ತಾಪ್ಸಿ ಪನ್ನುನಟನೆಯ ‘ಲೂಪ್‌ ಲಪೇಟಾ’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ನಟಿ ತಾಪ್ಸಿ ಚಿತ್ರದ ಮೋಷನ್‌ ಪೋಸ್ಟರ್‌ ಶೇರ್‌ ಮಾಡಿ ಈ ಮಾಹಿತಿ ನೀಡಿದ್ದಾರೆ.

“ಇದೀಗ ಓಡುವ ಸಮಯ” ಎನ್ನುವ ಕ್ಯಾಪ್ಶನ್‌ನೊಂದಿಗೆ ನಟಿ ತಾಪ್ಸಿ ಪನ್ನು ತಮ್ಮ ‘ಲೂಪ್‌ ಲಪೇಟಾ’ ಹಿಂದಿ ಸಿನಿಮಾದ ಮೋಷನ್‌ ಪೋಸ್ಟರ್‌ ಶೇರ್‌ ಮಾಡಿದ್ದಾರೆ. ಅವರ ಈ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಯಶಸ್ವೀ ಜರ್ಮನ್‌ ಸಿನಿಮಾ ‘ರನ್‌ ಲೋಲಾ ರನ್‌’ ಹಿಂದಿ ಅವತರಣಿಕೆ ಇದು. ತಾಹೀರ್‌ ರಾಜ್‌ ಭಾಸಿನ್‌ ಚಿತ್ರದ ಹೀರೋ. ಮೋಷನ್‌ ಪೋಸ್ಟರ್‌ ಥ್ರಿಲ್ಲಿಂಗ್ ಮತ್ತುಫನ್‌ ಫಿಲ್ಡ್‌ ಸಿನಿಮಾದ ಸೂಚನೆ ನೀಡುತ್ತದೆ. ‘ರಶ್ಮಿ ರಾಕೇಟ್‌’ ಚಿತ್ರದ ಯಶಸ್ಸಿನಲ್ಲಿರುವ ನಟಿ ತಾಪ್ಸಿ, “ಆಕಾಶ್‌ ಭಾಟಿಯಾ ನಿರ್ದೇಶನದಲ್ಲಿ ತಯಾರಾಗಿರುವ ಸಿನಿಮಾ ನಿಮಗೆ ಭರಪೂರ ಮನರಂಜನೆ ನೀಡಲಿದೆ” ಎನ್ನುವ ಸಂದೇಶದೊಂದಿಗೆ ಮೋಷನ್‌ ಪೋಸ್ಟರ್‌ ಶೇರ್‌ ಮಾಡಿದ್ದಾರೆ.

‘ಲೂಪ್‌ ಲಪೇಟಾ’ ಚಿತ್ರದಲ್ಲಿ ತಾಪ್ಸಿ ‘ಸವಿ’ ಮತ್ತು ನಟ ತಾಹೀರ್‌ ಆಕೆಯ ಲವರ್‌ ‘ಸತ್ಯ’ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ತಾಪ್ಸಿ, “ಕೆಲವು ಚಿತ್ರಗಳ ಹಿಂದೆ ನಾನೇ ಹೋಗುತ್ತೇನೆ. ಮತ್ತೆ ಕೆಲವು ಸಿನಿಮಾಗಳು ತಾನಾಗಿಯೇ ನನ್ನ ಪಾಲಿಗೆ ಬರುತ್ತವೆ. ಈ ಚಿತ್ರದ ತಾನಾಗಿಯೇ ಒದಗಿಬಂದದ್ದು. ಸದೃಢ ಚಿತ್ರಕಥೆಯೊಂದಿಗೆ ನನ್ನನ್ನು ಅಪ್ರೋಚ್‌ ಮಾಡಿದ ನಿರ್ದೇಶಕರಿಗೆ ಋಣಿಯಾಗಿದ್ದೇನೆ” ಎಂದಿದ್ದಾರೆ. ‘ರನ್‌ ಲೋಲಾ ರನ್‌’ ಜರ್ಮನ್‌ ಸಿನಿಮಾದಲ್ಲಿ ಫ್ರಾಂಕಾ ಪೊಟೆಂಟ್‌ ಮತ್ತು ಮಾರಿಟ್ಜ್‌ ಬ್ಲೀಬ್‌ಟ್ರ್ಯೂ ನಟಿಸಿದ್ದರು. ಪ್ರೇಕ್ಷಕರು ‘ಫ್ರಾಂಕಾ’ ಪಾತ್ರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು. ಹಿಂದಿ ಅವತರಣಿಕೆಯಲ್ಲಿ ತಾಪ್ಸಿ ಈ ಪಾತ್ರ ನಿರ್ವಹಿಸುತ್ತಿದ್ದು, ಇದು ತಮ್ಮ ವೃತ್ತಿ ಬದುಕಿನ ಮಹತ್ವದ ಪಾತ್ರಗಳಲ್ಲೊಂದಾಗಲಿದೆ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here