ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯದ ‘ಪುಷ್ಪ’ ಸಿನಿಮಾದ ರೊಮ್ಯಾಂಟಿಕ್ ಲಿರಿಕಲ್ ಸಾಂಗ್‌ ರಿಲೀಸ್ ಆಗಿದೆ. ಈ ಹಾಡಿನ ಕನ್ನಡ ಅವತರಣಿಕೆಯೂ ಬಿಡುಗಡೆಯಾಗಿದ್ದು, ಅನನ್ಯಾ ಭಟ್‌ ಹಾಡಿದ್ದಾರೆ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೋಡಿಯ ‘ಪುಷ್ಪ’ ದಕ್ಷಿಣ ಭಾರತದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಈಗ ಚಿತ್ರದ ಮೂರನೇ ಲಿರಿಕಲ್ ಹಾಡು ‘ಸಾಮಿ ಸಾಮಿ’ ಬಿಡುಗಡೆಯಾಗಿದೆ. ಹೀರೋ ಅಲ್ಲು ಅರ್ಜುನ್‌ ಟ್ವಿಟರ್‌ನಲ್ಲಿ ಹಾಡಿನ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು ಮತ್ತು ಮಲಯಾಳಂ ಅವತರಣಿಕೆಗಳ ಲಿಂಕ್‌ಗಳನ್ನು ಅಲ್ಲು ಶೇರ್ ಮಾಡಿದ್ದಾರೆ. ಕನ್ನಡ ಅವತರಣಿಕೆಯ ಟ್ಯೂನ್‌ಗೆ ವರದರಾಜು ಚಿಕ್ಕಬಳ್ಳಾಪುರ ಗೀತೆ ರಚಿಸಿದ್ದಾರೆ. ಅನನ್ಯಾ ಭಟ್‌ ಹಾಡಿಗೆ ದನಿಯಾಗಿದ್ದಾರೆ.

ಮೂಲ ತೆಲುಗು ಅವತರಣಿಕೆಯ ‘ಸಾಮಿ ಸಾಮಿ’ ಹಾಡಿಗೆ ಮೋನಿಕಾ ಯಾದವ್ ದನಿಯಾಗಿದ್ದಾರೆ. ತನ್ನ ಪ್ರಿಯತಮನೆಡೆಗೆ ಶ್ರೀವಳ್ಳಿಯ ಪ್ರೀತಿಯ ಹಾಡು ‘ಸಾಮಿ ಸಾಮಿ’. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಸಹನರ್ತಕಿಯರಿಗೆ ಶೇಖರ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾ ಗಂಧದ ಮರ ಸ್ಮಗ್ಲಿಂಗ್ ಸುತ್ತ ಹೆಣೆದಿರುವ ಕಥಾವಸ್ತು. ಮಲಯಾಳಂ ನಟ ಫಹಾದ್ ಫಾಸಿಲ್‌, ಕನ್ನಡಿಗ ಧನಂಜಯ, ರಾವ್ ರಮೇಶ್‌, ಅಜಯ್ ಘೋಷ್ ಇತರರು ತಾರಾಬಳಗದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣದ ಸಿನಿಮಾ ಡಿಸೆಂಬರ್‌ 17ರಂದು ತೆರೆಕಾಣಲಿದೆ.

Previous articleಬಾಲಾ ನಿರ್ದೇಶನದಲ್ಲಿ ಸೂರ್ಯ; ಇದು ಈ ಜೋಡಿಯ ನಾಲ್ಕನೇ ಸಿನಿಮಾ
Next articleಯಶ್ ರಾಜ್ ನಿರ್ಮಾಣದ ನಾಲ್ಕು ಹಿಂದಿ ಸಿನಿಮಾ ಪ್ರೈಂ ವೀಡಿಯೋ ಪಾಲು

LEAVE A REPLY

Connect with

Please enter your comment!
Please enter your name here