ನಟ ರಮೇಶ್‌ ಅರವಿಂದ್‌ ಮತ್ತು ಗಣೇಶ್‌ ಕಾಂಬಿನೇಷನ್‌ ನೂತನ ಸಿನಿಮಾ ಘೋಷಣೆಯಾಗಿದೆ. ವಿಖ್ಯಾತ್‌ ಎ ಆರ್‌ ನಿರ್ದೇಶಿಸಲಿರುವ ಚಿತ್ರದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಇದು ರಮೇಶ್‌ ಅರವಿಂದ್‌ ಅವರ 107ನೇ ಸಿನಿಮಾ.

ನಟ ರಮೇಶ್‌ ಅರವಿಂದ್‌ ಮತ್ತು ಗಣೇಶ್ ಒಟ್ಟಿಗೆ ನಟಿಸಲಿರುವ ಹೊಸ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ತಾತ್ಕಾಲಿಕವಾಗಿ ಚಿತ್ರಕ್ಕೆ ‘ಪ್ರೊಡಕ್ಷನ್ ನಂಬರ್ 6’ ಎಂದು ನಾಮಕರಣ ಮಾಡಲಾಗಿದ್ದು, ಪೋಸ್ಟರ್ ಮೇಲೆ ‘Greatest Show Seen Ever’ ಎಂದು ಬರೆಯಲಾಗಿದೆ. ವಿಖ್ಯಾತ್ ಎ ಆರ್ ಚಿತ್ರವನ್ನು ಬರೆದು ನಿರ್ದೇಶಿಸುತ್ತಿದ್ದಾರೆ. ಪೋಸ್ಟರ್​ನಲ್ಲಿ ವಿದೇಶಿ ಸೈನಿಕರು ಸಾಲಾಗಿ ಕುಳಿತು ಗ್ರೂಪ್​ ಫೋಟೊಗೆ ಫೋಸು ನೀಡಿದ್ದಾರೆ. ಆ ವಿದೇಶಿ ಸೈನಿಕರ ನಡುವೆ ರಮೇಶ್ ಮತ್ತು ಗಣೇಶ್ ಜೋಕರ್ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಮೂಲಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ? ಸಿನಿಮಾದಲ್ಲಿಇರಬಹುದಾದ ಕತೆಯ ಬಗ್ಗೆ ಈ ಪೋಸ್ಟರ್‌ ಕುತೂಹಲ ಕೆರಳಿಸಿದೆ.

ಟ್ವಿಟರ್‌ನಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, ‘ನನ್ನ 107ನೇ ಸಿನಿಮಾದ ಮಾಹಿತಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಇನ್ನಷ್ಟು ಖುಷಿ ತಂದಿದೆ’ ಎಂದಿದ್ದಾರೆ. ಮೊನ್ನೆ ಸೆಪ್ಟೆಂಬರ್‌ 10ರಂದು ರಮೇಶ್‌ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಮತ್ತೊಂದು ನೂತನ ಸಿನಿಮಾ ‘ದೈಜಿ’ ಘೋಷಣೆಯಾಗಿದೆ. ಇತ್ತೀಚೆಗೆ ಸ್ಟಾರ್‌ ಸುವರ್ಣ ವಾಹಿನಿಯ ‘ನೀನಾದೆ ನಾ’ ಧಾರಾವಾಹಿ ಸೆಟ್​ಗೆ ಭೇಟಿ ನೀಡಿದ್ದರು ರಮೇಶ್‌. ಧಾರಾವಾಹಿಯು 100 ಎಪಿಸೋಡ್ ಪೂರ್ಣಗೊಳಿಸಿದ ಖುಷಿಯನ್ನು ಧಾರಾವಾಹಿಯ ನಟರೊಂದಿಗೆ ಹಂಚಿಕೊಂಡು, ಸೆಟ್‌ನಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here