟ್ಟಿ ಯಾವುದಾದರೂ ದೊಡ್ಡ ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಸಾಕು, ಅವರು ಯಾವ ನಟ-ನಟಿಯರನ್ನಾದರೂ ಭೇಟಿಯಾದ್ರೆ ಗುಸುಗುಸು ಶುರುವಾಗಿಬಿಡುತ್ತದೆ. ರಿಷಭ್‌ ಭೇಟಿಯಾದ ಕಲಾವಿದರು ಅವರ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಈಗಲೂ ಸಹ ಇದೇ ಆಗಿದೆ. ನಟ ಹಾಗೂ ನಿರ್ದೇಶಕ ರಿಷಭ್‌ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಜೊತೆ ಮೋಹನ್‌ ಲಾಲ್‌ ಅವರನ್ನು ಭೇಟಿ ಮಾಡಿದ್ದಾರೆ. ಪ್ರಗತಿ ಮೋಹನ್‌ ಲಾಲ್‌ ಜೊತೆಗೆ ತೆಗೆಸಿಕೊಂಡ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಯಲ್ಲಿ ಇಬ್ಬರೂ ನಟರು ಪಂಚೆಯುಟ್ಟಿರೋದು ವಿಶೇಷ.

ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮೋಹನ್‌ ಲಾಲ್‌ ಹಾಗೂ ರಿಷಭ್‌ ಶೆಟ್ಟಿ ಒಟ್ಟಿಗೆ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಬ್ಬರ ಭೇಟಿ ಹಿಂದೆ ಯಾವುದೋ ದೊಡ್ಡ ಸಪ್ರೈಸ್‌ ಇದೆ ಅಂತಲೂ ಅಂದಾಜಿಸುತ್ತಿದ್ದಾರೆ. ಮತ್ತೆ ಕೆಲವರು ‘ಕಾಂತಾರ ಚಾಪ್ಟರ್‌ 1’ನಲ್ಲಿ ಮೋಹನ್‌ ಲಾಲ್‌ ಅವರನ್ನು ಕಾಸ್ಟ್‌ ಮಾಡಿ ಎಂದು ಸಲಹೆ ಕೊಡುತ್ತಿದ್ದಾರೆ. ಇದರ ನಡುವೆ ಈ ಮೋಹನ್‌ ಲಾಲ್‌ ಅವರು ಪ್ಯಾನ್‌ ಇಂಡಿಯಾ ಸಿನಿಮಾ ‘ಕಾಂತಾರ ಚಾಪ್ಟರ್‌ 1’ರಲ್ಲಿ ರಿಷಭ್‌ ಜೊತೆ ತೆರೆಕೊಳ್ಳಲಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿದೆ. ಈ ಹಿಂದೆ ರಿಷಭ್‌ ಶೆಟ್ಟಿ ಅವರು ಮಲಯಾಳಂ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಗಾಳಿ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ಸಹ ಕೊಟ್ಟಿದ್ದ ರಿಷಭ್‌ ತನಗೆ ಆಫರ್‌ ಬಂದಿದ್ದು ನಿಜ. ಆದರೆ, ನಾನು ಒಪ್ಪಲಿಲ್ಲ ಎಂದಿದ್ದರು.

LEAVE A REPLY

Connect with

Please enter your comment!
Please enter your name here