ಪುರಿ ಜಗನ್ನಾಥ್‌ ನಿರ್ದೇಶನದ ‘ಡಬಲ್‌’ ಇಸ್ಮಾರ್ಟ್‌’ ತೆಲುಗು ಸಿನಿಮಾತಂಡಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ ಸೇರ್ಪಡೆಗೊಂಡಿದ್ದಾರೆ. ರಾಮ್‌ ಪೋತಿನೇನಿ ನಟಿಸುತ್ತಿರುವ ಚಿತ್ರದಲ್ಲಿ ಸಂಜಯ್‌ ದತ್‌ ‘ಬಿಗ್‌ ಬುಲ್‌’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪುರಿ ಜಗನ್ನಾತ್‌ ಮತ್ತು ನಟ ಚಾರ್ಮಿ ಕೌರ್‌ ನಿರ್ಮಿಸುತ್ತಿರುವ ಚಿತ್ರವಿದು.

‘KGF2’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಬಾಲಿವುಡ್‌ ನಟ ಸಂಜಯ್‌ ದತ್‌ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಪುರಿ ಜಗನ್ನಾಥ್‌ ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾಗೆ ಅವರನ್ನು ಕರೆತರಲಾಗಿದೆ. ಇಂದು ನಟ ಸಂಜಯ್‌ ದತ್‌ ಬರ್ತ್‌ಡೇ. ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರದಲ್ಲಿನ ಅವರ ‘ಬಿಗ್‌ ಬುಲ್‌’ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಪುರಿ ಜಗನ್ನಾಥ್‌. ದಾಡಿ ಬಿಟ್ಟು, ಸ್ಟೈಲಿಶ್‌ ಲುಕ್‌ನಲ್ಲಿ ಸಿಗಾರ್ ಸೇದುತ್ತಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ‘ಮುನ್ನಾಭಾಯ್‌’. ಪುರಿ ಜಗನ್ನಾಥ್‌ ಅವರೊಂದಿಗೆ ಚಿತ್ರನಿರ್ಮಾಣದಲ್ಲಿ ನಟಿ ಚಾರ್ಮಿ ಕೌರ್‌ ಕೈಜೋಡಿಸಿದ್ದಾರೆ. ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಸೆಟ್ಟೇರಿದ್ದ ಸಿನಿಮಾಗೆ PAN ಇಂಡಿಯಾ ಲೇಬಲ್‌ ಇದೆ. ಸಿನಿಮಾಗೆ ಹಾಲಿವುಡ್ ಸಿನಿಮಾಟೋಗ್ರಾಫರ್‌ ಗಿಯಾನಿ ಜಿಯಾನೆಲ್ಲಿ ಛಾಯಾಗ್ರಹಣ ಮಾಡುತ್ತಿದ್ದಾರೆ. ‘ಲೈಗರ್’ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದ ವಿಷು ರೆಡ್ಡಿ ಅವರು ‘ಪುರಿ ಕನೆಕ್ಟ್’ ಪ್ರೊಡಕ್ಷನ್ಸ್‌ನ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಮೂಲ ತೆಲುಗು ಸೇರಿದಂತೆ ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಆಂಥೋನಿ ದಾಸ್‌ | ದಕ್ಷಿಣದಲ್ಲಿ ಸಂಜಯ್‌ ದತ್‌ ಅವರು ನಟಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ‘Leo’. ಲೋಕೇಶ್‌ ಕನಗರಾಜ್‌ ನಿರ್ದೇಶನದಲ್ಲಿ ವಿಜಯ್‌ ನಟಿಸುತ್ತಿರುವ ಬಹುನಿರೀಕ್ಷಿತ ತಮಿಳು ಚಿತ್ರವಿದು. ಈ ಸಿನಿಮಾದಲ್ಲಿ ಸಂಜಯ್‌ ದತ್‌ ‘ಅಂಥೋನಿ ದಾಸ್‌’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್‌ ಬರ್ತ್‌ಡೇ ನಿಮಿತ್ತ ‘Leo’ ತಂಡ ಚಿತ್ರದಲ್ಲಿನ ಅವರ ಕ್ಯಾರಕ್ಟರ್‌ ಲುಕ್‌ ವೀಡಿಯೋ ಬಿಡುಗಡೆ ಮಾಡಿದೆ. ನಿರ್ದೇಶಕ ಲೋಕೇಶ್‌ ಕನಗರಾಜ್‌ ಅವರು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ನಟ ಸಂಜಯ್‌ ದತ್‌, ‘The teaser is just a hint of the epic journey that lies ahead. Thank you team for this gift!’ ಎನ್ನುವ ಒಕ್ಕಣಿಯೊಂದಿಗೆ ಈ ವೀಡಿಯೋ ಹಂಚಿಕೊಂಡಿದ್ದಾರೆ.

Previous articleರಜನಿ ‘ಜೈಲರ್‌’ ಜೊತೆ ಧನಂಜಯ ‘ತೋತಾಪುರಿ 2’ ಸಿನಿಮಾ ಬಿಡುಗಡೆ
Next article‘ಚಂದ್ರಮುಖಿ 2’ ನೂತನ ಪೋಸ್ಟರ್‌ | ವೆಟ್ಟೈಯನ್‌ ರಾಜನಾಗಿ ರಾಘವ ಲಾರೆನ್ಸ್‌

LEAVE A REPLY

Connect with

Please enter your comment!
Please enter your name here