ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೆಡ್ ಹಾಟ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇಂದು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಫೋಟೋಗೆ ಪತಿ ವಿರಾಟ್ ಕೊಹ್ಲಿ ಮತ್ತು ಅಭಿಮಾನಿಗಳಿಂದ ಭರಪೂರ ಮೆಚ್ಚುಗೆಯ ಕಮೆಂಟ್‌ಗಳು ಬಂದಿವೆ. ಅಮೇಜಾನ್ ಪ್ರೈಮ್‌ನ ‘ದಿ ವೀಲ್ ಆಫ್ ಟೈಮ್’ ಸರಣಿಯೊಂದಿಗೆ ಗುರುತಿಸಿಕೊಳ್ಳುವ ಸೂಚನೆ ನೀಡಿದ್ದಾರೆ ನಟಿ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಮಿಂಚುತ್ತಿದ್ದಾರೆ. ರೆಡ್ ಹಾಟ್ ಬಾಡಿಕಾನ್ ಡ್ರೆಸ್ ತೊಟ್ಟ ನಟಿ ಕೈಲಿ ರಾಬರ್ಟ್ ಜೋರ್ಡಾನ್ ಅವರ ‘ದಿ ವೀಲ್ ಆಫ್ ಟೈಂ’ ಪುಸ್ತಕ ಹಿಡಿದಿದ್ದಾರೆ. ಈ ಕೃತಿಯನ್ನು ಆಧರಿಸಿ ಅಮೇಜಾನ್ ಪ್ರೈಮ್‌ನಲ್ಲಿ ಸರಣಿ ಮೂಡಿಬರುತ್ತಿದೆ. ಮುಂದಿನ ದಿನಗಳಲ್ಲಿ ಅನುಷ್ಕಾ ಈ ಸರಣಿಯೊಂದಿಗೆ ಗುರುತಿಸಿಕೊಳ್ಳಲಿದ್ದು, ಇದು ಪ್ರೊಮೋಷನ್ ಫೋಟೊ ಎಂದೂ ಹೇಳಲಾಗುತ್ತಿದೆ. “ಪ್ರೈಮ್ ಜೊತೆಗಿನ ಅಪೂರ್ವ ಕೊಲ್ಯಾಬರೇಷನ್ ಇದು” ಎಂದು ಇನ್‌ಸ್ಟಾದಲ್ಲಿ ನಟಿ ಸ್ಟೇಟಸ್ ಹಾಕಿದ್ದಾರೆ. ಪತ್ನಿಯ ಸುಂದರ ಫೋಟೋಗೆ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಫೈರ್ ಎಮೋಜಿ ಹಾಕಿದ್ದು, ಅಭಿಮಾನಿಗಳ ನೂರಾರು ಮೆಚ್ಚುಗೆಯ ಕಾಮೆಂಟ್‌ಗಳು ಬಂದಿವೆ.
ನಿನ್ನೆ ಕೂಡ ಅನುಷ್ಕಾ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಬ್ಲಾಕ್ ಡ್ರೆಸ್‌ನಲ್ಲಿನ ಸನ್— ಕಿಸ್ಡ್ ಫೋಟೊ ಹಾಕಿದ್ದರು. “ಸೂರ್ಯ ಮಿನುಗುತ್ತಿದ್ದಾನೆ, ಹವಾಮಾನ ಸೂಪರ್ ಆಗಿದೆ, ಕ್ಯಾಮೆರಾಗೆ ಪೋಸು ಕೊಡಲು ಇದೆ ಪ್ರೇರಣೆ” ಎನ್ನುವ ಕಾಮೆಂಟ್‌ಗಳೊಂದಿಗೆ ಫೋಟೊಗಳನ್ನು ಹಾಕಿದ್ದರು. ಫೆಬ್ರವರಿಯಲ್ಲಿ ವಿರಾಟ್ – ಅನುಷ್ಕಾ ದಂಪತಿಗೆ ಮಗಳು ವಮಿಕಾ ಜನಿಸಿದ್ದಳು. ನಟನೆಯಿಂದ ಬ್ರೇಕ್ ಪಡೆದಿದ್ದ ನಟಿ ಕಳೆದ ವಾರ ಪ್ರೊಫೆಷನಲ್ ಫೋಟೊಶೂಟ್‌ನ ಕೆಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ನಟಿಯಾಗಿ ದೊಡ್ಡ ಪರದೆ ಮೇಲೆ ಕೊನೆಯ ಬಾರಿ ಅವರು ಕಾಣಿಸಿಕೊಂಡಿದ್ದು 2018ರ ‘ಝೀರೋ’ ಚಿತ್ರದಲ್ಲಿ. ಮುಂದಿನ ದಿನಗಳಲ್ಲಿ ನವ್‌ದೀಪ್ ಸಿಂಗ್ ನಿರ್ದೇಶನದ ‘ಕನೇಡಾ’ ಚಿತ್ರದೊಂದಿಗೆ ಅವರು ತೆರೆಗೆ ಮರಳಲಿದ್ದಾರೆ. ಸದ್ಯದಲ್ಲೇ ಅವರ ಬ್ಯಾನರ್‌ನಡಿ ನೂತನ ಚಿತ್ರವೊಂದು ಸೆಟ್ಟೇರಲಿದೆ.