ಸಿನಿಪ್ರೇಮಿಗಳ ಊಹೆ ನಿಜವಾಗಿದೆ. ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟಿಸುವುದು ಖಾತ್ರಿಯಾಗಿದೆ. ಈಗಾಗಲೇ ಹಲವು ಜನಪ್ರಿಯ ನಟರು ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದು, ಪ್ರಭಾಸ್‌ ಎಂಟ್ರಿಯಿಂದ ಸಿನಿಮಾಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ PAN ಇಂಡಿಯಾ ‘ಕಣ್ಣಪ್ಪ’ ತೆಲುಗು ಸಿನಿಮಾದ ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟಿಸಲಿದ್ದಾರೆ. ಚಿತ್ರತಂಡದಿಂದ ಈ ಮಾಹಿತಿ ಹೊರಬಿದ್ದಿದೆ. ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಪೌರಾಣಿಕ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಿಷ್ಣು ಮಂಚು ನಟಿಸುತ್ತಿದ್ದಾರೆ. ತೆಲುಗು ಹಿರಿಯ ನಟ ಮೋಹನ್‌ ಬಾಬು ಅವರು ಪುತ್ರ ವಿಷ್ಣು ಮಂಚುಗಾಗಿ ನಿರ್ಮಿಸುತ್ತಿರುವ ಮಹತ್ವದ ಚಿತ್ರವಿದು. ಈಗಾಗಲೇ ಚಿತ್ರತಂಡಕ್ಕೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಮೋಹನ್‌ಲಾಲ್‌, ಶರತ್‌ ಕುಮಾರ್‌ ಅವರ ಸೇರ್ಪಡೆಯಾಗಿದೆ. ಈಗ ಪ್ರಭಾಸ್‌ ಸೇರ್ಪಡೆಯಿಂದಾಗಿ ಚಿತ್ರದ ತೂಕ ಮತ್ತಷ್ಟು ಹೆಚ್ಚಿದಂತಾಗಿದೆ.

‘ಕಣ್ಣಪ್ಪ’ ಚಿತ್ರದಲ್ಲಿ ಪ್ರಭಾಸ್‌ ನಟಿಸುವ ಬಗ್ಗೆ ಕಳೆದ ಐದಾರು ತಿಂಗಳ ಹಿಂದೆಯೇ ವದಂತಿ ಹರಡಿತ್ತು. ಚಿತ್ರದಲ್ಲಿ ಪ್ರಭಾಸ್‌ ಅವರು ಶಿವನ ಪಾತ್ರ ನಿರ್ವಹಿಸಬೇಕು ಎನ್ನುವುದು ಪ್ರಭಾಸ್‌ ಅಭಿಮಾನಿಗಳ ಆಸೆಯಾಗಿದೆ. ಪ್ರಭಾಸ್‌ ನಟಿಸುವ ಅಧಿಕೃತ ಸುದ್ದಿ ಬರುವ ಮುಂಚೆಯೇ ಅಭಿಮಾನಿಗಳು ಶಿವನ ಗೆಟಪ್‌ನಲ್ಲಿ ತಮ್ಮ ನೆಚ್ಚಿನ ನಟನ ವಿನ್ಯಾಸಗಳನ್ನು ಮಾಡಿದ್ದರು. ಈ ಪೋಸ್ಟರ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿವೆ. ಆದರೆ ಚಿತ್ರತಂಡದಿಂದ ಮಾತ್ರ ಅವರ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಳೆದ ಏಳು ವರ್ಷಗಳಿಂದ ಈ ಪ್ರಾಜೆಕ್ಟ್‌ ಸಲುವಾಗಿ ವಿಷ್ಣು ಮಂಚು ಶ್ರಮಿಸುತ್ತಿದ್ದಾರೆ. ಅಷ್ಟೇ ಅದ್ದೂರಿಯಾಗಿಯೇ ಅದನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಛಾಯಾಗ್ರಹಣ, ಕೇಚ ಖಂಫಕದೀ ಸಾಹಸ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here