ಪ್ರೇಮ್‌ ಪಾರಿಜಾ ಮತ್ತು ಅದಾ ಶರ್ಮ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕಮ್ಯಾಂಡೋ’ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಇದು ದೇಶಭಕ್ತಿ ಕಥಾವಸ್ತು. DisneyPlus Hotstarನಲ್ಲಿ ಆಗಸ್ಟ್‌ 11ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

ವಿಪುಲ್‌ ಅಮೃತ್‌ಲಾಲ್‌ ಷಾ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ಕಮ್ಯಾಂಡೋ’ ಹಿಂದಿ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರೇಮ್‌ ಪಾರಿಜಾ ಮತ್ತು ಅದಾ ಶರ್ಮಾ ಸರಣಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದೇಶಭಕ್ತಿಯ ಕಥಾವಸ್ತುವಿನ ಹೈ – ಆಕ್ಟೇನ್‌, ಪವರ್‌ ಪ್ಯಾಕ್ಡ್‌ ಸರಣಿಯಿದು. ಟ್ರೈಲರ್‌ನಲ್ಲಿ ಪಾಕಿಸ್ತಾನದ ಸಹಿವಾಲ್‌ ಜೈಲ್‌ನಲ್ಲಿ ಸಿಲುಕಿಕೊಂಡ ತನ್ನ ಯೋಧ ಸಹೋದರನನ್ನು ಬಿಡಿಸಲು ಪ್ರಾಣದ ಹಂಗು ತೊರೆದು ಹೋಗುವ ಪ್ರೇಮ್‌ಗೆ ಆಕ್ಷನ್‌ ಕ್ವೀನ್‌ನಂತೆ ಅದಾ ಶರ್ಮಾ ಜೊತೆಯಾಗುತ್ತಾರೆ. ತನ್ನ ದೇಶದ ಯೋಧನನ್ನು ಕಾಪಾಡುವ ಸಲುವಾಗಿ ಯಾವುದೇ ಗಡಿ ದಾಟಲು ಸಿದ್ದರಿದ್ದೇವೆ ಎಂದು ಭಾರತದ ಸೇನೆ ಅಧಿಕಾರಿಗಳು ಸಂಭಾಷಣೆ ನಡೆಸುತ್ತಿರುವುದು ಕಾಣುತ್ತದೆ. ನಂತರ ಅದಾ ಶರ್ಮಾ ಮತ್ತು ಪ್ರೇಮ್‌ ಪಾಕಿಸ್ತಾನದ ಗಡಿ ದಾಟಿ ಉಗ್ರರಿಂದ ಯಾವ ರೀತಿ ತನ್ನ ಸಹೋದರನನ್ನು ಬಿಡಿಸಿ ಕರೆತರುತ್ತಾರೆ ಎಂಬುದನ್ನು ಸರಣಿ ತೋರಿಸಲಿದೆ.

ಸರಣಿಯಲ್ಲಿ ಅದಾ ಶರ್ಮಾ ಅವರು ಆಕ್ಷನ್‌ ಮೂಡ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಗಡಿ, ಮತ್ತು ಸಹಿವಾಲ್‌ ಜೈಲಿನಲ್ಲಿ ಸಿಲುಕಿಕೊಂಡ ಖೈದಿಗಳ ನರಳಾಟ, ಪಾಕಿಸ್ತಾನಿ ಯೋಧರು ಬೇರೆ ದೇಶದ ಯೋಧರಿಗೆ ನೀಡುವ ಚಿತ್ರಹಿಂಸೆ ಇದೆಲ್ಲವೂ ಟ್ರೈಲರ್‌ನಲ್ಲಿ ಕಾಣಿಸುತ್ತದೆ. ವೈಭವ್ ತತ್ವವಾದಿ, ಶ್ರೇಯಾ ಸಿಂಗ್ ಚೌಧರಿ, ಅಮಿತ್ ತಿಗ್ಮಾನ್ಶು ಧುಲಿಯಾ, ಸಿಯಾಲ್, ಮುಖೇಶ್ ಛಾಬ್ರಾ, ಇಷ್ಟಿಯಾಕ್ ಖಾನ್ ಸರಣಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿ ತಯಾರಾಗಿರುವ ಸರಣಿ ಆಗಸ್ಟ್‌ 11ರಿಂದ DisneyPlus Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here