ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾದ ನಂತರ ಭಾರತೀಯ ಚಿತ್ರರಂಗದ ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ. ಹಿಂದಿ ನಟ ಸುನೀಲ್ ಶೆಟ್ಟಿ ಅವರು ಆರ್ಯನ್‌ ಪರ ಮಾತನಾಡಿದ್ದು ಸರಿಯಷ್ಟೆ. ಈಗ ಕನ್ನಡದ ನಟಿ ರಮ್ಯಾ ಸರದಿ.

ಆರ್ಯನ್ ಖಾನ್ ವಿಚಾರಣೆಯ ಕುರಿತು ಮಾತನಾಡಿರುವ ರಮ್ಯಾ ಎನ್‌ಸಿಬಿ ಆರ್ಯನ್‌ರನ್ನು ವಶಕ್ಕೆ ಪಡೆದಾಗ ಆತನ ಬಳಿ ಡ್ರಗ್ಸ್ ಇರಲಿಲ್ಲ. ಅವನು ಡ್ರಗ್ಸ್ ಸೇವಿಸಿದ್ದಕ್ಕೆ ಸಾಕ್ಷಿಗಳೂ ಇಲ್ಲ. ಆದರೂ ಅವನ ಮೇಲೆ ಆಪಾದನೆ ಹೊರಿಸಲಾಗಿದೆ ಎಂದು ಉಲ್ಲೇಖವಾಗಿರುವ ವರದಿಗಳ ಬಗ್ಗೆ ಮಾತನಾಡಿದ್ದಾರೆ. ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, “ಪಾರ್ಟಿ ಅರೇಂಜ್ ಮಾಡಿದವರು ನಮಗೆ ಸಿಕ್ಕಿಲ್ಲ. ಅವರಿಗೂ ಡ್ರಗ್ಸ್ ಖರೀದಿ ಮಾಡಿದವರಿಗೂ ಏನು ಸಂಬಂಧ ಇದೆ ಅಂತ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆರೋಪಿಗಳು ಸಿಕ್ಕಿಲ್ಲವೆಂಬ ಕಾರಣಕ್ಕೆ ಅಲ್ಲಿದ್ದ ಮುಗ್ಧರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಅನುಮಾನ ಬರುತ್ತದೆ. ಅದಲ್ಲದೆ ಎನ್‌ಸಿಬಿ ವಿಚಾರಣೆ ನಡೆಯುವ ಸಂಗತಿಗಳು ಎಲ್ಲೂ ಬಹಿರಂಗವಾಗುವಂತಿಲ್ಲ. ಆದರೆ ಆರ್ಯನ್ ತಪ್ಪೊಪ್ಪಿಕೊಂಡಿದ್ದಾನೆ. ಅವನು ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಎಂದೆಲ್ಲ ಮೀಡಿಯಾಗಳಲ್ಲಿ ಗಾಸಿಪ್ ಹಬ್ಬಿಸಲಾಗುತ್ತಿದೆ. ಇದು ಹೇಗೆ ಸಾಧ್ಯ? ಇಲ್ಲಿ ಏನಾಗ್ತಾ ಇದೆ ಅನ್ನೋದೇ ಗೊತ್ತಾಗ್ತಾ ಇಲ್ಲ. ಸಂಪೂರ್ಣ ಸಾಕ್ಷಿ ಇರುವ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇಂಥ ಪ್ರಕರಣಗಳಲ್ಲಿ ಅತೀವ ಆಸಕ್ತಿ ತೋರಿಸುತ್ತದೆ” ಎಂದಿದ್ದಾರೆ ರಮ್ಯಾ.

ಇನ್ನು ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್, ಆರ್ಯನ್ ಮತ್ತು ಅವರ ಸ್ನೇಹಿತನನ್ನು ಅರೆಸ್ಟ್ ಮಾಡಿ ಎನ್‌ಸಿಬಿ ಆಫೀಸಿಗೆ ಕರೆದುಕೊಂಡು ಬಂದ ಇಬ್ಬರು ವ್ಯಕ್ತಿಗಳು ಹೊರಗಿನವರು. ಅವರಲ್ಲಿ ಒಬ್ಬ ಬಿಜಿಪಿ ಆಫೀಸಿನಲ್ಲಿ ಕೆಲಸ ಮಾಡುತ್ತಾನೆ. ಹೊರಗಿನ ವ್ಯಕ್ತಿಗಳನ್ನು ಎನ್‌ಸಿಬಿ ಬಳಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಇದೀಗ ಪ್ರಕರಣದ ಬಗ್ಗೆ ರಮ್ಯಾ ಮಾತನಾಡಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ದಿನೇ ದಿನೇ ಶಾರುಖ್ ಪುತ್ರನ ಡ್ಗಗ್ಸ್ ಪ್ರಕರಣ ವಿವಿಧ ಆಯಾಮಗಳನ್ನು ತಾಳುತ್ತಿದೆ.

LEAVE A REPLY

Connect with

Please enter your comment!
Please enter your name here