ನಿರ್ದೇಶಕ ಕರಣ್ ಜೋಹರ್ ತಮಾಷೆ ಸ್ವಭಾವದ ವ್ಯಕ್ತಿ. ತಮ್ಮ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಶೂಟಿಂಗ್‌ ಸೆಟ್‌ನಲ್ಲಿ ಸಿನಿಮಾದ ಬಳಗದವರನ್ನು ಮಾತಿಗೆಳೆದು ತಮಾಷೆಯ ಚಿಟ್‌ಚಾಟ್ ಮಾಡಿ ಇನ್‌ಸ್ಟಾಗ್ರಾಮ್‌ಗೆ ವೀಡಿಯೋ ಹಾಕುತ್ತಿದ್ದಾರೆ. ಈ ವೀಡಿಯೋಗಳು ಇಲ್ಲಿವೆ ನೋಡಿ.

ನಿರ್ದೇಶಕ ಕರಣ್ ಜೋಹರ್ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ತಮ್ಮ ನಿರ್ದೇಶನ, ನಿರ್ಮಾಣದ ಚಿತ್ರಗಳು ಚಾಲ್ತಿಯಲ್ಲಿದ್ದರಂತೂ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಒಂದು ಕಡೆ ಇದು ಸಿನಿಮಾ ಪ್ರಚಾರವೂ ಆದಂತಾಗುತ್ತದೆ. ಮತ್ತೊಂದೆಡೆ ತಮ್ಮ ಫಾಲೋವರ್ಸ್‌ಗಳಿಗೆ ಕಂಟೆಂಟ್ ಕೊಟ್ಟಂತೆಯೂ ಆಗುತ್ತದೆ. ಧರಿಸುವ ಬಟ್ಟೆ, ನಡಾವಳಿ, ಇಲ್ಲವೇ ಸಿನಿಮಾ ಕುರಿತಾದರೂ ತರ್ಲೆ ಪ್ರಶ್ನೆಗಳನ್ನು ಕೇಳುವುದು ಈ ವೀಡಿಯೋ ಕಾನ್ಸೆಪ್ಟ್‌. ಸದ್ಯ ಅವರೀಗ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಚಿತ್ರದ ಕಲಾವಿದರಾದ ರಣವೀರ್ ಸಿಂಗ್‌, ಅಲಿಯಾ ಭಟ್‌ ಅವರೊಂದಿಗೆ ತಮಾಷೆಯ ಚಿಟ್‌ಮಾಡಿ ವೀಡಿಯೋ ಹಾಕಿದ್ದರು. ಕಿರೋನ್‌ ಖೇರ್‌, ಮಲೈಕಾ ಅರೋರಾ ಅವರ ‘ಟೂಡಲ್ಸ್‌’ ವೀಡಿಯೋಗಳನ್ನೂ ಮಾಡಿದ್ದ ಅವರೀಗ ನೃತ್ಯ ನಿರ್ದೇಶಕಿ ಫರ್ಹಾ ಖಾನ್‌ ಅವರನ್ನು ಮಾತನಾಡಿಸಿದ್ದಾರೆ.

Previous articleನೈಜ ಚಿತ್ರಣದ ‘ಚುಂಬಕ್’; Sony LIVನಲ್ಲಿ ಸ್ಟ್ರೀಮ್ ಆಗುತ್ತಿದೆ ಮರಾಠಿ ಸಿನಿಮಾ
Next articleಇನ್‌ಸ್ಟಾದಲ್ಲಿ ಅನುಷ್ಕಾ ಮಿಂಚು; ಪ್ರೈಮ್‌ನ ‘ದಿ ವೀಲ್ ಆಫ್ ಟೈಮ್’ ಸರಣಿ ಜೊತೆ ಗುರುತಿಸಿಕೊಳ್ಳುವರೇ ನಟಿ?

LEAVE A REPLY

Connect with

Please enter your comment!
Please enter your name here