ನಟ ಅನೂಪ್‌ ಮೆನನ್‌ ‘ಬ್ಯೂಟಿಫುಲ್‌ 2’ ಮಲಯಾಳಂ ಸಿನಿಮಾ ಘೋಷಿಸಿದ್ದಾರೆ. 12 ವರ್ಷಗಳ ಹಿಂದೆ ತೆರೆಕಂಡ ‘ಬ್ಯೂಟಿಫುಲ್‌’ ಸೀಕ್ವೆಲ್‌ ಇದು. ಮೊದಲ ಚಿತ್ರದಲ್ಲಿ ನಟಿಸಿದ್ದ ಜಯಸೂರ್ಯ, ಮೇಘನಾ ರಾಜ್‌ ಸೀಕ್ವೆಲ್‌ನಲ್ಲಿ ನಟಿಸುತ್ತಿಲ್ಲ. ‘ಬ್ಯೂಟಿಫುಲ್‌’ ನಿರ್ದೇಶಿಸಿದ್ದ ವಿ ಕೆ ಪ್ರಕಾಶ್‌ ಅವರೇ ಸರಣಿ ಸಿನಿಮಾ ನಿರ್ದೇಶಿಸಲಿದ್ದಾರೆ.

ಅನೂಪ್ ಮೆನನ್ ಚಿತ್ರಕಥೆ ಬರೆದು, ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 2011ರ ಮಲಯಾಳಂ ಚಿತ್ರ ‘ಬ್ಯೂಟಿಫುಲ್‌’ ಯಶಸ್ಸು ಕಂಡಿತ್ತು. ವಿ ಕೆ ಪ್ರಕಾಶ್‌ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಮೇಘನಾ ರಾಜ್‌, ಜಯಸೂರ್ಯ ನಟಿಸಿದ್ದರು. ಇದೀಗ ಅನೂಪ್‌ ಸೀಕ್ವೆಲ್‌ ಘೋಷಿಸಿದ್ದಾರೆ. ಆದರೆ ಸಿಕ್ವೆಲ್‌ನಲ್ಲಿ ಜಯಸೂರ್ಯ ಮತ್ತು ಮೇಘನಾ ರಾಜ್‌ ನಟಿಸುತ್ತಿಲ್ಲ. ‘ಮೊದಲ ಚಿತ್ರದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ಬಳಗವೇ ಸೀಕ್ವೆಲ್‌ನಲ್ಲಿ ಕೆಲಸ ಮಾಡಲಿದೆ. Badusha Productions ಮತ್ತು Yes Cinema Company ಸಹಯೋಗದಲ್ಲಿ ‘ಬ್ಯೂಟಿಪುಲ್ ‌2′ ನಿರ್ಮಾಣವಾಗಲಿದೆ’ ಎಂದಿದ್ದಾರೆ ಅನೂಪ್‌. ಜೋಮೊನ್ ಟಿ ಜಾನ್ ಛಾಯಾಗ್ರಹಣ, ಮಹೇಶ್ ನಾರಾಯಣನ್ ನಿರ್ಮಾಣ, ಅಜಯ್ ಮಂಗಾಡ್ ಕಲಾ ನಿರ್ದೇಶನ ಸಜಿಮೋನ್ ಮತ್ತು ರತೀಶ್ ವೇಗಾ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ. ಮೃದುಲ್ ನಾಯರ್ ಮತ್ತು ವಿನಯ್ ಗೋವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here