ZEE ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಅಮೃತಧಾರೆ’ ಧಾರಾವಾಹಿ ಹಾಡುಗಳಿಗೆ Jukebox ಸಿದ್ಧಪಡಿಸಲಾಗಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದು ಮೊದಲ ಪ್ರಯೋಗ. ರಾಜೇಶ್‌ ನಟರಂಗ ಮತ್ತು ಛಾಯಾ ಸಿಂಗ್‌ ಈ ಧಾರಾವಾಹಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ರಾಜೇಶ್‌ ನಟರಂಗ ಮತ್ತು ಛಾಯಾ ಸಿಂಗ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ಅಮೃತಧಾರೆ’ ZEE ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್‌. ಭಿನ್ನ ಕಥಾಹಂದರ ಮತ್ತು ಆಕರ್ಷಕ ತಾರಾಬಳಗದಿಂದ ಈ ಸೀರಿಯಲ್‌ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸೀರಿಯಲ್‌ನಲ್ಲಿ ಕತೆಗೆ ಪೂರಕವಾಗಿ ಕೆಲವು ಹಾಡುಗಳು ಬಳಕೆಯಾಗುತ್ತವೆ. ಇದೀಗ ಈ ಹಾಡುಗಳಿಗೆ Jukebox ಸಿದ್ಧಪಡಿಸಲಾಗುತ್ತಿದೆ. ಸೀರಿಯಲ್‌ನ ಎಲ್ಲಾ ಹಾಡುಗಳು ಒಂದೇ ಕಡೆ ಸಿಗಲಿವೆ. ZEE ಕನ್ನಡ ವಾಹಿನಿಯ ಈ ಪ್ರಯೋಗ ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊದಲ ಪ್ರಯೋಗ. ವಾಹಿನಿ ಈ ಮಾಹಿತಿಯನ್ನು ತನ್ನ Instagram ಖಾತೆಯಲ್ಲಿ ಹಂಚಿಕೊಂಡಿದೆ.

https://www.instagram.com/reel/CvUbAn3B4re/?utm_source=ig_web_copy_link

ಧಾರಾವಾಹಿಯ ‘ನಾ ಭುವಿಯಂತೆ ಕಾದೆ’, ‘ಏನೋ ನವಿರಾದ ಭಾವ’, ‘ನಿನ್ನವರ ನಗುವಲಿ’, ‘ಒಡನಾಡಿ ಬೇಕಿದೆ’, ‘ಸನಿಹ ಸೆಳೆದಂತೆ’, ‘ಬೆಳಗುವ ದೀಪವು’, ‘ಜೊತೆ ಸಾಗೋ ಕನಸಿದೆ’, ‘ತನ್ನವರ ಬದುಕಲಿ’, ‘ಯಾರೋ ಕರೆದಂತೆ ಹೆಸರ’ ಹಾಡುಗಳು ಇದರಲ್ಲಿ ಲಭ್ಯವಿವೆ. ಸುಧೀಂದ್ರ ಭಾರದ್ವಾಜ್‌, ಚೇತನ್‌ ಸೊಲಂಗಿ ರಚನೆಯ ಈ ಹಾಡುಗಳಿಗೆ ಸುನಾದ್‌ ಗೌತಮ್‌ ಸಂಗೀತ ಸಂಯೋಜಿಸಿದ್ದಾರೆ. ನಿಹಾಲ್‌ ತಾವ್ರೋ, ಐಶ್ವರ್ಯ ರಂಗರಾಜನ್‌, ರಜತ್ ಹೆಗಡೆ ಹಾಡಿದ್ದಾರೆ. ‘ಅಮೃತಧಾರೆ’ ಧಾರಾವಾಹಿಯ ಇತರೆ ಪ್ರಮುಖ ಪಾತ್ರಗಳಲ್ಲಿ ವನಿತಾ ವಾಸು, ಚಿತ್ರಾ ಶೆಣೈ, ಸಿಹಿಕಹಿ ಚಂದ್ರು, ಸಾರಾ ಅಣ್ಣಯ್ಯ, ಶಶಿ, ಅಮೃತಾ ನಾಯಕ್ ನಟಿಸುತ್ತಿದ್ದಾರೆ.

Previous article‘ಕಮ್ಯಾಂಡೋ’ ಟ್ರೈಲರ್‌ | ಅದಾ ಶರ್ಮಾ ಹಿಂದಿ ವೆಬ್‌ ಸರಣಿ DisneyPlus Hotstarನಲ್ಲಿ
Next article

LEAVE A REPLY

Connect with

Please enter your comment!
Please enter your name here